ಕಡಲೆ ಖರೀದಿಗೆ ಚಾಲನೆ


ಶಿರಹಟ್ಟಿ,ಮಾ.15: ಪಟ್ಟಣದಲ್ಲಿನ ಶಿರಹಟ್ಟಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ವತಿಯಿಂದ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಮಾಡಲು ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಚಾಲನೆ ನೀಡಿದರು.
ತಾಲೂಕಾ ಟಿಎಪಿಸಿಎಂಎಸ್ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಮಾತನಾಡಿ, ಸರಕಾರದಿಂದ ನಿಗದಿಪಡಿಸಿದ ಪ್ರತಿ ಕ್ವಿಂಟಲ್‍ಗೆ 5335 ರೂ ಇದ್ದು ಪ್ರತಿ ಎಕರೆಗೆ 4 ಕ್ವಿಂಟಲ್‍ನಂತೆ ಒಬ್ಬ ರೈತನಿಂದ ಗರಿಷ್ಟ 15 ಕ್ವಿಂಟಲ್ ವರೆಗೆ ಕಡಲೆ ಖರೀದಿಸಲಾಗುವುದು. ತಾಲೂಕಿನ ರೈತರು ಅಗತ್ಯ ದಾಖಲೆಗಳೊಂದಿಗೆ ಕೇಂದ್ರಕ್ಕೆ ತಾವು ಬೆಳೆದಿರುವ ಬೆಳೆ ಮಾರಾಟ ಮಾಡುವುದರೊಂದಿಗೆ ಅಧಿಕ ಲಾಭ ಪಡೆಯಬೇಕು. ಅಲ್ಲದೇ ರೈತರು ಕೇಂದ್ರಕ್ಕೆ ಕಡಲೆ ಮಾರಾಟ ಮಾಡಲು ಬಂದಾಗ ಅವರಿಗೆ ತೊಂದರೆಯಾಗದಂತೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.
ವಾಯ್.ಎಸ್.ಪಾಟೀಲ, ಸಿ.ಸಿ.ನೂರಶೆಟ್ಟರ, ರಾಮಣ್ಣ ಡಂಬಳ, ಸುರೇಶ ಕಪ್ಪತ್ತನವರ, ಸಿ.ಎಸ್.ಅಕ್ಕಿ, ಸಂದೀಪ ಕಪ್ಪತ್ತನವರ, ಬಸಣ್ಣ ಹೊಸೂರ, ಸಂತೋಷ ಕುಬೇರ, ಮಹೇಶ ಡಂಬಳ, ಸುರೇಶ ಹವಳದ, ಮಹೇಶ ಮತ್ತೂರ, ಸುರೇಶ ವರವಿ ಮುಂತಾದವರು ಉಪಸ್ಥಿತರಿದ್ದರು.