ಕಡ್ಡಾಯವಾಗಿ ಮತದಾನ ಮಾಡಿ : ಕಾಳಗಿ ಇ. ಓ ಕಿರಣ ಪಾಟೀಲ ಕರೆ

ಕಲಬುರಗಿ:ಏ.3:ಸ್ವೀಪ್ ಅಭಿಯಾನ ಮತ್ತು ಉದ್ಯೋಗ ಖಾತರಿ ಜಾಗೃತಿ ಕಾರ್ಯಕ್ರಮವನ್ನೂ ಇಂದು ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕು ಪಂಚಾಯತ ವ್ಯಾಪ್ತಿಯಲ್ಲಿ ಬರುವ ಪೇಠಶಿರೂರ್ ಗ್ರಾಮ ಪಂಚಾಯತಿಯ ಬೆಣ್ಣೂರು ಕೆ ಗ್ರಾಮದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಕಿರಣ ಪಾಟೀಲ ಅವರು ಭೇಟಿ ನೀಡಿ ಕೂಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ಕರೆ ನೀಡಿದರು.

ಕಾರ್ಯ ನಿರ್ವಾಹಕ ಅಧಿಕಾರಿಗಳು ಮಾತನಾಡಿ, ಮತದಾನ ನಮ್ಮ ಹಕ್ಕು, ಅದು ನಮಗೆ ಪ್ರತಿ ಐದು ವರ್ಷಗಳಿಗೊಮ್ಮೆ ದೊರೆಯುತ್ತದೆ. ಉತ್ತಮ ನಾಯಕರನ್ನು ಆರಿಸುವ ಹಕ್ಕು, ಪ್ರತಿಯೊಬ್ಬ ನಾಯಕನದಾಗಿದೆ. ನಮ್ಮ ದೇಶದ ಮುಂದಿನ ಭವಿಷ್ಯ ನಮ್ಮ ಕೈಯಲ್ಲಿ ಇದೆ. ತಾವು ಮತದಾನ ಮಾಡಿ ಇತರರಿಗೂ ಕೂಡ ಮತದಾನ ಮಾಡುವಂತೆ ತಿಳಿ ಹೇಳಬೇಕು. 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಗೆ ಹೋಗಿ ಮತದಾನ ಮಾಡಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು. ಜನರು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಅಭಿವೃದ್ಧಿಗಾಗಿ ಶ್ರಮಿಸುವವರಿಗೆ ತಮ್ಮ ಮತ ನೀಡುವಂತೆ ಹೇಳಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಬು ಸಣ್ಣಕಲ, Iಇಅ ಸಂಯೋಜಕಿ ಜ್ಯೋತಿ ಸಾಗರ , ಃಈಖಿ ಸಂಗಣ್ಣ, ಉಞm ಮಹಾಲಕ್ಷ್ಮಿ , ಕಾಯಕ ಬಂಧುಗಳು, ಕೂಲಿ ಕಾರ್ಮಿಕರು ಇದ್ದರು.