ಕಡಿಮೆ ಬೆಲೆಗೆ ಅಕ್ಕಿ ಮಾರಾಟ-ಸದ್ಬಳಕೆಗೆ ಸಲಹೆ

ಮಾಲೂರು, ಫೆ .೧೦: ಪ್ರತಿಯೊಬ್ಬ ನಾಗರಿಕರು ಭಾರತ ಸರ್ಕಾರ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಅಕ್ಕಿಯನ್ನು ವಿತರಿಸುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಎಪಿಎಂಸಿ ಮಾಜಿ ಸದಸ್ಯ ಎಂ.ಪಿ.ಚಂದ್ರಶೇಖರ್ ಹೇಳಿದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿ ಭಾರತ ಸರ್ಕಾರ ಎನ್‌ಸಿಸಿಎಫ್ ನೂತನವಾಗಿ ಪರಿಚಯಿಸಿರುವ ಕಡಿಮೆ ದರದ ಭಾರತ್ ಅಕ್ಕಿಯನ್ನು ಗ್ರಾಹಕರಿಗೆ ವಿತರಿಸುವ ಮೂಲಕ ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ ಬಡವರು ಹಾಗೂ ಮಾಧ್ಯಮದ ವರ್ಗದ ಜನತೆಗೆ ಕಡಿಮೆ ಹಗ್ಗದ ದರದಲ್ಲಿ ಒಂದು ಕೆಜಿ ೨೯ ರೂಗಳಂತೆ ೧೦ ಕೆಜಿಗೆ ೨೯೦ ರೂಗಳ ಗುಣಮಟ್ಟದ ಅಕ್ಕಿಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಅದರಂತೆ ಪಟ್ಟಣದ ಮುಖ್ಯ ರಸ್ತೆಯ ಬಿಗ್ ಬಾಸ್ಕೆಟ್ ಸಂಕೀರ್ಣದಲ್ಲಿ ೨೯ ರೂಗಳ ೧೦ ಕೆಜಿ ಚೀಲದ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದ್ದು. ಸಂಸದ ಎಸ್.ಮುನಿಸ್ವಾಮಿ ಹಾಗೂ ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ, ಅವರ ಮಾರ್ಗದರ್ಶನದಂತೆ ಪಟ್ಟಣಕ್ಕೆ ೨ ಲಾರಿ ಲೋಡ್ ಹಕ್ಕಿಯನ್ನು ತರಲಾಗಿದ್ದು, ಸಾರ್ವಜನಿಕರು ಭಾರತ ಸರ್ಕಾರ ಕಡಿಮೆ ದರದಲ್ಲಿ ನೀಡುತ್ತಿರುವ ಹಕ್ಕಿಯನ್ನು ಕೊಳ್ಳುವ ಮೂಲಕ ಪ್ರತಿಯೊಬ್ಬರು ಅನ್ನ ಆಹಾರ ಸೇವಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಘಟಕದ ಅಧ್ಯಕ್ಷ ವೇಣುಗೋಪಾಲ್, ಮುಖಂಡ ಹುಂಗೇನಹಳ್ಳಿ ನಾಗೇಶ್, ವಿನೋದ್, ಇನ್ನಿತರರು ಹಾಜರಿದ್ದರು.
ಪೋಟೊ ೨. ಮಾಲೂರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಭಾರತ ಸರ್ಕಾರ ಎನ್‌ಸಿಸಿಎಫ್ ನೂತನವಾಗಿ ಪರಿಚಯಿಸಿರುವ ಕಡಿಮೆ ದರದ ಭಾರತ್ ಅಕ್ಕಿಯನ್ನು ಗ್ರಾಹಕರಿಗೆ ವಿತರಿಸುತ್ತಿರುವುದು.