ಕಡ್ಡಾಯವಾಗಿ ಪ್ರತಿಯೊಬ್ಬ ಪ್ರಜೆಯೂ ಮತ ಚಲಾಯಿಸಿ:ಮಂಗಲ ಎಂ.ಯೋಗೀಶ್

ಮಂಡ್ಯ: ಮೇ.09:- ಸಂವಿಧಾನದ ಆಶಯಗಳನ್ನು ಈಡೇರಿಸಲು ಕಡ್ಡಾಯವಾಗಿ ಪ್ರತಿಯೊಬ್ಬ ಪ್ರಜೆಯೂ ಮತ ಚಲಾಯಿಸಬೇಕು ಎಂದು ಮಮತೆಯ ಮಡಿಲು ಮುಖ್ಯಸ್ಥ ಮಂಗಲ ಎಂ.ಯೋಗೀಶ್ ತಿಳಿಸಿದರು.
ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್‍ಸಮಿತಿ ವತಿಯಿಂದ ಮಂಡ್ಯ ನಗರದ ಮಿಮ್ಸ್ ಆವರಣದ ನಿತ್ಯ ಅನ್ನದಾಸೋಹ ಅಂಗಳದಲ್ಲಿ ಮತದಾರರ ಜಾಗೃತಿ ಮೂಡಿಸುವ ಕರ?ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಭಾರತದ ನಾಗರೀಕನು ಪ್ರಜಾಪ್ರಭುತ್ವದ ಉಳಿವಿಗಾಗಿ ಸಂಸದೀಯ ನಡವಳಿಕೆಗಳನ್ನು ಅರ್ಥೈಸಿಕೊಂಡು ಕಡ್ಡಾಯವಾಗಿ ಮತದಾನ ಮಾಡುವುದು ತೀರಾ ಅವಶ್ಯಕ ಎನಿಸಿದೆ.ನಾಗರೀಕ ಜವಾಬ್ದಾರಿಗಳನ್ನು ಹೆಚ್ಚಿಸುವ ಜನ ಕಲ್ಯಾಣಕ್ಕಾಗಿ ಪಣತೊಡುವ ಜನಪ್ರತಿನಿಧಿಗಳ ಆಯ್ಕೆ ನಾಗರೀಕರ ಮೇಲಿದೆ ಎಂದು ತಿಳಿಸಿದರು.
ಜಾತ್ಯತೀತ ಸಮಾಜವಾದಿ ಪ್ರಜಾಪ್ರಭುತ್ವದ ಉಳಿವು ಸಂವಿಧಾನದ ಉಳಿವಾಗಿದೆ. ಈ ನಿಟ್ಟಿನಲ್ಲಿ ಕಡ್ಡಾಯವಾಗಿ ಪ್ರತಿಯೊಬ್ಬರು ಮೇ, 10 ರಂದು ನಡೆಯಲಿರುವ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಬೇಕು ಎಂದು ತಿಳಿಸಿದರು.
ನಗರಸಭೆಯ ಸಮುದಾಯ ಸಂಯೋಜನಾಧಿಕಾರಿ ತುಳಸೀದಾಸ್ ಮತದಾನದ ಚುನಾವಣಾ ಪ್ರತಿಜ್ಞೆಯನ್ನು ಬೋಧನೆ ಮಾಡಿದರು.
ಮಂಡ್ಯ ಜಿಲ್ಲಾ ಬೀದಿ ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಬಸವರಾಜ್ ಸಂತೆಕಸಲಗೆರೆ ನೇತೃತ್ವದಲ್ಲಿ ಮತದಾನದಿಂದ ಆಗುವ ಪ್ರಯೋಜನಗಳು ಮತ್ತು ಕಡ್ಡಾಯ ಮತದಾನ ಮಾಡುವುದು ಅನಿವಾರ?ಯ ಎಂಬ ಜಾಗೃತಿ ಮೂಡಿಸುವ ರೂಪಕಗಳು, ಗೀತೆಗಳು ಮತ್ತು ಮಾತುಗಳನ್ನು ಈ ಸಂದರ್ಭದಲ್ಲಿ ಸಾಧರಪಡಿಸಿದರು.
ಕಲಾವಿದರುಗಳಾದ ವೈರಮುಡಿ, ಶೇಖರ್ ಇತರರು ಇದ್ದರು.