ಕಡ್ಡಾಯ ಕನ್ನಡ ನಾಮಫಲಕ ಅಳವಡಿಸುವಂತೆ ಜನ ಜಾಗೃತಿ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.06: ಕರ್ನಾಟಕ ರಕ್ಷಣಾ ವೇದಿಕೆ, ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ದಿನಾಂಕ:05.03.2024ರಂದು ಬಳ್ಳಾರಿ ನಗರದಲ್ಲಿ ಕರ್ನಾಟಕ ಸರ್ಕಾರದ ಆದೇಶದಂತೆ ಕಡ್ಡಾಯ ಕನ್ನಡ ನಾಮಫಲಕ ಅಳವಡಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಕರವೇ ಬಳ್ಳಾರಿ ಜಿಲ್ಲಾ ಘಟಕದಿಂದ ನೂರಾರು ಸಂಖ್ಯೆಯಲ್ಲಿ ಕರವೇ ಪದಾಧಿಕಾರಿಗಳು ಸೇರಿ ಪ್ರತಿಭಟನೆಯನ್ನು ಮಾಡಲಾಯಿತು.
ಶೇಕಡ 60ರಷ್ಟು ಕನ್ನಡ ಇಲ್ಲದ ನಾಮಫಲಕಗಳಿಗೆ ಮಸಿ ಬಳಿದು, ಕನ್ನಡ ನಾಮಫಲಕ ಕಡ್ಡಾಯ ಹಾಕುವಂತೆ ಬಳ್ಳಾರಿ ನಗರದ ಕೇಂದ್ರ ಕಛೇರಿಯಿಂದ ರಾಯಲ್ ಸರ್ಕಲ್ ಮುಖಾಂತರ, ಬೆಂಗಳೂರು ರಸ್ತೆ, ಬ್ರೂಸ್‌ಪೇಟೆ, ಮೋರ್ತಿ ಸರ್ಕಲ್‌ನವರೆಗೆ ಸುಮಾರು 2000 ಅಂಗಡಿ ಮುಂಗಟ್ಟುಗಳು ವರ್ತಕರಿಗೆ ಜಾಥ ಮೂಲಕ ಜಾಗೃತಿ ಆಂದೋಲನ, ತಿಳುವಳಿಕೆ ಹಾಗೂ ಎಚ್ಚರಿಕೆಯ ಪ್ರತಿಭಟನೆಯ್ನನು ಕರ್ನಾಟಕ ರಕ್ಷಣಾ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ರಾಜ್ಯ ಉಪಾಧ್ಯಕ್ಷರಾದ ಚಾನಾಳ್ ಶೇಖರ್ ಇವರ ಹಾಗೂ ಜಿಲ್ಲಾಧ್ಯಕ್ಷರಾದ ಡಿ.ಕಗ್ಗಲ್ ಅಂಗಡಿ ಶಂಕರ್ ಇವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು.
   ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಕೆ.ಎಂ.ಶಿವಕುಮಾರ್, ಶಬರಿರವಿ, ಹುಬ್ಬಳ್ಳಿರಾಜು, ಅನಂದಗೌಡ ತಗ್ಗಿನಬೂದಿಹಾಳ್, ಎನ್.ಚಂದ್ರಮೋಹನ್, ಶ್ರೀಶೈಲ, ಸಂಡೂರು ತಾಲ್ಲೂಕು ಅಧ್ಯಕ್ಷರಾದ ಸತ್ಯನಾರಾಯಣ ಮಾಸ್ತಿ, ಕಂಪ್ಲಿ ತಾಲ್ಲೂಕು ಅಧ್ಯಕ್ಷರಾದ ಬಳೆ ಮಲ್ಲಿಕಾರ್ಜುನ, ಕುಡತಿನಿ ಜಂಗ್ಲಿಸಾಬ್, ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಹೇಶ್, ಮೋಕಾ ಪೊಂಪನಗೌಡ, ಚಾಂದ್‌ಭಾಷ, ವನ್ನನಗೌಡ, ಸೋಮಶೇಖರ್, ಮಸ್ಕಿ ಮಹಾಂತೇಶ್, ಮಲ್ಲಿಕಾರ್ಜುನ ಚಾನಾಳ್, ಮುಂತಾದವರು ಉಪಸ್ಥಿತರಿದ್ದರು,