ಕಡೆಗಣಿಸಿದ ಜೆಡಿಎಸ್ ಪಕ್ಷ ಬಿಡಲು ಕಾರಣ-ರಾಜಣ್ಣ

ಚನ್ನಪಟ್ಟಣ.ಏ೨:ಜೆಡಿಎಸ್‌ನಲ್ಲಿ ಸಂಪೂರ್ಣವಾಗಿ ಕಡೆಗಣಿಸಿದ್ದರಿಂದ ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ನಗರ ಜೆಡಿಎಸ್‌ನ ಮಾಜಿ ಅಧ್ಯಕ್ಷ ರಾಂಪುರ ರಾಜಣ್ಣ ತಿಳಿಸಿದರು.
ಪಟ್ಟಣದ ಚರ್ಚ್‌ರಸ್ತೆಯ ಕಚೇರಿಯಲ್ಲಿ ಮಾತನಾಡಿ, ತಾಲೂಕು ಜೆಡಿಎಸ್ ಮುಖಂಡರ ಧೋರಣೆ, ಮುಖಂಡರ ಗುಂಪುಗಾರಿಕೆ ಮತ್ತು ನಿರ್ಲಕ್ಷ್ಯತನ ಹಾಗೂ ನಾಲ್ಕು ಮಂದಿಯ ಪಾರುಪತ್ಯೆಯ ವಿರುದ್ಧ ಬೇಸತ್ತು ನಾನು ಜೆಡಿಎಸ್ ಪಕ್ಷವನ್ನು ತೊರೆಯುತ್ತಿದ್ದೇನೆ. ಮುಂದಿನ ರಾಜಕೀಯ ನಿರ್ಧಾರವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ತಾಲೂಕು ಜೆಡಿಎಸ್‌ನಲ್ಲಿ ಉಸಿರು ಗಟ್ಟುವ ವಾತಾವರಣ ವಿದೆ. ಪಕ್ಷವನ್ನು ಗೆಲ್ಲಿಸಬೇಕು ಎಂಬ ಕಾರಣಕ್ಕೆ ದುಡಿದ ನನ್ನಂತಹ ಸಾಕಷ್ಟು ಮುಖಂಡರಿಗೆ ಮನ್ನಣೆ ಇಲ್ಲದಂತಾಗಿದ್ದು,
ಪಟ್ಟಣದ ಹೌಸಿಂಗ್ ಬೋರ್ಡ್‌ನಲ್ಲಿ ಕುಮಾರಸ್ವಾಮಿಅವರು ಅಂಗನವಾಡಿ ಕೇಂದ್ರದ ಶಂಕುಸ್ಥಾಪನೆಗೆ ಬಂದಿದ್ದ ವೇಳೆ ಕನ್ನಮಂಗಲ ಬಳಿ ಸಾಗುವಳಿ ಭೂಮಿ ಪಡೆದು ೩೦ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಸ್ಯೆ ಹೇಳುಲು ಹೋದರೆ ಕುಮಾರಸ್ವಾಮಿಅವರ ನನ್ನ ಮೇಲೆ ನೂರಾರು ಜನರ ಮುಂದೆ ಅವಮಾನ ಮಾಡಿದರು. ಅವರ ಗೆಲುವಿಗೆ ನನ್ನ ಹಣ ಖರ್ಚು ಮಾಡಿ ಅವರಿಂದ ಅವಮಾನ ಮಾಡಿಸಿಕೊಳ್ಳುವ ಪರಿಸ್ಥಿತಿ ಬಂತು. ಜೆಡಿಎಸ್‌ನಲ್ಲಿ ದುಡಿದವರಿಗೆ ಬೆಲೆ ಇಲ್ಲ ಈ ಕಾರಣದಿಂದ ಜೆಡಿಎಸ್ ತ್ಯಜಿಸುತ್ತಿದ್ದೇನೆ. ತಾಲೂಕಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕುಮಾರಸ್ವಾಮಿ ಅವರ ಗಮನಕ್ಕೆ ಹೋಗುತ್ತಿಲ್ಲ. ಕಾರ್ಯಕರ್ತರ ಅಳಲು ಅವರಿಗೆ ಕೇಳಿಸುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಕಾರ್ಯಕರ್ತರನ್ನು ಕಡೆಗಣಿಸಿದ ಕ್ಷೇತ್ರದಲ್ಲಿ ಮತ್ತೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಕಾರಣಕ್ಕೆ ನಾವೆಲ್ಲ ಶ್ರಮಿಸಿದ್ದೇವೆ. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಗೆಲುವಿಗೆ ತಾಲೂಕಿನ ಸಾವಿರಾರು ಕಾರ್ಯಕರ್ತರು ಪ್ರಮಾಣಿಕವಾಗಿ ದುಡಿದಿದ್ದಾರೆ. ಎಂದು ಬೇಸವರನ್ನು ಹೊರಹಾಕಿದರು.
