ಕಡಲೆ ಬೆಳೆ ಕ್ಷೇತ್ರೋತ್ಸವ

ಬಾಗಲಕೋಟೆ: ಮಾ26:ಕೃಷಿ ವಿಜ್ಞಾನ ಕೇಂದ್ರ, ಬಾಗಲಕೋಟೆ ವತಿಯಿಂದ ತಡವಾದ ಬಿತ್ತನೆಗೆ ಹಾಗೂ ಉಷ್ಣ ನಿರೋಧಕ ಕಡಲೆ ತಳಿ ಜೆ.ಜಿ-14 ಬೆಳೆಯ ಕ್ಷೇತ್ರೋತ್ಸವನ್ನು ಬೆನಕಟ್ಟಿ ಗ್ರಾಮದ ರಂಗನಗೌಡ ಪೋಲಿಸ್ ಪಾಟೀಲ್ ಅವರ ಹೊಲದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರದ ಡಾ. ಮೌನೇಶ್ವರಿ ಆರ್. ಕಮ್ಮಾರ, ಜೆ.ಜಿ-14 ಒಂದು ವಿಷೇಶವಾದ ಕಡಲೆ ತಳಿಯಾಗಿದ್ದು ಇದು ತಡವಾದ ಬಿತ್ತನೆಗೆ ಹಾಗೂ ಉಷ್ಣ ನಿರೋಧಕ ಶಕ್ತಿ ಹೊಂದಿದ್ದು, ಹಲವಾರು ಕಾರಣಗಳಿಂದ ತಡವಾಗಿ ಕಡಲೆ ಬಿತ್ತನೆ ಮಾಡಬೇಕೆನ್ನುವ ರೈತರು ಈ ತಳಿಯನ್ನು ಉಪಯೋಗಿಸುವುದು ಉತ್ತಮ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬೇಸಾಯಶಾಸ್ತ್ರದ ವಿಜ್ಞಾನಿಗಳಾದ ಡಾ. ದಿನೇಶ ಕುಮಾರ ಎಸ್.ಪಿ. ಮಾತನಾಡಿ, ನಮ್ಮಗೆಲ್ಲಾ ತಿಳಿದ ಹಾಗೆ ಕಡಲೆ ಬೆಳೆಯು ಹಿಂಗಾರಿನಲ್ಲಿ ಬೆಳೆಯುವ ಬೆಳೆಯಾಗಿದೆ. ಈ ಬೆಳೆಯು ತಂಪು ಅಥವಾ ಹೆಚ್ಚಿನ ಚಳಿಯಲ್ಲಿ ಬೆಳೆದು ಉತ್ತಮ ಇಳುವರಿ ನೀಡುವ ಬೆಳೆಯಾಗಿದ್ದು, ಈ ಬೆಳೆ ಹೂವು ಬಿಡುವ ಸಮಯದಲ್ಲಿ ಉಷ್ಣಾಂಶದ ಎರಿಳಿತದಿಂದ ಇಳುವರಿಯಲ್ಲಿ ವ್ಯತ್ಯಾಸವಾಗಬಹುದು. ರೈತರು ವಿವಿಧ ಬೆಳೆಗಳನ್ನು ಮುಂಗಾರಿನಲ್ಲಿ ಬೆಳೆದು ಇವುಗಳ ಕಟಾವು ಮತ್ತು ಓಕ್ಕಾಣೆ ಮಾಡುವುದು ತಡವಾದಲ್ಲಿ ಹಾಗೂ ಇತರೆ ಕಾರಣಗಳಿಂದ ತಡವಾಗಿ ಕಡಲೆ ಬಿತ್ತನೆ ಮಾಡಿದಾಗ ಇಳುವರಿಯಲ್ಲಿ ಕುಂಠಿತವಾಗಬಹುದು. ಇದನ್ನು ನೀವಾರಿಸಲು ಉಷ್ಣ ನಿರೋಧಕ ಕಡಲೆ ತಳಿಯಾದ ಜೆ.ಜಿ-14 ಬೀಜವನ್ನು ಬಿತ್ತನೆಗೆ ಉಪಯೋಗಿಸುವುದು ಉತ್ತಮ ಹಾಗೂ ಈ ರೀತಿ ಮಾಡುವುದರಿಂದ ಇಳುವರಿಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಬಾಗಲಕೋಟೆಯ ವಿಜ್ಞಾನಿಗಳಾದ ಐರಾದೇವಿ ಅಂಗಡಿ ಬೆನಕಟ್ಟಿ ಗ್ರಾಮದ ಪ್ರಗತಿಪರ ರೈತರಾದ ಟಿ.ವೈ. ಬೆಣ್ಣೂರ, ಸುರೇಶ ಬಾಳಕ್ಕನವರ, ರಂಗನಗೌಡ ಪಾಟೀಲ, ವೆಂಕಣ್ಣ ಅರಕೇರಿ, ಅಮೀನಪ್ಪ ಮಾದರ, ರಮೇಶ ತೆಗ್ಗಿ, ಪಾಂಡು ಸನ್ನಪ್ಪನವರ, ಸುರೇಶ ಮನಗೂಳಿ, ಪುಂಡಲೀಕ ಬಾಳಕ್ಕನವರ, ಮಂಜು ಬೆಣ್ಣೂರ, ಕೃಷ್ಣಾ ಪಾಟೀಲ, ವೆಂಕಣ್ಣ ಹುಡೇದಮನಿ, ಮುತ್ತಪ್ಪ ಅರಕೇರಿ, ವೆಂಕಟೇಶ ಪಾಟೀಲ, ಪಾಂಡು ಅರಿಷಿಣಗೋಡಿ, ರಾಜು ಅರಿಷಿಣಗೋಡಿ, ಬಸಪ್ಪ ಗುಳೇದ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೃಷಿ ವಿಜ್ಞಾನ ಕೇಂದ್ರ, ಬಾಗಲಕೋಟೆಯ ಮಣ್ಣು ಪ್ರಯೋಗಾಲಯದ ಹಿರಿಯ ತಾಂತ್ರಿಕ ಅಧಿಕಾರಿಗಳಾದ ಶ್ರೀ. ಎಸ್.ಸಿ. ಅಂಗಡಿ ರವರು ಕಾರ್ಯಕ್ರಮದ ನಿರುಪಣೆಮಾಡಿ ವಂದಿಸಿದರು.