ಕಡ್ಡಾಯ ಮತದಾನಕ್ಕಾಗಿ ಸಾರ್ವಜನಿಕರ ಸಹಿ ಸಂಗ್ರಹಣೆ ಅಭಿಯಾನ


(ಸಂಜೆವಾಣಿ ಪ್ರತಿನಿಧಿಯಿಂದ)
ಕುಕನೂರು, ಏ.12: ಕಡ್ಡಾಯ ಮತ ನಮ್ಮ ಹಕ್ಕು, ನನ್ನ ಮತ ನನ್ನ ಭವಿಷ್ಯ ಎಂದು ತಳಕಲ್ ಗ್ರಾಮದ ಹಜರತ್  ಹುಸೇನ್ ಶಾವಲಿ ಮೌಲಾ ಫಕೀರಸ್ವಾಮಿ ದರಗಾ ಉರುಸಿನಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹಣೆ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ ಅವರು, ಮೇ-10 ರಂದು ಜರುಗುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ತಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ಮತದಾನ ಮಾಡಬೇಕು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನದ ದಿನ ಒಂದು ಹಬ್ಬದ ಸಂಭ್ರಮದ ದಿನ” ಜವಬ್ದಾರಿಯಿಂದ ಹಿಂದೆ ಸರಿಯದೇ ಪ್ರತಿಯೋಬ್ಬರೂ ವೋಟು ಮಾಡೋಣ ದೇಶ ಕಟ್ಟೋಣ ಎಂದರು.
ನಂತರ  ಸಹಾಯಕ ನಿರ್ದೇಶಕ ವೆಂಕಟೇಶ್ ವಂದಾಲ್ ಅವರು, ಎಲ್ಲರೂ ಪ್ರಜ್ಞಾವಂತರಾಗಿ ಮತ ಚಲಾಯಿಸೋಣ, ಮತ ಹಾಕುವುದು ನಮ್ಮ ಅಧಿಕಾರ ಯಾರು ಮಾಡಬೇಡಿ ತಾತ್ಸಾರ, 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವ ಯಶಸ್ವಿಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಳಕಲ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆನಂದ, ಶೇಕಸಾಬ್, ಕುಕನೂರ ಪೋಲೀಸ್ ನೀರೀಕ್ಷಕರಾದ ಡಾಕೇಶ್ ಯು, ಬೇವೂರ ಪೋಲೀಸ್ ನೀರೀಕ್ಷಕರಾದ ಶ್ರೀಮತಿ ಶೀಲಾ ಮೂಗಪ್ಪನವರ್, ತಾಲೂಕ ಐ.ಇ.ಸಿ ಸಂಯೋಜಕರು ಹಾಗೂ ಗ್ರಾಮ ಪಂಚಾಯತಿ  ಸಿಬ್ಬಂದಿ ವರ್ಗದವರು ಸಾವಿರಾರು ಭಕ್ತಾದಿಗಳು ಹಾಜರಿದ್ದರು.