ಕಡೆಗಣನೆಗೆ ಬೇಸತ್ತು ಬಿಜೆಪಿಗೆ ಗುಡ್ ಬೈ ಹೇಳಿದ ಜಿ.ಪಂ. ಮಾಜಿ ಅಧ್ಯಕ್ಷ !

ಸಂಜೆವಾಣಿ ವಾರ್ತೆ 
ಕುಕನೂರು, ಫೆ.20: ಮಹಿಳಾ ಮಕ್ಕಳ ಹಾಗೂ   ಗಣಿ ಸಚಿವ ಹಾಲಪ್ಪ ಆಚಾರ್ ಅವರು ತಮನ್ನ ಸತತ ಕಡೆಗೆ ಮಾಡುತ್ತಿರುವುದು ಬೇಸತ್ತು   ಬಿಜೆಪಿಗೆ ಗುಡ್ ಬೈ ಹೇಳಿ  ಸಿದ್ದರಾಮಯ್ಯ ಮೂಲಕ ಕಾಂಗ್ರೆಸ್ ಸೇರಿರುವುದಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಣ್ಣ ಬಜಂತ್ರಿ ತಿಳಿಸಿದರು. ಅವರು ಸಂಜೆವಾಣಿಯೊಂದಿಗೆ ಮಾತನಾಡಿ, ತಾವು ಅಪಾರವಾದ ನಂಬಿಕೆ ಇಟ್ಕೊಂಡು ಕಳೆದ ಚುನಾವಣೆಯಲ್ಲಿ ಹಾಲಪ್ಪ ಆಚಾರ್ ರವರನ್ನು ಗೆಲ್ಲಿಸಲು ಸಾಕಷ್ಟು ಪ್ರಮಾಣದಲ್ಲಿ ಶ್ರಮವಹಿಸಿ ಅವರು ಶಾಸಕರಾಗಲು ಶ್ರಮಿಸಿದ್ದೇನೆ, ಆದರೆ ಹಾಲಪ್ಪ ಆಚಾರ್ ಅವರು ನಮ್ಮ ಶ್ರಮವನ್ನು ಸಹಿಸದೆ ಕಿಂಚಿತ್ತು ಮಾನವತೆ ತೋರದೆ ತಮ್ಮನ್ನು ಆಲಕ್ಷ ಮಾಡಲಾಗಿದೆ, ಅವರು ಗೆಲುವಿಗಾಗಿ ನಾನು ತಾಲೂಕಿನದ್ದಂತ ಅಲೆದಾಡಿ ನಮ್ಮ ಸ್ವಾಮೀಜಿಯವರನ್ನು ಕರೆದುಕೊಂಡು ಎಲ್ಲ ದಲಿತ ಕಾಲೋನಿಗಳಿಗೆ ಭೇಟಿ ನೀಡಿ. ಜನರ  ಮನವೊಲಿಸಿ ಗೆಲುವಿಗೆ ಕಾರಣಿ ಕಾತ ೯ನಾಗಿದ್ದೇನೆ. ಇದ್ಯಾವುದನ್ನು ಪರಿಗಣಿಸದೆ ದಲಿತ ವಿರೋಧಿ ನೀತಿ ಅನುಸರಿಸುವ ಮೂಲಕ ಹಾಲಪ್ಪಾ ಆಚಾರ ಸಣ್ಣತನ ತೋರಿದ್ದಾರೆ. ದಲಿತರ ಮತ ಪಡೆದು ಅವರ ಉದ್ದಾರಕ್ಕೆ ಶ್ರಮಿಸಿಲ್ಲ ಎಂದು ಆಪಾದಿಸಿದರು.  ಹೀಗಾಗಿ ಹಾಲಪ್ಪ ಆಚಾರ ರವರಿಗೆ ಪ್ರಸ್ತುತ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಕಾಂಗ್ರೆಸ್ ಅಭ್ಯರ್ಥಿ ರಾಯರೆಡ್ಡಿ ಅವರ ಗೆಲುವಿಗೆ ಶ್ರಮಿಸುದಾಗಿ ತಿಳಿಸಿದರು.

One attachment • Scanned by Gmail