
ಯುವಜನತೆ ತಮ್ಮ ಮುಂದಿನ ಭವಿಷ್ಯ ಹಾಗೂ ದೇಶದ ಏಳಿಗೆಯತ್ತ ಗಮನ ಹರಿಸಿ ಮತಚಲಾವಣೆ ಮಾಡುವ ಮೂಲಕ ಉತ್ತಮಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೆಕೆಂದು ಖ್ಯಾತ ಉದ್ಯಮಿ ಗುರುಶರಣ ಲಾವಣಿ ಜಿಡಗಾ ಹೇಳಿದರು.
ಅವರು ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಡ್ಡಾಯವಾಗಿ ಮತದಾನ ಮಾಡಿ ಎಂಬ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ನಾಗರಿಕನುತನ್ನನ್ನು ಆಳುವ ಪ್ರತಿನಿಧಿಯನ್ನು ಆಯ್ಕೆಮಾಡಲು ಇರುವ ವ್ಯವಸ್ಥೆಯೇ ಮತದಾನ.ತಮ್ಮ ಒಳಿತನ್ನು ಬಯಸುವ ಜನಪರ ನಾಯಕನನ್ನು ತಾವೆ ಆಯ್ಕೆ ಮಾಡಿ ಕಳಿಸಲು ಮತದಾನ ಎಂಬ ಪ್ರಕ್ರಿಯೆ ನಡೆಯುತ್ತದೆ. ನಮ್ಮಲ್ಲಿಯುವಜನತೆ ಹೆಚ್ಚಾಗಿದ್ದು, ಯುವದೇಶವಾಗಿದೆ.ಸುಭದ್ರ ಪ್ರಜಾಪ್ರಭುತ್ವದಲ್ಲಿ ಸರ್ವರೂ ಪಾಲ್ಗೋಂಡುಉತ್ತಮ ಸಮಾಜಕಟ್ಟಲು ಮಹತ್ತರವಾದ ಮತದಾನದ ಹಕ್ಕನ್ನು ಚಲಾಯಿಸಬೇಕು.ನಮ್ಮ ಮತಯಾರಿಗೆಚಲಾವಣೆಯಾಗಿದೆಎಂಬುದನ್ನು ತಿಳಿದುಕೊಳ್ಳಲು ವಿವಿ ಪ್ಯಾಟ್ ಸಹಾಯಕವಾಗಿದೆಎಂದು ಗುರುಶರಣ ಲಾವಣಿ ಜಿಡಗಾ ಹೇಳಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಸೇರಿದಂತೆಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.