ಕಡ್ಡಾಯ ಕನ್ನಡ ನಾಮಫಲಕ ಅಳವಡಿಸಲು ಜೈ ಕನ್ನಡಿಗರ ಸೇನೆ ಮನವಿ

ಕಲಬುರಗಿ, ಡಿ.28: ಜಿಲ್ಲೆಯಾದ್ಯಂತ ಅಂಗಡಿ ಮುಗ್ಗಟು, ಸಂಘ ಸಂಸ್ಥೆ ಹಾಗೂ ಶಾಲೆ ಕಾಲೇಜುಗಳ ನಾಮ ಫಲಕವನ್ನು ಕಡ್ಡಾಯವಾಗಿ ಕನ್ನಡದಲ್ಲಿ ಅಳವಡಿಸಲು ಆದೇಶಿಸಲು ಜಿಲ್ಲಾಡಳಿತಕ್ಕೆ ಜೈ ಕನ್ನಡಿಗರ ಸೇನೆ ಮನವಿ ಮಾಡಿದೆ.
ಜಿಲ್ಲೆಯಾದ್ಯಂತ ಅಂಗಡಿ ಮುಗಟ್ಟು, ಸಂಘ ಸಂಸ್ಥೆ, ಹಾಗೂ ಶಾಲಾ ಕಾಲೇಜುಗಳ ನಾಮ ಫಲಕಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತದೆ ಕಡ್ಡಾಯವಾಗಿ ಕನ್ನಡದಲ್ಲಿ ನಾಮ ಫಲಕವನ್ನು ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಸೇನೆ ಅಧ್ಯಕ್ಷ ದತ್ತು ಭಾಸಗಿ ಅವರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕನ್ನಡ ನಾಡು ನುಡಿ ಮತ್ತು ನೆಲ, ಜಲ ಗೌರವಿಸಬೇಕು, ಕನ್ನಡ ಕಡೆಗಣನೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು, ಆಗ್ರಹಿಸಿದ್ದಾರೆ.
ಜೈ ಕನ್ನಡಿಗರ ಸೇನೆ ಸಂಸ್ಥಾಪಕ ಅಧ್ಯಕ್ಷರಾದ ದತ್ತು ಹೆಚ್, ಭಾಸಗಿ, ರಾಮಾ ಪೂಜಾರಿ, ಅನೀಲ ತಳವಾರ, ಮಲ್ಲು ಆಲಗೂಡ, ಆನಂದ ಕೊಳ್ಳುರ, ಹಣಮಂತ ಗಂಜ ಇನ್ನೂ ಹಲವಾರು ಕಾರ್ಯಕರ್ತಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.