ಕಡ್ಡಾಯವಾಗಿ ಜನನ-ಮರಣ ಘಟನೆಗಳನ್ನು ಇ-ಜನ್ಮ ತಂತ್ರಾಂಶದಲ್ಲಿ ದಾಖಲಿಸಲು ಡಿಸಿ ಸೂಚನೆ

ವಿಜಯಪುರ: ಜು.6:ಗ್ರಾಮೀಣ, ಪಟ್ಟಣ ಹಾಗೂ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿನ ಪ್ರತಿ ಜನನ-ಮರಣ ಘಟನೆಗಳನ್ನು ಕಡ್ಡಾಯವಾಗಿ ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನ್ನವರ ಅವರು ಸೂಚನೆ ನೀಡಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನನ-ಮರಣ ನೋಂದಣಿ ಮತ್ತು ಇ-ಜನ್ಮ ತಂತ್ರಾಂಶದ ಕುರಿತ ನಾಗರೀಕ ನೋಂದಣಿ ಪದ್ಧತಿಯಡಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಗ್ರಾಮ ಮಟ್ಟದ ನೋಂದಣಾಧಿಕಾರಿಗಳಾದ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಆಯಾ ಆರೋಗ್ಯ ಸಂಸ್ಥೆಯ ವೈದ್ಯಾಧಿಕಾರಿಗಳು ಉಪ ನೋಂದಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಪ್ರತಿಯೊಂದು ಜನನ-ಮರಣ ಘಟನೆಗಳನ್ನು ಆದ್ಯತೆಯ ಮೇರೆಗೆ ನಿಗದಿತ ಅವಧಿಯಾದ 21 ದಿವಸಗಳೊಳಗಾಗಿ ನೋಂದಣಿ ಮಾಡಬೇಕು.
ಪಟ್ಟಣ ಪ್ರದೇಶಗಳ ಮನೆಗಳಲ್ಲಿ ಸಂಭವಿಸುವ ಜನನ ಮತ್ತು ಮರಣ ಘಟನೆಗಳನ್ನು ಆ ವ್ಯಾಪ್ತಿಯ ಪುರಸಭೆ, ಪಟ್ಟಣ ಪಂಚಾಯತಿ ಹಾಗೂ ನಗರ ಸಭೆಯಲ್ಲಿ ದಾಖಲಿಸಬೇಕು.ಪಟ್ಟಣ ಪ್ರದೇಶದ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಉಪ ನೋಂದಣಾಧಿಕಾರಿಗಳೂ ಆದ ವೈದ್ಯಾಧಿಕಾರಿಗಳು,ಪಟ್ಟಣ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಘಟಿಸುವ ಜನನ ಮರಣ ದಾಖಲೆಗಳನ್ನು ಆಯಾ ಪ್ರದೇಶದ ಜನನಕ್ಕೆ ನಮೂನೆ-1 ಹಾಗೂ ಮರಣ ದಾಖಲೆಗೆ ನಮೂನೆ-2ಅನ್ನು ಭರ್ತಿ ಮಾಡಿ,ಸಂಬಂಧಿಸಿದ ಪ್ರದೇಶ ವ್ಯಾಪ್ತಿಯ ನೋಂದಣಾಧಿಕಾರಿಗಳಿಗೆ ಸಲ್ಲಿಸಬೇಕು.
ಜಿಲ್ಲೆಯಲ್ಲಿ ಜನವರಿ 2023 ರಿಂದ ಜೂನ್-2023ರವರಗೆ ಗ್ರಾಮೀಣ ಹಾಗೂ ನಗರ ಪ್ರದೇಶವೂ ಸೇರಿದಂತೆ 22,275 ಜನನಕ್ಕೆ ಸಂಬಂಧಿಸಿದ ನೋಂದಣಿಯಾಗಿದ್ದು, ಇದೇ ಅವಧಿಯಲ್ಲಿ ನಗರ ಪ್ರದೇಶವೂ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ 7,588 ಮರಣ ನೋಂದಣಿ ವಿವರ ದಾಖಲಾಗಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರ ಹಾಗೂ ಜಿಲ್ಲಾ ಮಟ್ಟದ ಜನನ-ಮರಣ ಸಮನ್ವಯ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಅಲ್ತಾಫ್ ಅಹ್ಮದ ಮಣಿಯಾರ ಅವರು ಸಭೆಗೆ ಮಾಹಿತಿ ನೀಡಿದರು.
