ಕಡಿಮೆ ಅಂಕಕೊಟ್ಟ ಶಿಕ್ಷಕನಿಗೆ ಥಳಿತ

ದುಮ್ಕಾ ,ಸೆ,೧ – ಕಡಿಮೆ ಅಂಕ ನೀಡಿದ ಕಾರಣ ಜಾರ್ಖಂಡ್‌ನ ದುಮ್ಕಾ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳ ಗುಂಪೊಂದು ತಮ್ಮ ಶಿಕ್ಷಕರನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿರುವ ಅಪರೂಪದ ಘಟನೆ ನಡೆದಿದೆ.ಕಡಿಮೆ ಅಂಕ ಬಂದ ಹಿನ್ನೆಯಲ್ಲಿ ಹಲವು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಶಿಕ್ಷಕರನ್ನು ಮರಕ್ಕೆ ಕಟ್ಟಿ ಹಾಕಿ ಮನಸೋಇಚ್ಚೆ ಥಳಿಸಿರುವುದು ಶಿಕ್ಷಕ ಸಮುದಾಯವನ್ನು ಬೆಚ್ಚಿ ಬೀಳಿಸಿದೆ ಈ ಸಂಬಂಧ ಶಾಲೆಯ ಮುಖ್ಯೋಪಾದ್ಯಾಯ ಸೇರಿದಂತೆ ೧೧ ವಿದ್ಯಾರ್ಥಿಗಳ ವಿರುದ್ದ ಎಫ್ ಐಆರ್ ದಾಖಲಾಗಿದೆ ಎಂದು ದುಮ್ಕಾದ ಗೋಪಿಕಾಂದರ್ ಪೊಲೀಸ್ ಠಾಣೆಯ ಪ್ರಭಾರಿ ನಿತ್ಯಾನಂದ ಭೋಕ್ತ ತಿಳಿಸಿದ್ದಾರೆ. ಮುಖ್ಯೋಪಾಧ್ಯಾಯರ ಸೂಚನೆ ಮೇರೆಗೆ ಶಿಕ್ಷಕರನ್ನು ಮರಕ್ಕೆ ಕಟ್ಟಿ ವಿದ್ಯಾರ್ಥಿಗಳು ಥಳಿಸಿದ್ದಾರೆ ಎಂದು ಶಿಕ್ಷಕ ಸುಮನ್ ಕುಮಾರ್ ಮತ್ತು ಗುಮಾಸ್ತ ಸೋನೆರಾಮ್ ಚೌರೆ ದೂರಿದ್ದಾರೆ.ಘಟನೆ ನಂತರ ದುಮ್ಕಾ ಶಿಕ್ಷಣಾಧಿಕಾರಿಗಳುಸ್ಥಳಕ್ಕೆ ಆಗಮಿಸಿದ ವೇಳೆ ತಮ್ಮ ಶಿಕ್ಷಕರು ಪ್ರಾಯೋಗಿಕವಾಗಿ ಕಡಿಮೆ ಅಂಕಗಳನ್ನು ನೀಡಿದ್ದಾರೆ ಮತ್ತು ವಿವರಣೆಯನ್ನು ನೀಡಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.ಘಟನೆಯ ಕುರಿತು ಮಾಹಿತಿ ಪಡೆದು ಎಲ್ಲ ಶಿಕ್ಷಕರೊಂದಿಗೆ ಮಾತುಕತೆ ನಡೆಸಿದ್ದೇವೆ. ನಾವು ಅಲ್ಲಿಗೆ ತಲುಪಿದಾಗ ಪ್ರಾಯೋಗಿಕವಾಗಿ ತಮಗೆ ಕಡಿಮೆ ಅಂಕ ಬಂದಿದ್ದು, ಶಿಕ್ಷಕರಿಂದ ಸಮರ್ಪಕ ಸ್ಪಂದನೆ ಸಿಕ್ಕಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ ಎಂದು ಬಿಇಒ ಸುರೇಂದ್ರ ಹೆಬ್ರಾಮ್ ತಿಳಿಸಿದ್ದಾರೆ.