ಕಡಾಯಿ ಪಲಾವ್

ಬೇಕಾಗುವ ಸಾಮಗ್ರಿಗಳು

*ಬಾಸುಮತಿ ಅಕ್ಕಿ – ೧/೪ ಕೆ.ಜಿ
*ದಪ್ಪ ಮೆಣಸಿನಕಾಯಿ – ೨ ಪೀಸ್
*ಹಸಿ ಬಟಾಣಿ – ೧ ಕಪ್
*ಈರುಳ್ಳಿ – ೧
*ತುಪ್ಪ – ೩ ಚಮಚ
*ಅರಿಶಿಣ ೧ ಚಮಚ
*ಆಲೂಗಡ್ಡೆ – ೧
*ಬ್ಯಾಡಗಿ ಮೆಣಸಿನಕಾಯಿ – ೩
*ಟೊಮೆಟೊ – ೧
*ಶುಂಠಿ ಬೆಳುಳ್ಳಿ ಪೇಸ್ಟ್ – ೧ ಚಮಚ
*ಚಕ್ಕೆ – ೩ ಪೀಸ್
*ಲವಂಗ – ೩ ಪೀಸ್
*ಏಲಕ್ಕಿ – ೩ ಪೀಸ್
*ಗೋಡಂಬಿ – ೫ ಪೀಸ್
*ಅನಾನಸ್ ಹೂ – ೧ ಪೀಸ್
*ಪಲಾವ್ ಎಲೆ – ೧
*ಕೊತ್ತಂಬರಿ ಸೊಪ್ಪು –
*ಉಪ್ಪು- ೧ ಚಮಚ
*ಎಣ್ಣೆ- ೮ ಚಮಚ

ಮಾಡುವ ವಿಧಾನ:
ಬೌಲಿನಲ್ಲಿ ಗೋಡಂಬಿ, ಏಲಕ್ಕಿ, ಲವಂಗ, ಪಲಾವ್ ಎಲೆ, ಅನಾನಸ್ ಹೂ ಹಾಕಿ ನೆನೆಸಿಡಿ. ಕುಕ್ಕರ್‌ಗೆ ಅಕ್ಕಿ, ಅಗತ್ಯವಿರುವಷ್ಟು ನೀರು, ಉಪ್ಪು ಹಾಕಿ ೨ ವಿಷಲ್ ಕೂಗಿಸಿ. ಬಾಣಲಿಗೆ ಎಣ್ಣೆ ಹಾಕಿ. ಬಿಸಿಯಾದ ನಂತರ ನೆನೆಸಿಟ್ಟ ಪದಾರ್ಥಗಳು, ಈರುಳ್ಳಿ, ಮೆಣಸಿನಕಾಯಿ, ಶುಂಠಿ ಬೆಳುಳ್ಳಿ ಪೇಸ್ಟ್, ಹಸಿ ಬಟಾಣಿ, ಅರಿಶಿಣ, ಬ್ಯಾಡಗಿ ಮೆಣಸಿನಕಾಯಿ ಪೇಸ್ಟ್, ಟೊಮೆಟೊ, ಉಪ್ಪು, ಕೊತ್ತಂಬರಿ ಸೊಪ್ಪು, ತುಪ್ಪ ಹಾಕಿ ಚೆನ್ನಾಗಿ ಕೈಯಾಡಿಸುತ್ತಾ ಬೇಯಿಸಿ. ಇದಕ್ಕೆ ಬೇಯಿಸಿದ ಆಲೂಗಡ್ಡೆ ಹಾಕಿ. ಬಾಣಲಿಗೆ ಅನ್ನ ಹಾಕಿಕೊಂಡು, ಮಿಶ್ರಣ ಮಾಡಿರುವ ಮಸಾಲೆ ಹಾಕಿ ಕಲಸಿಕೊಳ್ಳಿ ನಂತರ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ಕಡಾಯಿ ಪಾಲವು ರೆಡಿ….