ಕಡ್ಡಾಯವಾಗಿ ಮಾಸ್ಕ್ ಧರಿಸಲು ಕರೆ

ಗಂಗಾವತಿ ಮಾ 28 : ಮನೆಯಿಂದ ಹೊರಗಡೆ ಬರುವಾಗ ಕಡ್ಡಾಯವಾಗಿ ಪ್ರತಿಯೊಬ್ಬರು ಮುಖಕ್ಕೆ ಮಾಸ್ಕ್ ಧರಿಸಬೇಕು ಎಂದು ನಗರ ಸಂಚಾರಿ ಠಾಣೆಯ ಪಿಎಸ್ಐ ಪುಂಡಪ್ಪ ಹೇಳಿದರು.
ನಗರದ ಪೊಲೀಸ್ ಠಾಣಾ ಮುಂಭಾಗದ ಪ್ರಮುಖ ರಸ್ತೆಯಲ್ಲಿ ಮಾಸ್ಕ್ ಧರಿಸಿದೇ ಓಡಾಡುವವರಿಗೆ ದಂಡ ವಿಧಿಸುವ ಮೂಲಕ ಕೊರೊನಾ ಬಗ್ಗೆ ಜಾಗೃತಿಯನ್ನು ಮೂಡಿಸಿ ಅವರು ಮಾತನಾಡಿದರು.
ಈಗಾಗಲೇ ನಗರದಲ್ಲಿ ಕೊರೊನಾ 2ನೇ ಅಲೆ ಶುರುವಾಗಿದ್ದು, ಸಾರ್ವಜನಿಕರು ಹೊರಗಡೆ ಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಜೊತೆಗೆ ಸರ್ಕಾರದ ನಿಯಮಗಳನ್ನು ಪಾಲನೆ ಮಾಡಬೇಕು. ಒಂದು ವೇಳೆ ಮಾಸ್ಕ್ ಧರಿಸದೇ ಗಾಡಿ ಚಲಾಯಿಸಿದರೇ ಅಂತಹವರಿಗೆ 100 ರೂ ದಂಡವನ್ನು ವಿಧಿಸಲಾಗುವುದು ಎಂದರು.
ಈ ವೇಳೆ ಪೊಲೀಸ್ ಸಿಬ್ಬಂದಿಗಳಾದ ಪ್ರಭುಗೌಡ ಹಿರೇಗೌಡ, ಶರಣಪ್ಪ ಮೇಟಿ, ಪರಶುರಾಮ, ಶರಣಪ್ಪ ಸೇರಿದಂತೆ ಇತರರು ಇದ್ದರು.