ಕಡಿಮೆ ಸಂಖ್ಯೆಯ ಸಮುದಾಯಗಳ ಕಡೆಗಣನೆ: ಸುದರ್ಶನ್ ಬೇಸರ

ಸಂಜೆವಾಣಿ ವಾರ್ತೆ
ಚಾಮರಾಜನಗರ ಆ.13:- ಜನಸಂಖ್ಯೆಯಲ್ಲಿ ಕಡಿಮೆ ಇರುವ ಸಮುದಾಯಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿಯಲು ಸರ್ಕಾರಗಳು ಕಾರಣಎಂದು ವಿಧಾನ ಪರಿಷತ್ ಮಾಜಿ ಸಭಾಪತಿವಿ.ಆರ್. ಸುದರ್ಶನ್ ಬೇಸರ ವ್ಯಕ್ತಪಡಿಸಿದರು.
ನಗರದ ನಂದಿ ಭವನದಲ್ಲಿ ಚಾಮರಾಜನಗರ ಜಿಲ್ಲಾ ಜ್ಯೋತಿಪಣಗಾಣಿಗರ ಸಂಘದ ವತಿಯಿಂದ ಶನಿವಾರ ನಡೆದಗುರುವಂದನಾ ಕಾರ್ಯಕ್ರಮ, ಜಿಲ್ಲಾಗಾಣಿಗರ ಸಮಾವೇಶ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶಿವ ಜ್ಯೋತಿ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಗಣ್ಯರಿಗೆ ನಡೆದ ಸನ್ಮಾನಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಸಮುದಾಯಕ್ಕೆ ಸಂಘಟನೆ, ಜಾಗೃತಿ, ಹೋರಾಟ, ಶಿಕ್ಷಣ ಬಹಳ ಮುಖ್ಯಆದರೆ ಕೆಲ ಹಿಂದುಳಿದ ಸಮಾಜಗಳಿಗೆ ಎಲ್ಲಾ ಕ್ಷೇತ್ರಗಳಲ್ಲಿ ಹಿನ್ನಡೆಉಂಟಾಗಿದೆ.
ಇವತ್ತಿನ ಸಂವಿಧಾನ ವ್ಯವಸ್ಥೆಯಲ್ಲಿ ಜಾತಿ ವ್ಯವಸ್ಥೆಇಲ್ಲದಿದ್ದರೂ ವಸ್ತು ಸ್ಥಿತಿಯಲ್ಲಿ ಜಾತಿ ವ್ಯವಸ್ಥೆಜೀವಂತವಾಗಿದೆ ಇದನ್ನು ಹೋಗಲಾಡಿಸಲು ಮತ್ತು ಸಮ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಪ್ರಯತ್ನ ಮಾಡಬೇಕಿದೆಎಂದು ಹೇಳಿದರು. ಗಾಣಿಗ ಸಮಾಜ ತುಂಬಾ ಹಿಂದುಳಿದ ಸಮಾಜವಾಗಿದೆ. ಈ ಸಮಾಜದಜನರಿಗೆ ಶಿಕ್ಷಣ, ಆರೋಗ್ಯ, ರಾಜಕೀಯವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಸಹಾಯ ಸಿಗುತ್ತಿಲ್ಲ. ಚುನಾವಣಾ ವ್ಯವಸ್ಥೆಯಲ್ಲಿ ವೋಟಿಗಾಗಿ ನೋಟು ಈ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವಕ್ಕೆಧಕ್ಕೆಉಂಟಾಗುತ್ತಿದೆ ಸರ್ಕಾರ ಈ ಬೆಳವಣಿಗೆ ಕುರಿತುಗಂಭೀರಚಿಂತನೆ ಮಾಡಿಚುನಾವಣೆಗೆ ಸುಧಾರಣೆತರಬೇಕುಎಂದುಅಭಿಪ್ರಾಯಪಟ್ಟರು.
ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವಗಾಣಿಗ ಸಮಾಜದ ಸಮಾವೇಶಕ್ಕೆಜಿಲ್ಲೆಯಎಲ್ಲಾ ಶಾಸಕರುಗೈರು ಹಾಜರಾಗಿದ್ದು, ಸಮಾಜಕ್ಕೆ ನೋವುಂಟು ಮಾಡಿದೆಎಂದು ಬೇಸರ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಇಂತಹ ನಡವಳಿಕೆಯನ್ನು ತಿದ್ದಿಕೊಳ್ಳಬೇಕೆಂದು ಸಲಹೆ ನೀಡಿದರು. ಸಮುದಾಯದಲ್ಲಿ ಅನೇಕ ಉಪ ಪಂಗಡಗಳಿದ್ದು 2ಎ ಪ್ರವರ್ಗದಲ್ಲಿ ಕೆಲವು ಉಪ ಪಂಗಡಗಳನ್ನು ಕೈ ಬಿಡಲಾಗಿದೆಅದನ್ನು ಸೇರ್ಪಡೆ ಮಾಡಿ ಪ್ರಾತಿನಿಧ್ಯಕಲ್ಪಿಸಲು ಸರ್ಕಾರ ಗಮನ ಹರಿಸಬೇಕೆಂದು ತಿಳಿಸಿದರು. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳ ಜನರು ಆಡಳಿತದಲ್ಲಿ ಭಾಗಿಯಾಗಲುಅವಕಾಶ ನೀಡಬೇಕುಎಂದುಕೇಂದ್ರಕ್ಕೆಒತ್ತಾಯಿಸುವುದಾಗಿ ಹೇಳಿದರು.
ಶ್ರೀ ಕ್ಷೇತ್ರ ಮಹಾಸಂಸ್ಥಾನ ಮಠದ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿಗಳು ತಮ್ಮರಾಜಕೀಯಅಧಿಕಾರವನ್ನು ತ್ಯಜಿಸಿ ಸಮಾಜದ ಏಳಿಗೆಗಾಗಿ ಮಠ ಸ್ಥಾಪಿಸಿ ಜನಾಂಗದಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯಕಾರ್ಯವೆಂದು ಪ್ರಶಂಶಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಗಾಣಿಗರ ಮಹಾ ಸಂಸ್ಥಾನ ಮಠದ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿಯವರು ಮಾತನಾಡಿ, ಸಂಪುಟದರ್ಜೆ ಸ್ಥಾನಮಾನದಲ್ಲಿದ್ದ ನಾನು ರಾಜೀನಾಮೆ ನೀಡಿ ಸಾಂಸಾರಿಕಜೀವನವನ್ನು ತ್ಯಜಿಸಿ ಸನ್ಯಾಸಆಶ್ರಮ ಮಾಡಿದ್ದೇನೆ ಈ ಮೂಲಕ ನಮ್ಮ ಸಮಾಜಕ್ಕೆಗುರುಪೀಠ ಸ್ಥಾಪಿಸಿ ಅವರಿಗೆ ಸಾಹಿತ್ಯ, ಸಂಸ್ಕøತಿ, ಶಿಕ್ಷಣ ಹಾಗೂ ದಾಸೋಹ ನೀಡಲು ಹೆಜ್ಜೆಯನ್ನುಇರಿಸಲಾಗಿದೆ. ಬೆಂಗಳೂರು ಸಮೀಪದ ನೆಲಮಂಗಲದಲ್ಲಿ ಮಾಜಿ ಮುಖ್ಯಮಂತ್ರಿಯಡಿಯೂರಪ್ಪನವರ ಸಹಕಾರದಿಂದಎಂಟುಎಕರೆಜಮೀನು ಪಡೆದುಗುರು ಪೀಠ, ಕಲ್ಯಾಣ ಮಂಟಪ, ಶಾಲೆ ಮತ್ತು ವಸತಿ ನಿಲಯಗಳನ್ನು ತೆರೆಯಲಾಗಿದೆ. ಸಮಾಜದ ಬಂಧುಗಳು ಇವುಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಸಮಾಜದ ಪ್ರತಿಯೊಬ್ಬರು ನ್ಯಾಯ ನೀತಿಧರ್ಮವನ್ನು ಪಾಲಿಸುವ ಮೂಲಕ ಕರ್ಮದಲ್ಲಿ ನಿμÉ್ಠಯನ್ನು ಹೊಂದಿದರೆ ಮಾತ್ರಎಲ್ಲರಿಗೂ ಶ್ರೇಯಸ್ಸುಉಂಟಾಗಲಿದೆಎಂದು ಆಶೀರ್ವಚನ ನೀಡಿದರು. ಸಮಾಜದಲ್ಲಿಇರುವಎಲ್ಲಾ ಸೌಲಭ್ಯಗಳನ್ನು ಯಾರುಅನುಭವಿಸುತ್ತಿದ್ದಾರೋಅವರೇ ಮತ್ತೆ ಮತ್ತೆ ಆಸೆ ಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಹಿಂದುಳಿದ ವರ್ಗದವರುತಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕುಎಂದು ಸಲಹೆ ನೀಡಿದರು. ಜನಾಂಗದ ಸಮಸ್ಯೆ ಬಂದಾಗಎಲ್ಲರೂಒಗ್ಗಟ್ಟಾಗಿ ಹೋರಾಟ ನಡೆಸಬೇಕುಇಲ್ಲವಾದಲ್ಲಿಗುಲಾಮಗಿರಿಗೆ ಬರುವ ಪರಿಸ್ಥಿತಿ ಎದುರಾಗಲಿದೆ. ಇಂದು ಆಡಳಿತ ನಡೆಸುತ್ತಿರುವವರು ಪ್ರವರ್ಗ 2ಎ ಗೆ ಹೋರಾಟ ನಡೆಸುತ್ತಿರುವುದುದುರದೃಷ್ಟಕರ. ನಾವು ಪ್ರವರ್ಗ 2 ಎ ಉಳಿಸಿಕೊಳ್ಳಲು ಹೋರಾಟ ಮಾಡಬೇಕೆಂದು ಎಚ್ಚರಿಸಿದರು.