ಕೆಲ ತಿಂಗಳ ಹಿಂದೆ ಮುಖಂಡರ ಮನೆಗೆ ಭೇಟಿ ನೀಡಲು ಬಂದಿದ್ದ ವೇಳೆ ಮನೆಗೆ ಬಂದಿದ್ದ ಕುಮಾರಸ್ವಾಮಿಯವರ ಗಮನಕ್ಕೆ ಇಲ್ಲಿನ ಬೆಳವಣಿಗೆಯನ್ನು ತರಲು ಹೋದಾಗ ಮನೆಗೆ ಬಂದು ಕಾಣುವಂತೆ ತಿಳಿಸಿದರು. ಆದರೆ ಎರಡು ಬಾರಿ ಹೋದರೂ ಸಿಗಲಿಲ್ಲ. ನಾಲ್ಕೈದು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ನಿರ್ಲಕ್ಷ್ಯದಿಂದ ಮನನೊಂದು ಜೆಡಿಎಸ್ ಬಿಡಲು ತೀರ್ಮಾನಿಸಿದ್ದಾಗಿ ಕಾರಣ ನೀಡಿದರು.
ಪಕ್ಷಕ್ಕಾಗಿ ದುಡಿದ ನಾನು ಪಕ್ಷದಿಂದ ಏನನ್ನು ಬಯಸಲಿಲ್ಲ. ಪಕ್ಷ ಸಂಘಟನೆ ಕೆಲಸ ಮಾಡಿದ್ದೇನೆ. ಸದ್ಯಕ್ಕೆ ಪಕ್ಷ ಬಿಡುತ್ತಿದ್ದು, ಬೇರೆ ಪಕ್ಷಕ್ಕೆ ಹೋಗುವ ಕುರಿತು ಯಾವುದೇ ತೀರ್ಮಾನ ಮಾಡಿಲ್ಲ. ಆದಷ್ಟು ಬೇಗ ಮುಂದಿನ ನಡೆಯ ಕುರಿತು ಮಾಹಿತಿ ನೀಡುವುದಾಗಿ ತಿಳಿಸಿದರು. ಮುಖಂಡ ಕೂಡ್ಲೂರು ರವೀಶ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಾದಹಳ್ಳಿ ರವಿಚನ್ನಪ್ಪ, ಫಿಲೀಪ್, ರಾಂಪುರ ಲಿಂಗೇಶ್‌ಕುಮಾರ್, ಭಾಸ್ಕರ್, ರಾಂಪುರ ಶಿವರಾಜ್, ಅಚ್ಚುತ ನಿವೃತ್ತ ಪೊಲೀಸ್, ಬೆಂಬಲಿಗರು ಹಾಗೂ ಕೈ ಮುಖಂಡ ಆನಂದಪುರ ಮೋಹನ್ ಇನ್ನೂ ಮುಂತಾದವರಿದ್ದರು.