ಕಡ್ಡಾಯ ಕೋವ್ಯಾಕ್ಸಿನ್ ಲಸಿಕೆ ಹಾಕಿಸಿ: ಇಂಗಳೆ

ಬಾದಾಮಿ, ಮಾ 20: ಕೊರೊನಾ ವೈರಸ್ ಹರಡದಂತೆ ಸಾರ್ವಜನಿಕರಿಗೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಪ್ರತಿ ದಿನ ಹತ್ತರಂತೆ ಕೊವ್ಯಾಕ್ಸಿನ್ ಲಸಿಕೆ ಹಾಕಿಸುವ ಮೂಲಕ ಜವಾಬ್ದಾರಿಯನ್ನು ಮೆರೆಯಬೇಕು ಎಂದು ತಹಸೀಲ್ದಾರ್ ಸುಹಾಸ್ ಇಂಗಳೆ ಹೇಳಿದರು.
ಅವರು ನಗರದ ಪಿರ್ಕಾಡ ಬ್ಯಾಂಕ್ ಆವರಣದಲ್ಲಿ ತಾಲೂಕ ಆಡಳಿತ, ಆರೋಗ್ಯ, ಪುರಸಭೆ, ಶಿಶು ಅಭಿವೃದ್ಧಿ ಸೇರಿದಂತೆ ಇತರೆ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಕೋವ್ಯಾಕ್ಸಿನೇಷನ್ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಪುರಸಭೆ ಅಧ್ಯಕ್ಷ ಮಂಜುನಾಥ ಹೊಸಮನಿ ಮಾತನಾಡಿ ಪ್ರತಿಯೊಬ್ಬರೂ ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಳ್ಳಬೇಕು. ಇತ್ತೀಚೆಗೆ ಕೊರೊನಾ 2ನೇ ಅಲೆಯ ಇದ್ದು, ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡು ಕೋವಿಡ್‍ನಿಂದ ರಕ್ಷಣೆ ಪಡೆಯಬೇಕು ಎಂದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ನಾಗರಾಜ ಕಾಚೆಟ್ಟಿ, ಉಪಾಧ್ಯಕ್ಷೆ ರಾಮವ್ವ ಪೂಜಾರ, ಪುರಸಭೆ ಸದಸ್ಯರಾದ ಶಂಕರ ಕನಕಗಿರಿ, ಅಶೋಕ ಯಲಿಗಾರ, ಮಾಂತೇಶ ತಳವಾರ, ಮುಖ್ಯಾಧಿಕಾರಿ ಜ್ಯೋತಿ ಗಿರೀಶ, ಪ್ರೋಬೇಷನರಿ ಅಧಿಕಾರಿ ಅರ್ಜುನ ವಡೆಯರ್, ಇಒ ಡಾ. ಪುಣಿತ್, ತಾಲೂಕ ಆರೋಗ್ಯಾಧಿಕಾರಿ ಡಾ. ಎಂ.ಬಿ.ಪಾಟೀಲ, ಸಿಡಿಪಿಒ ಅಣ್ಣಪೂರ್ಣ ಕುಬಕಡ್ಡಿ, ಲಲಿತಾ ಮಿಟ್ಟಲಕೋಡ, ರವಿಗೌಡ ಹೊತಗಿಗೌಡ್ರ, ಶೇಖರಯ್ಯ ಹಿರೇಮಠ, ಭೀಮಸಿ ಕಂಬಾರ, ಕಂದಾಯ ನಿರೀಕ್ಷಕ ಶಿವನಗೌಡ ದ್ಯಾಪೂರ, ಪುರಸಭೆ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಪುರಸಭೆ ಪೌರಕಾರ್ಮಿಕರು, ಆರೋಗ್ಯ ಸಿಬ್ಬಂದಿ ಸೇರಿದಂತೆ ಇತರರಿದ್ದರು.
ಪಿಕಾರ್ಡ ಬ್ಯಾಂಕ್ ಆವರಣದಿಂದ ಆರಂಭಗೊಂಡ ಜಾಗೃತಿ ಜಾಥಾ ನಗರದ ವಿವಿಧ ಗಲ್ಲಿ, ಓಣಿ, ನಗರಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿತು.