ಕಡಾಣಿ ಇಲ್ಲದೆ ಜೋಡೆತ್ತಿನ ಬಂಡಿ ಚಲಾಯಿಸಿದ ಸ್ವಾಮೀಜಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.09: ತಾಲ್ಲೂಕಿನ ಹಳೆಕೋಟೆ ಗ್ರಾಮದ ಮರಿ ಶಿವಯೋಗಿ ಮಠದ ಪೀಠಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮೀಜಿ ಇವರಿಂದ ಇಂದು ಕಡೆಗೀಲು (ಕಡಾಣಿ) ಇಲ್ಲದೆ ಜೋಡೆತ್ತಿನ ಬಂಡಿಯನ್ನು ಚಲಾಯಿಸಿದರು. ಬಂಡಿಯು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬಳಗಾನೂರು ಗ್ರಾಮದ ಶ್ರೀರಾಮಲಿಂಗೇಶ್ವರ ಚೌಡೇಶ್ವರಿ ದೇವಸ್ಥಾನಕ್ಕೆ ತಲುಪುವುದು ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ಭಕ್ತಾದಿಗಳು ಸಾಕ್ಷಿಯಾದರು.