ಕಡಲೆ ಕಾಳು ಖರೀದಿ ಕೇಂದ್ರಕ್ಕೆ ಚಾಲನೆ

ಔರಾದ :ಮಾ.17: ತಾಲೂಕಿನ ಜೋಜನಾ ಗ್ರಾಮದಲ್ಲಿ ರಿಲಯನ್ಸ್ ಫೌಂಡೇಷನ್ ಮಾರ್ಗದರ್ಶನದ ಬೀದರ ಕೃಷಿ ಉತ್ಪಾದಕರ ಕಂಪನಿಯಲ್ಲಿ ರೈತರು ತಾವು ಬೆಳೆದ ಕಡಲೆ ಕಾಳುಗಳನ್ನು ನಿಗದಿತ ದರದಲ್ಲಿ ಮಾರಾಟ ಮಾಡಬಹುದೆಂದು ಎಫ್ ಪಿಒ ನಿರ್ದೇಶಕ ಘಾಳರೆಡ್ಡಿ ಮುಂಗೆ ನುಡಿದರು.

ಗುರುವಾರ ತಾಲೂಕಿನ ಜೋಜನಾ ಎಫ್ ಪಿಒ ದಲ್ಲಿ ಕಡಲೆ ಕಾಳುಗಳ ಖರೀದಿ ಪ್ರಕ್ರೀಯೇಗೆ ಚಾಲನೆ ನೀಡಿ ಮಾತನಾಡಿದ ಅವರು, ಒಂದು ಕ್ವಿಂಟಾಲ್ ಕಡಲೆ ಕಾಳುಗಳಿಗೆ 5335ರೂಗಳ ದರ ಲಭಿಸಲಿದೆ. ಪ್ರತಿ ರೈತರಿಂದ ಪ್ರತಿ ಎಕರೆಗೆ ಗರಿಷ್ಠ 04(ನಾಲ್ಕು) ಕ್ವಿಂಟಾಲ್‍ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಠ 15(ಹದಿನೈದು) ಕ್ವಿಂಟಾಲ್ ಎಫ್.ಎ.ಕ್ಯೂ, ಗುಣಮಟ್ಟದ ಕಡಲೆಕಾಳನ್ನು ಖರೀದಿಸಲಾಗುತ್ತಿದೆ. ಬೆಂಬಲ ಬೆಲೆ ಯೋಜನೆಯಡಿ ನೊಂದಣಿ ಮಾಡಿದ ನಂತರ ಎನ್ ಐಸಿ ತಂತ್ರಾಂಶದಿಂದ ನಾಫೆಡ್ ಸಂಸ್ಥೆಯ ತಂತ್ರಾಂಶಕ್ಕೆ ರೈತರ ನೊಂದಣಿ ಮಾಹಿತಿಯನ್ನು ಒದಗಿಸಲಾಗಿದ್ದು, ನಾಫೆಡ್ ಸಂಸ್ಥೆಯು ತಮ್ಮ ತಂತ್ರಾಂಶದಲ್ಲಿ ಈ ಮಾಹಿತಿಯನ್ನು ಬಳಸಿ ರೈತರಿಂದ ಕಡಲೆಕಾಳನ್ನು ಖರೀದಿಸಲಾಗುತ್ತಿದೆ. ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ನಾಫೆಡ್ ಮಾರ್ಗಸೂಚಿಯನ್ವಯ ಹಾಗೂ ತಾಂತ್ರಿಕ ಮತ್ತು ವೈಜ್ಞಾನಿಕ ಸೌಲಭ್ಯದಿಂದ ಖರೀದಿ ಜರುಗುತ್ತಿದೆ. ಆದುದರಿಂದ ಎಲ್ಲ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಘಾಳರೆಡ್ಡಿ ಮುಂಗೆ, ಗಣಪತಿ ಸಿಂಗಟೆ, ಅಯೂಬ್ ಪಟೇಲ್ , ಸಂಗಮೇಶ ಕೋಡಗೆ, ಶಿವು ಮಡಿವಾಳ್, ಸತ್ತರ್ ಮಿಯಾ, ನಾಗಶೆಟ್ಟಿ ಇತರಿದ್ದರು.


ಸೂಕ್ತ ಗ್ರೇಡಿಂಗ್ ಮೂಲಕ ಕಡಲೆ ಖರೀದಿಸಲಾಗುತ್ತದೆ. ಯಾವುದೇ ದಲ್ಲಾಳಿಗಳಿಲ್ಲದೇ ನೇರವಾಗಿ ಮಾರಾಟ ಮಾಡುವುದರಿಂದ ರೈತರಿಗೆ ಇನ್ನಷ್ಟು ಹೆಚ್ಚಿನ ದರ ಸಿಗುತ್ತದೆ. ಬೆಂಬಲ ಬೆಲೆ ಯೋಜನೆಯ ಮಾರ್ಗಸೂಚಿಗಳನ್ವಯ ಕಡಲೆಕಾಳಿನ ಎಫ್.ಎ.ಕ್ಯೂ ಗುಣಮಟ್ಟವನ್ನು ಖರೀದಿ ಕೇಂದ್ರದ ಹಂತದಲ್ಲಿಯೇ ಖಾತರಿಪಡಿಸಿಕೊಂಡು ಖರೀದಿ ಪ್ರಕ್ರಿಯೆ ಮಾಡಲಾಗುತ್ತದೆ. ರೈತರ ಹೆಸರಿನ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಉತ್ಪನ್ನದ ಮೌಲ್ಯವು ನೇರವಾಗಿ ಜಮಾಮಾಡಲಾಗುತ್ತದೆ.

ರಾಮಚಂದ್ರ ಶೇರಿಕಾರ್
ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಿಲಯನ್ಸ್ ಫೌಂಡೇಷನ್ ಬೀದರ್