ಕಡ್ಚಗೆ ಶ್ರೀಗಳ ಆರ್ಶಿವಾದ

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ಕಡ್ಚ’ ಚಿತ್ರದ ಮೋಷನ್ ಪೋಸ್ಟರ್‌ನ್ನು ನಟಿ,ಸಂಸದೆ ಸುಮಲತಾ ಅಂಬರೀಷ್ ಮತ್ತು ರಾಕ್‌ಲೈನ್‌ವೆಂಕಟೇಶ್ ಅವರುಗಳು ಪುನೀತ್‌ರಾಜ್‌ಕುಮಾರ್ ಸಮಾಧಿ ಬಳಿ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದರು.

ಅಡಿ ಬರಹದಲ್ಲಿ ದೆವ್ವದ ಮರವೆಂದು ಹೇಳಿಕೊಂಡಿದೆ. ಇದೀಗ ಮಂತ್ರಾಲಯದ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿಗಳು ಆರ್ಶಿವಾದ ಮಾಡಿರುವುದು ತಂಡಕ್ಕೆ ಶಕ್ತಿ ಬಂದಂತೆ ಆಗಿದೆ.  ಸಂಸ್ಕ್ರತ ಶೀರ್ಷಿಕೆಯಾಗಿದ್ದು ಟೈಟಲ್‌ಗೆ ಮರ ಅರ್ಥಕೊಡುತ್ತದೆ. ಸೆಸ್ಪೆನ್ಸ್, ಥ್ರಿಲ್ಲರ್ ಮಾದರಿಯ ಕತೆಯಾಗಿದೆ. ಪಟ್ಟುಕೊಟೈ ಶಿವ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. 

ಕಾರ್ತಿಕ್‌ಚರಣ್ ನಾಯಕ. ಮಹನ ನಾಯಕಿ. ಇನ್ನುಳಿದಂತೆ ತಮಿಳು ನಟ,ನಿರ್ದೇಶಕ ಭಾಗ್ಯರಾಜ್, ನಿಜಲ್‌ಗಲ್ ರವಿ, ಗಂಜಕರುಪು, ನಲ್ಲೈಸಿವ, ಬೆಂಜಮಿನ್, ರತ್ಚಸನ್‌ಯಸರ್, ಅಬ್ದುಲ್‌ಕಲಾಂ, ಸ್ಟೆಲ್ಲಾ, ಸತ್ಯ, ವಿಶ್ವ, ಮೈತ್ರಿಯಾ, ಸಾಯಿಮಧು, ಮುಕಿಲನ್, ವಿಕ್ರಂ, ಸಾರಥಿ, ಹರಿ, ಪ್ರಿಯಾ ಮುಂತಾದವರು ನಟಿಸಿದ್ದಾರೆ.

 ಶ್ಯಾಮಲ ರಮೇಶ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ವರನ್‌ವಿಜೆ ಚಾರ್ಲಿ ಸಂಗೀತ , ಛಾಯಾಗ್ರಹಣ ಕೆ.ಎಸ್.ಪಳನಿ, ಅವರದಾಗಿದೆ.  ಕರ್ನಾಟಕ ಮತ್ತು ತಮಿಳುನಾಡು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯದಲ್ಲೆ ಕನ್ನಡ ಸೇರಿದಂತೆ ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ತರಲು ನಿರ್ಮಾಪಕರು ಯೋಜನೆ ರೂಪಿಸಿಕೊಂಡಿದ್ದಾರೆ.