ಕಡಲೆ ಖರೀದಿ ಕೇಂದ್ರ ಉದ್ಘಾಟನೆ

ಕುಂದಗೋಳ,ಮಾ6 : ರೈತರಿಗೆ ಅನುಕೂಲಕ್ಕೆ ಕಡಲೆ ಖರೀದ ಕೇಂದ್ರ ಪ್ರಾರಂಬಿಸಿದ್ದು, ತಾಳ್ಮೆಯಿಂದ ತಮ್ಮ ಕಾಳು ಮಾರಾಟ ಮಾಡಿ ಬೆಂಬಲ ಬೆಲೆಯ ಲಾಭ ಪಡೆದುಕೊಳ್ಳಿರಿ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ಅವರು ಪಟ್ಟಣದ ಎ ಪಿ ಎಂ ಸಿ ಆವರಣ ಹಾಗೂ ಯರಗುಪ್ಪಿ ಗ್ರಾಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿ.ಇ.ಒ ಪ್ರಭಯ್ಯ ಮಹಾಂತಒಡೆಯರ ಮಾತನಾಡಿ, ಕುಂದಗೋಳ ಕಡಲೆ ಖರೀದಿ ಕೇಂದ್ರದಲ್ಲಿ ಒಟ್ಟು 1200 ಹಾಗೂ ಯರಗುಪ್ಪಿ ಕೇಂದ್ರ ದಲ್ಲಿ 686 ರೈತರು ಈಗಾಗಲೇ ನೊಂದಣಿ ಮಾಡಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಿ. ಎಲ್ ಡಿ ಬ್ಯಾಂಕಿನ ಅಧ್ಯಕ್ಷ, ಅರವಿಂದ ಕಟಗಿ, ಧಾರವಾಡ ಕೆ ಸಿ ಸಿ ಬ್ಯಾಂಕ್ ನಿರ್ದೇಶಕರಾದ ಉಮೇಶ್ ಹೆಬಸೂರ, ಅಡಿವೆಪ್ಪ, ಶಿವಳ್ಳಿ, ಬಸವರಾಜ ಶಿರಸಂಗಿ, ಬಾಬಾಜಾನ ಮಿಶ್ರಿಕೋಟಿ, ಹಾತಲಗೇರಿ. ಈರಪ್ಪ ನಾಗಣ್ಣವರ, ಗುರು ಚಲವಾದಿ ಅನೇಕರಿದ್ದರು.