ಕಡುಬಿನ ಕಾಳಗ

(ಸಂಜೆವಾಣಿ ವಾರ್ತೆ)
ಶಿರಹಟ್ಟಿ,ಸೆ13: ತಾಲೂಕಿನ ವರವಿ ಶ್ರೀ ಮೌನೇಶ್ವರ ಜಾತ್ರಾ ಮಹೋತ್ಸವದ ಎರಡನೆ ದಿನದ ಕಾರ್ಯಕ್ರಮವಾದ ಕಡುಬಿನ ಕಾಳಗ ಶ್ರೀ ಮಠದ ಸಂಪ್ರದಾಯದಂತೆ ಶ್ರೀ ಮೌನೇಶ್ವರ ಸ್ವಾಮಿಜಿಯರಿಂದ ಅದ್ದೂರಿಯಾಗಿ ಜರುಗಿತು. ಶ್ರೀ ಮಠವನ್ನು ಮೂರು ಸುತ್ತು ಹಾಗೂ ರಥಕ್ಕೆ ಎರಡು ಸುತ್ತು ಕಡುಬಿನ ಕಾಳಗವನ್ನು ನೆರವೇರಿಸಲಾಯಿತು.
ಡೊಳ್ಳು, ಜಾಂಜ ಹಾಗೂ ಸಮ್ಮಾಳದೊಂದಿಗೆ ವಿಜೃಂಭಣೆಯಿಂದ ಕಡುಬಿನ ಕಾಳಗ ಜರುಗಿತು.