ಕಡೆಗೂ ಕಪ್ ನಮ್ಮದಾಗಲಿಲ್ಲ;ಕೊಹ್ಲಿ ಕನಸು ಭಗ್ನ, ಕೆಕೆಆರ್ ಗೆ 4 ವಿಕೆಟ್ ರೋಚಕ ಜಯ

ಶಾರ್ಜಾ, ಅ.11-ಐಪಿಎಲ್ ಟೂರ್ನಿಯಲ್ಲಿ ಈ ಬಾರಿಯಾದರೂ ಪ್ರಶಸ್ತಿ ಗೆಲ್ಲಬೇಕೆಂಬ ಆರ್ ಸಿ ಬಿ ಕನಸು ಭಗ್ನಗೊಂಡಿತು.
ಇಂದು ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕೆಕೆ ಆರ್ ವಿರುದ್ಧ ನಾಲ್ಕು ವಿಕೆಟ್ ಗಳಿಂದ ಸೋಲು ಅನುಭವಿಸಿತು. ಈ ಮೂಲಕ ಕೆಕೆಆರ್ ಫೈನಲ್ ತಲುಪುವ ಆಸೆಯನ್ನು ಜೀವಂತವಾಗಿರಿ ಸಿಕೊಂಡಿತು.
139 ರನ್ ಗಳವ ಸಾಧಾರಣ ಮೊತ್ತದ ಗುರಿಯನ್ನು ಬೆನ್ನಹತ್ತಿದ ಕೆಕೆಆರ್ ಇನ್ನೂ ಎರಡು ಎಸೆತಗಳು ಬಾಕಿಯಿರುವಾಗಲೇ ನಾಲ್ಕು ವಿಕೆಟ್ ಗಳ ರೋಚಕ ಜಯಗಳಿಸಿತು.
ಶುಭ್ ಮನ್ ಗಿಲ್ 29, ವೆಂಕಟೇಶ್ ಅಯ್ಯರ್ 26, ನಿತೀಶ್ ರಾಣಾ 23, ಸುನಿಲ್ ನಾರಾಯಣ್ 26, ದಿನೇಶ್ ಕಾರ್ತಿಕ್ 10 ರನ್ ಗಳಿಸಿದರು. ಮಾರ್ಗನ್ 5 ಹಾಗೂ ಶಕೀಬ್ 9 ರನ್ ಗಳಿಸಿ ಔಟಾಗದೆ ಉಳಿದರು.

ಆರ್ ಸಿಬಿ ಪರ ಮೊಹ್ಮದ್ ಸಿರಾಜ್ , ಹರ್ಷಲ್ ಪಟೇಲ್ ,ಹಾಗೂ ಚಹಾಲ್ ತಲಾ ಎರಡು ವಿಕೆಟ್ ಪಡೆದರು.
ಗೆಲ್ಲಲೇಬೇಕಾಗಿದ್ದ ಈ ಪಂದ್ಯದಲ್ಲಿ ಆರ್ ಸಿಬಿ ಕ್ಯಾಚ್ ಗಳನ್ನು ಕೈಚೆಲ್ಲಿತು.‌ ಬೌಲರ್ ಗಳು ವೈಡ್ ಬಾಲ್ ಗಳನ್ನು ಎಸೆದಿದ್ದು ಕೊಹ್ಲಿ ಪಡೆ ಸೋಲಿಗೆ ಪ್ರಮುಖ ಕಾರಣವಾಯಿತು.
ಆರ್ ಸಿಬಿ ನಾಯಕತ್ವ ತೊರೆಯುತ್ತಿರುವ ವಿರಾಟ್ ಕೊಹ್ಲಿ ಗೆ ಕಪ್ ಗೆಲ್ಲಬೇಕೆಂಬ ಕನಸು ಕಡೆಗೂ ನನಸಾಗಲೇ ಇಲ್ಲ. ಪ್ರತಿ‌ಬಾರಿ ಕಪ್ ನಮ್ದೆ ಎಂದು ತಂಡವನ್ನು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಓಟಕ್ಕೆ ಸುನಿಲ್ ನಾರಾಯಣ್ ಅಂಕುಶ ಹಾಕಿದರು.
20 ಓವರ್ ಗಳಲ್ಲಿ 138 ರನ್ ಗಳಿಸಲಷ್ಟೇ ಆರ್ ಸಿಬಿಗೆ ಸಾಧ್ಯವಾಯಿತು.
ಟೂರ್ನಿಯಲ್ಲಿ ಹೋರಾಟ ಕಾಯ್ದುಕೊಳ್ಳಲು ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಕೊಹ್ಲಿ ಪಡೆ ನಿರೀಕ್ಷಿತ ಪ್ರಮಾಣದಲ್ಲಿ ಬ್ಯಾಟಿಂಗ್ ಪ್ರದರ್ಶಿಸಲು ಸಾಧ್ಯವಾಗಲಿಲ್ಲ.
ಪಡಿಕ್ಕಲ್ 21, ಕೊಹ್ಲಿ 39 ರನ್ ಗಳಿಸಿದರೆ, ಹಿಂದಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದ ಮ್ಯಾಕ್ಸ್‌‌ ವೆಲ್ 15 ರನ್ ಗಳಿಸಿದರೆ, ಎಬಿಡಿ ಬ್ಯಾಟಿಂಗ್ ನಲ್ಲಿ ಮತ್ತೆ ಎಡವಿ ಕೇವಲ 11 ರನ್ ಗಳಿಸಿದರು.
ಕೆಕೆಆರ್ ಪರ ಸುನಿಲ್ ನಾರಾಯಣ್ ನಾಲ್ಕು ಹಾಗೂ ಫರ್ಗೂಸನ್ ಎರಡು ವಿಕೆಟ್ ಪಡೆದರು.
ಇನ್ನೊಂದು ಪಂದ್ಯ ಬಾಕಿ ಉಳಿದಿದ್ದು ಕೆಕೆಆರ್ ಮತ್ತು ಡೆಲ್ಲಿ ಫೈನಲ್ ತಲುಪಲು ಸೆಣಸಲಿವೆ.