ಕಡ್ಡಾಯವಾಗಿ ಆಸ್ತಿಗಳ ಮಾಲೀಕರು ಆಸ್ತಿಗಳ ವಿವರಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಲು ಸೂಚನೆ

ಕಲಬುರಗಿ.ಏ.27:ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ 55 ವಾರ್ಡ್‍ಗಳ ಆಸ್ತಿದಾರರು ಕಲಬುರಗಿ ಮಹಾನಗರ ಪಾಲಿಕೆ ಕಚೇರಿಗೆ ತಮ್ಮ ಆಸ್ತಿಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ ತಮ್ಮ ಆಸ್ತಿಯ ಸಂಪೂರ್ಣ ವಿವರವನ್ನು ಇ-ಆಸ್ತಿ (ಇ-ತಂತ್ರಾಂಶದಲ್ಲಿ) ನೋಂದಾಯಿಸಿಕೊಂಡು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಬೇಕೆಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆಗಳ ನಿರ್ದೇಶನದಂತೆ ಎಂ.ಅರ್.ಸಿ. ಸಂಸ್ಥೆ ಅಭಿವೃದ್ಧಿಪಡಿಸಿರುವ ಇ-ಆಸ್ತಿ (ಇ-ತಂತ್ರಾಂಶ)ಯಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇರುವ ಕಟ್ಟಡಗಳು ಹಾಗೂ ಖುಲ್ಲಾ ನಿವೇಶನಗಳನ್ನು, ಇ-ಆಸ್ತಿಯಲ್ಲಿ ನೊಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ.
ಇ-ಆಸ್ತಿ ತಂತ್ರಾಂಶದಲ್ಲಿ ನೋಂದಣಿಗಾಗಿ ಪಾಲಿಕೆಗೆ ಒದಗಿಸಬೇಕಾದ ದಾಖಲೆಗಳ ವಿವರ ಇಂತಿದೆ. ಖರೀದಿ ಅಥವಾ ದಾನ ಪತ್ರ /ಕಿಬಾಲಾ/ಹಕ್ಕುಪತ್ರ (ನೋಂದಾಯಿತ) ಜಿರಾಕ್ಸ್ ಪ್ರತಿಗಳು, ಕಟ್ಟಡವಿದ್ದಲ್ಲಿ, ಕಟ್ಟಡದ ಅನುಮತಿ ಪತ್ರ ಮತ್ತು ನಕ್ಷೆ, ಕಟ್ಟಡ/ಖುಲ್ಲಾ ನಿವೇಶನ, ಆಸ್ತಿಯ ಮಾಲೀಕರು (ಆ ಸ್ಥಳದ ಅಥವಾ ಅದರ ಮುಂಭಾಗದಲ್ಲಿ) ಸ್ವತಃ ನಿಂತು ಭಾವಚಿತ್ರ ತೆÀಗೆದುಕೊಂಡಿರುವ ಪ್ರತಿ, ಪಾಲಿಕೆಯಿಂದ ಪಡೆದ (ಹಳೆ ನಮೂನೆಯ), (ಹೊಸ ನಮೂನೆಯ) ಖಾತಾಗಳಿದ್ದರೆ ಅವುಗಳ ಪ್ರತಿ, ಆಸ್ತಿ ಮಾಲೀಕರ ಪಾಸ್‍ಪೋರ್ಟ್ ಸೈಜಿನ ಫೋಟೋ, ಅನುಮೋದಿತ ವಿನ್ಯಾಸದ ಪ್ರತಿ, ಎನ್.ಎ. ಪ್ರತಿ, ಒಂದು ವೇಳೆ ಹಳೆಯ ಕಟ್ಟಡಗಳು/ಗ್ರಾಮಠಾಣದಲ್ಲಿ ಬರುವ ಕಟ್ಟಡಗಳು/ ನಿವೇಶನಗಳು ಇದ್ದಲ್ಲಿ ಸಿ.ಟಿ.ಎಸ್. ದಾಖಲೆಗಳ ಪ್ರತಿ ಲಗತ್ತಿಸಬೇಕು. ಆಸ್ತಿ ಮಾಲೀಕರ ಗುರುತಿನ ಚೀಟಿ (ಐಡಿ), ಆಸ್ತಿ ಇರುವ ಜಿ.ಪಿ.ಎಸ್. ಲೋಕೇಶನ್ ( ಲ್ಯಾಟಿಟ್ಯೂಡ್ ಆಂಡ್ ಲಾಂಜಿಟ್ಯೂಡ್) ವಿವರ, ಕರ ಪಾವತಿಸಿದ ರಸೀದಿ ಹಾಗೂ ಸ್ವತ್ತಿನ ಮಾಲೀಕರ ದೂರವಾಣಿ ಸಂಖ್ಯೆ.
ಈ ಮೇಲ್ಕಂಡ ಎಲ್ಲಾ ದಾಖಲೆಗಳನ್ನು ಕಲಬುರಗಿ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯ ಇ-ಆಸ್ತಿಯ ಕೌಂಟರ್‍ನಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು ಅಥವಾ ಈ ಎಲ್ಲಾ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಕಲಬುರಗಿ ಮಹಾನಗರ ಪಾಲಿಕೆಯ ಇ-ಮೇಲ್ ಐಡಿ corporation.rev.sec@gmail.com ಗೆ ಸಲ್ಲಿಸಬಹುದಾಗಿದೆ ಅಥವಾ ಮೇಲ್ಕಂಡ ಎಲ್ಲಾ ದಾಖಲೆಗಳನ್ನು ಮಹಾನಗರ ಪಾಲಿಕೆಯ +916363544601 ಹಾಗೂ +916363538302 ವ್ಯಾಟ್ಸ್‍ಆ್ಯಪ್ ಸಂಖ್ಯೆಗಳಿಗೆ (ಪಿ.ಡಿ.ಎಫ್. ಫೈಲ್‍ದಲ್ಲಿ) ಗಳನ್ನು ಕಳುಹಿಸಬಹುದಾಗಿದೆ. ಈ ವ್ಯಾಟ್ಸ್ ಆ್ಯಪ್ ಸಂಖ್ಯೆಗಳಿಗೆ ಕರೆ ಮಾಡಿದ್ದಲ್ಲಿ ಸ್ವೀಕರಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.