ಕಡು ಬಡವರ ಸಮಸ್ಯೆ ಆಲಿಸಿ ಆಹಾರ ಕಿಟ್ ವಿತರಣೆ

ಮುದ್ದೇಬಿಹಾಳ:ಮೇ.28: ಪಟ್ಟಣದಲ್ಲಿ ಕಳೆದ 11 ದಿನಗಳಿಂದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭಗೌಡ ದೇಸಾಯಿ ಅವರು ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕಡು ಬಡವರಿಗೆ ನಿರ್ಗತಿಕರಿಗೆ ನಿರಾಶ್ರಿತರ ಮನೆ ಮನೆಗೆ ತೆರಳಿ ಅವರ ಸಮಸ್ಯೆ ಆಲಿಸಿ ಆಹಾರ ಕಿಟ್ಟ್ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು ಕಳೇದ ಒಂದು ಒಂದೂವರೆ ತಿಂಗಳಿಂದ ಮಾನವ ವೈರಿ ಕೊರೊನಾ ಎನ್ನುವ ವೈರಸ್ ನಿಂದಾಗಿ ಂದು ಬಡವರು, ನಿರ್ಗತಿಕರು, ಒಂದು ಹೊತ್ತಿನ ಊಟ ಸಿಗದೇ ಕಂಗಾಲಾಗಿದ್ದಾರೆ.
ಇಂತಹ ಸ್ಥಿಯಲ್ಲಿ ಲಾಕ್ ಡೌನ ಹೇರಿಕೆ ಇದೇ ಹಾಗಾಗಿ ಕೈಲಾದಷ್ಟು ಉಚಿತ ಅನ್ನ ಪ್ರಸಾದದ ದಾಸೋಹ ಕಾರ್ಯ ಮಾಡಲಾಗುತ್ತಿದೆ. ಆನರು ಕೂಡು ಕೋರೊನಾ ಬಗ್ಗೆ ಅತೀವ ನಿರ್ಲಕ್ಷ ತೊರದೇ ಗಂಭಿರವಾಗಿ ಪರಿಗಣಿಸಿ ಸೂಕ್ತ ಸಮಯಕ್ಕೆ ಚಕತ್ಸೆ ಪಡೆದುಕೊಳ್ಳುವುದು ಮತತ್ತು ಮಾಸ್ಕ ಧರಿಸುವುದು, ಸ್ಯಾನಿಟೈಜರ ಬಳಸುವುದು ಜತೆಗೆ ಮುಖ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ಹೊಡೆದೊಡಿಸಲು ಸರಕಾರದೊಂದಿಗೆ ಸರಕಾರಿ ಅಧಿಕಾರಿಗಳೋಂದಿಗೆ ಕೈಜೋಡಿಸಬೇಕು ಎಂದರು..ಈ ಸಂದರ್ಭದಲ್ಲಿ ಮಂಜುನಾಥ ರತ್ನಾಕರ, ಮಹಾಂತೇಶ ಹಡಪದ, ಸಿದ್ದು ಹೆಬ್ಬಾಳ, ರಾಘು ಪತ್ತಾರ, ಶಿವು ದಡ್ಡಿ ಸೇರಿದಂತೆ ಹಲವರು ಇದ್ದರು,