ಅಖಿಲ ಕರ್ನಾಟಕಗಾಣಿಗರ ಸಂಘದಅಧ್ಯಕ್ಷರಾಜಶೇಖರ್‍ಅವರು ಮಾತನಾಡಿ, ನಾವು ಯಾವುದೇ ಯೋಜನೆಗಳಿಗೆ ಸರ್ಕಾರಕ್ಕೆಅರ್ಜಿ ಹಾಕದೆ ಸೌಲಭ್ಯ ಸಿಗುವುದಿಲ್ಲ ಈಗಿನ ಸರ್ಕಾರಗಾಣಿಗ ನಿಗಮಕ್ಕೆ ಸೂಕ್ತ ಅಧ್ಯಕ್ಷರನ್ನು ನೇಮಕ ಮಾಡಿ ವಾರ್ಷಿಕ 100 ಕೋಟಿರೂ. ಗಳನ್ನು ನೀಡಬೇಕೆಂದು ನಾನು ಹಾಗೂ ಸುದರ್ಶನ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ.
ಗಂಗಾ ಕಲ್ಯಾಣ, ನಿರುದ್ಯೋಗಿಗಳಿಗೆ ಸಾಲ, ವಿದೇಶದಲ್ಲಿ ವ್ಯಾಸಂಗಕ್ಕೆ ಸಾಲ ಸೌಲಭ್ಯ ಇವುಗಳೆಲ್ಲ ನಿಗಮದಿಂದದೊರೆಯುವಂತವು. ಹೀಗಾಗಿ ಸರ್ಕಾರಗಾಣಿಗ ಸಮಾಜದ ನಿಗಮಕ್ಕೆ ಹೆಚ್ಚು ಅನುದಾನ ನೀಡಿ ಪೆÇ್ರೀತ್ಸಾಹಿಸುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿವಜ್ಯೋತಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತುಅಲ್ಲದೆ ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳು, ಗಣ್ಯರು ಹಾಗೂ ಸಮಾಜದ ಹಿರಿಯ ಮುಖಂಡರಿಗೆ ಶಾಲು ಹೊದಿಸಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಶ್ರೀ ಪೂರ್ಣಾನಂದ ಪುರಿ ಸ್ವಾಮೀಜಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಿ ನಂತರ ವೇದಿಕೆಯಲ್ಲಿ ಕುಲಬಾಂಧವರು ಪಾದ ಪೂಜಾ ಮಾಡಿ ಪುಷ್ಪ ವೃಷ್ಟಿ ಮಾಡಿದರು.
ಕಾರ್ಯಕ್ರಮದಲ್ಲಿಜ್ಯೋತಿಪಣಗಾಣಿಗರ ಸಂಘದಜಿಲ್ಲಾಅಧ್ಯಕ್ಷಅಂಕಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯರಾಮಶೆಟ್ಟಿ, ಮುಖಂಡರಾದ ಪೂನಂ ಮಂಜುನಾಥ್, ಚಂದ್ರಮೋಹನ್, ನಾಗರಾಜ ಶೆಟ್ಟಿ, ಟಿ ರಂಗರಾಜು,ಎಂ.ಎಸ್.ಕುಮಾರ್, ಬಿ.ಕೆ. ಬಸವರಾಜು, ಜಿ.ಎನ್ ವೇಣುಗೋಪಾಲ್ ಪಿ.ಜಿ.ವಿಜಯಕುಮಾರ್,ಟಿ.ವಿ ರಾಮಕೃಷ್ಣ, ದೇವಶೆಟ್ಟಿ, ಡಿ.ಎಂ.ಎಸ್ ಮಹದೇವಣ್ಣ, ನರಸಿಂಹಯ್ಯ, ಸೇರಿದಂತೆಇತರರುಇದ್ದರು