ಕಡಾಯಿ ಪನೀರು

ಬೇಕಾಗುವ ಸಾಮಾಗ್ರಿಗಳು:
ಪನೀರ್ ಹೋಳುಗಳು
ಕ್ಯಾಪ್ಸಿಕಂ,
ಈರುಳ್ಳಿ
ಟೊಮೆಟೊ ಪೇಸ್ಟ್ : ೧ ಕಪ್
ಕೊತ್ತಂಬರಿ ಸೊಪ್ಪು
ಹಾಲಿನ ದಪ್ಪ ಕೆನೆ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಒಣ ಮೆಣಸಿನಕಾಯಿ
ದಾಲ್ಚಿನ್ನಿ ತುಂಡುಗಳು
ಲವಂಗ: ೩
ಕೊತ್ತಂಬರಿ ಬೀಜಗ: ೧ ಚಮಚ
ಜೀರಿಗೆ: ಅರ್ಧ ಚಮಚ
ಕಸೂರಿ ಮೆಥಿ: ೧ ಚಮಚ
ಅರಿಶಿನ ಪುಡಿ: ಕಾಲು ಚಮಚ
ಗರಂ ಮಸಾಲ ಪುಡಿ: ಅರ್ಧ ಚಮಚ
ಉಪ್ಪು
ಬೆಣ್ಣೆ

ಮಾಡುವ ವಿಧಾನ:
ಒಂದು ಬಾಣಲೆಗೆ ೫ ಒಣ ಮೆಣಸಿನಕಾಯಿ, ೧ ದೊಡ್ಡ ಚಮಚ ಕೊತ್ತಂಬರಿ ಬೀಜ, ಅರ್ಧ ಚಮಚ ಜೀರಿಗೆ, ೨ ಸಣ್ಣ ಚಕ್ಕೆ ಚೂರು ಹಾಗು ೨ ರಿಂದ ೩ ಲವಂಗಗಳನ್ನು ಹಾಕಿ ಎಣ್ಣೆ ಹಾಕದೆ ಚೆನ್ನಾಗಿ ಹುರಿಯಿರಿ. ಹುರಿದ ಎಲ್ಲ ಮಸಾಲೆ ಸಾಮಾಗ್ರಿಗಳನ್ನು ತಣಿಯಲು ಬಿಟ್ಟು, ನಂತರ ಒಂದು ರುಬ್ಬುವ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಿ.

ಪನೀರ್ ಹೋಳುಗಳನ್ನು ಮತ್ತು ಕ್ಯಾಪ್ಸಿಕಂ ಹೋಳುಗಳನ್ನು ಬೆಣ್ಣೆಯಲ್ಲಿ ೨ ರಿಂದ ೩ ನಿಮಿಷ ಹುರಿದು ತೆಗೆದಿಡಿ.

ಪುನಃ ೧ ದೊಡ್ಡ ಚಮಚ ಬೆಣ್ಣೆಯಲ್ಲಿ ಈರುಳ್ಳಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಈರುಳ್ಳಿ ಮೆತ್ತಗಾಗುವ ತನಕ ಹುರಿದು ನಂತರ ಅದಕ್ಕೆ ಟೊಮೇಟೊ ಪೇಸ್ಟ್ ಹಾಕಿ ಮತ್ತೆರಡು ನಿಮಿಷ ಕುದಿಸಿ.
ಮಾಡಿಟ್ಟುಕೊಂಡ ಮಸಾಲೆ ಪುಡಿ ಹಾಕಿ ಕಲಕಿ.ಜೊತೆಗೆ ಅರಸಿನ ಪುಡಿ,ಮತ್ತು ಗ್ರೇವಿಗೆ ಬೇಕಾದಷ್ಟು ನೀರು ಹಾಕಿ ಕಲಕಿ ಮತ್ತೆರಡು ನಿಮಿಷ ಕುದಿಸಿ.
ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು,ಗರಂ ಮಸಾಲೆ ಪುಡಿ,ಕಸೂರಿ ಮೇಥಿ ಹಾಕಿ ಕಲಕಿ,ಹುರಿದಿಟ್ಟ ಪನೀರ್ ಮತ್ತು ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಕಲಕಿ.ದಪ್ಪ ಕೆನೆ ಹಾಕಿ ಮತ್ತೊಂದು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ.ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಕಡಾಯಿ ಪನೀರ್ ರೆಡಿ!