ಕಡುಬಡವರಿಗೆ ಸರ್ಕಾರಿ ಜಮೀನಿನಲ್ಲಿ ನಿವೇಶನ ಹಂಚಲು ಮನವಿ

ದಾವಣಗೆರೆ. ಜೂ.೭: ಸೂರಿಲ್ಲದೇ ಬಾಡಿಗೆಯೂ ಕಟ್ಟಲು ಸಾಧ್ಯವಿಲ್ಲದ ಕಡು ಬಡವರು ದಾವಣಗೆರೆದಕ್ಷಿಣಭಾಗದಲ್ಲಿದ್ದಾರೆ ಅಂತಹವರಿಗೆ ಸರ್ಕಾರಿ ಜಮೀನಿನಲ್ಲಿ ಖಾಲಿ ನಿವೇಶನಗಳನ್ನು ಮಾಡಿ ಹಂಚಿಕೆ ಮಾಡಬೇಕೆಂದುಇಂಡಿಯನ್ ನ್ಯೂ  ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಮುದ್ದಾಪುರದ ರೆಹಮಾನ್ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು  ದಕ್ಷಿಣವಲಯ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೆಲ ಕಡುಬಡವರು ಮನೆಯಿಲ್ಲದೇ ಬಾಡಿಗೆ ಕಟ್ಟಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಅಂತಹ ಕಡು ಬಡವರಿಗೆ ಒಂದೇ ಕಡೆ ಸ್ಥಳೀಯವಾಗಿ ವಾಸ ಮಾಡಲು . ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಪ್ರದೇಶಗಳಿಗೆ ಹೊಂದಿಕೊಂಡಿರುವ ಸರ್ಕಾರಿ ಜಮೀನಿನಲ್ಲಿ  ಜಿಲ್ಲಾಧಿಕಾರಿಗಳು ಹಾಗೂ  ತಹಶೀಲ್ದಾರ್ ಇವರುಗಳ ಮುಖಾಂತರ ಜಮೀನಿನಲ್ಲಿ ಖಾಲಿ ನಿವೇಶನಗಳನ್ನು ಮಾಡಿ ಬಾಡಿಗೆ ಮನೆದಾರರಿಗೆ ಉಚಿತವಾಗಲಿ ಅಥವಾ ಅಲ್ಪ ದರದಲ್ಲಿ ಈ ಫಲಾನುಭವಿಗಳಿಗೆ ಹಂಚುವಂತೆ ಸರ್ಕಾರದ  ಹಿರಿಯ ಕಾರ್ಯದರ್ಶಿಗಳು ಆದೇಶ ನೀಡಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮೌನೇಶ್ವರಚಾರಿ ,  ಹುಸೇನ್ ಸಾಬ್ , ಮೊಹಮ್ಮದ್ ಹನೀಫ್ ,  ಕೆ.ಹೆಚ್ ರಾಜ ಮಿಯಾಸಾಬ್ ಇದ್ದರು.