ಕಡಲ ತೀರಕ್ಕೆ ಅಪರೂಪದ ಆಮೆಗಳ ಎಂಟ್ರಿ

ಕಾರವಾರ, ಜೂ.೭- ಕಳೆದ ಎರೆಡು ತಿಂಗಳಿಂದ ಲಾಕ್ಡೌರನ್ ನಿಂದಾಗಿ ಮಾನವನ ಪರಿಸರದ ಮೇಲಿನ ದೌಜ್ರ್ಯನ್ಯ ಕಡಿಮೆಯಾಗಿದೆ. ಹೀಗಾಗಿ ಕರಾವಳಿ ಭಾಗದಲ್ಲಿ ಸಮುದ್ರದಲ್ಲಿ ಆಮೆಗಳ ಸಂಚಾರ ಹೆಚ್ಚಾಗಿದ್ದು, ಕಡಲ ತಡಿಯಲ್ಲಿ ಅಪರೂಪದ ಆಮೆಗಳು ಮೊಟ್ಟೆ ಇಟ್ಟು ಮರಿ ಮಾಡತೊಡಗಿವೆ.
ಕಳೆದ ಒಂದು ವರ್ಷದಿಂದ ಕರೊನಾ ಮಹಾಮಾರಿ ಮನುಷ್ಯರ ಓಡಾಟಕ್ಕೆ ನಿರ್ಬಂಧ ಹೇರಿದೆ. ಹೀಗಿರುವಾಗ ಪರಿಸರದ ಮೇಲಿನ ಮಾನವನ ಅತ್ಯಾಚಾರ ಇಳಿಮುಖವಾಗಿದೆ. ಇದರ ಪ್ರತಿಫಲವಾಗಿ ಪರಿಸರ ತನ್ನ ಶಕ್ತಿಯನ್ನ ವೃದ್ಧಿಸಿಕೊಳ್ಳುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕರಾವಳಿ ಭಾಗದಲ್ಲಿ ಆಮೆಗಳು ಸಮುದ್ರ ತೀರಕ್ಕೆ ಬಂದು ಮಾನವನ ಭಯವಿಲ್ಲದೇ ಮೊಟ್ಟೆ ಇಟ್ಟು ಮರಿ ಮಾಡತೊಡಗಿವೆ. ಹೊನ್ನಾವರದ ಕಾಸರಕೋಡು, ಟೊಂಕ ಸೇರಿದಂತೆ ತೀರ ಪ್ರದೇಶದಲ್ಲಿ ಓಲಿವ್ ರಿಡ್ಲಿ ಎಂಬ ಜಾತಿಯ ಅಳಿವಿನಂಚಿನ ಆಮೆಗಳು ಫೆಬ್ರವರಿಯಿಂದ ಈವರೆಗೆ ಸಾವಿರಾರು ಮೊಟ್ಟೆಗಳನ್ನು ಇಟ್ಟು ಮರಿಮಾಡಿ, ಸಮುದ್ರ ಸೇರುತ್ತಿವೆ. ಇದನ್ನು ಗಮನಿಸಿದ ಹೊನ್ನಾವರ ವಿಭಾಗದ ಅರಣ್ಯ ಇಲಾಖೆ ಆಮೆ ಮೊಟ್ಟೆಗಳು ನಾಯಿ, ಮನುಷ್ಯರ ಪಾಲಾಗದಂತೆ ಅವುಗಳ ರಕ್ಷಣೆಗೆ ವ್ಯವಸ್ಥೆ ಮಾಡಿದ್ದು, ಈವರೆಗೆ ೯೦೦ ಮೊಟ್ಟೆಗಳನ್ನು ರಕ್ಷಿಸಿ ಮರಿ ಮಾಡಿಸುವ ಮೂಲಕ ಕಡಲಿಗೆ ಬಿಟ್ಟಿದ್ದಾರೆ. ಈ ಭಾಗದಲ್ಲಿ ಅತೀ ಹೆಚ್ಚು ಆಮೆಗಳು ಮೊಟ್ಟೆ ಇಡುತ್ತಿದ್ದು, ಇವುಗಳ ಬಗ್ಗೆ ಮಾಹಿತಿ ನೀಡಿದವರಿಗೆ ರಕ್ಷಣೆ ಕಾರಣದಿಂದ ಬಹುಮಾನ ನೀಡಲಾಗುತ್ತಿದೆ. ಕಡಲ ತೀರದಲ್ಲಿ ಆಮೆಗಳ ಮಾಹಿತಿ ಕಲೆ ಹಾಕಲು ವಿಶೇಷ ನುರಿತ ಸಿಬ್ಬಂದಿ ಸಹ ನೇಮಕ ಮಾಡಲಾಗಿದೆ.
ಹೊನ್ನಾವರದ ಕಾಸರಕೋಡು ಭಾಗದಲ್ಲಿ ಮೊದಲಿನಿಂದಲೂ ಅಪರೂಪದ ಓಲಿವ್ ರಿಡ್ಲಿ ಜಾತಿಯ ಆಮೆಗಳು ಫೆಬ್ರವರಿಯಿಂದ ಮೊಟ್ಟೆ ಇಡಲು ಬರುತ್ತವೆ. ಜೂನ್ ತಿಂಗಳಲ್ಲಿ ಬಹುತೇಕ ಈ ಜಾತಿಯ ಆಮೆಗಳ ಮೊಟ್ಟೆ ಮರಿಯಾಗಿ ಸಮುದ್ರ ಸೇರುತ್ತವೆ.