ನೈಜ ಜನನ ಮರಣ ಪ್ರಮಾಣ ಪತ್ರಗಳು ನೋಂದಣಿಯಾಗುವಂತೆ ಸೂಕ್ತ ನಿಗಾ ವಹಿಸುವಂತೆಯೂ ಸಹ ಅವರು ಸೂಚನೆ ನೀಡಿದರು. ಪಟ್ಟಣ ಪ್ರದೇಶದ ಸರ್ಕಾರಿ ಆರೋಗ್ಯ ಸಂಸ್ಥೆಗಳು ದಿನಾಂಕ: 15-8-2010 ರಿಂದ ಉಪ ನೋಂದಣಿ ಘಟಕಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ದಿನಾಂಕ: 15-08-2010ರಿಂದ 31-12-2021ರವರೆಗಿನ ನಮೂನೆಯ ಕಾನೂನು ಭಾಗವನ್ನು ತಮ್ಮ ವ್ಯಾಪ್ತಿಯ ತಾಲ್ಲೂಕಿನ ತಹಶೀಲದಾರ ಅವರಿಗೆ ಹಸ್ತಾಂತರಿಸಬೇಕು. ದಿನಾಂಕ:01-04-2015ರಿಂದ ಇ- ಜನ್ಮ ತಂತ್ರಾಂಶದಲ್ಲಿ ಜನನ-ಮರಣ ಘಟನೆಗಳು ದಾಖಲಾಗುತ್ತಿದ್ದು ಈ ಮುಂಚಿನ 31-12-2014ರವರೆಗೆ ಹಾಗೂ ಅದರ ಹಿಂದಿನ ಘಟನೆಗಳನ್ನು ಗಣಕೀಕೃತಗೊಳಿಸಲು ಬೆಂಗಳೂರಿನ ಕಿಯೋನಿಕ್ಸ್ ಸಂಸ್ಥೆಯವರು ನಿರ್ವಹಿಸುತ್ತಿದ್ದು, ಜಿಲ್ಲೆಯ ತಾಲೂಕಿನ ತಹಶೀಲದಾರರು ಸಾಂಖ್ಯಿಕ ನಿರೀಕ್ಷಕರು ಸಂಬಂಧಿಸಿದ ಅಧಿಕಾರಿ ಮಾಹಿತಿಯನ್ನು ಸದರಿ ಸಂಸ್ಥೆಗೆ ನೀಡಿ, ಕೈಗೋಂಡ ಕ್ರಮದ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದರು.
ನÀಮೂನೆಗಳನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಬೇಕು, ಯಾವುದೇ ಮಾಹಿತಿ ಕೈಬಿಡಬಾರದು. ನೋಂದಣಿ ಹಾಗೂ ಉಪ ನೋಂದಣಾಧಿಕಾರಿಗಳು ಗ್ರಾಮಾಂತರ ಪ್ರದೇಶದ ಮಾಹಿತಿಯನ್ನು ಸಂಬಂಧಿಸಿದ ತಹಶೀಲದಾರ ಅವರಿಗೆ ಪ್ರತಿ ತಿಂಗಳ ಐದನೇ ದಿನಾಂಕದೊಳಗೆ ಹಾಗೂ ಪಟ್ಟನ ಪ್ರದೇಶದ ನೋಂದಣಿ ಮಾಹಿತಿಯನ್ನು 10ನೇ ದಿನಾಂಕದೊಳಗೆ ಸಲ್ ಅಂಕಿ ಸಂಖ್ಯೆ ಮಾಹಿತಿ ಸಲ್ಲಿಸಬೇಕು ಎಂದು ಹೇಳಿದರು. ಪ್ರತಿ ತಂಗಳು ಜಿಲ್ಲೆಯ ಎಲ್ಲಾ ತಹಶೀಲದಾರರು ತಮ್ಮ ಅಧ್ಯಕ್ಷತೆಯಲ್ಲಿ ತಾಲೂಕ ಮಟ್ಟದ ಜನನ-ಮರಣ ಸಮನ್ವಯ ಸಮಿತಿ ಸಭೆಯನ್ನು ನಿಯಮಿತವಾಗಿ ಜರಿಗಿಸಬೇಕೆಂದು ಸೂಚಿಸಿದರು. ಅದರಂತೆ, ಜನನ ಮತ್ತು ಮರಣ ನೋಂದಣಿಯ ಘಟಕಗಳನ್ನು ಕಾಲಕಾಲಕ್ಕೆ ತಪಾಸಣೆ ಮಾಡಿ ನಿಗದಿತ ಅವಧಿಯಲ್ಲಿ ವರದಿ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ವಿಜಯಪುರ ಉಪ ವಿಭಾಗಾಧಿಕಾರಿಗಳಾದ ಕ್ಯಾ.ಮಹೇಶ ಮಾಲಗಿತ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಕೆ.ಕೆ.ಚವ್ಹಾಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್ ಸಿ ಎಚ್ ಅಧಿಕಾರಿಗಳಾದ ಡಾ.ಕೆ.ಡಿ.ಗುಂಡಬಾವಡಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.