ಕಡಲೆಕಾಳು ಖರೀದಿ ಕೇಂದ್ರಕ್ಕೆ ಚಾಲನೆ

ಬಾದಾಮಿ, ಮಾ15: ಪಟ್ಟಣದ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ(ಟಿಎಪಿಸಿಎಂಎಸ್) ವತಿಯಿಂದ ಸರಕಾರದ ಕ್ವಿಂಟಲ್ ಗೆ ರೂ.5335 ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ನಿರ್ದೇಶಕ ಸಿದ್ದಯ್ಯ ಹಿರೇಮಠ, ಬಿ.ಸಿ.ಹಿರೇಹಾಳ, ಬಾಲಪ್ಪ ಮದಕಟ್ಟಿ, ಎಪಿಎಂ ಕಾರ್ಯದರ್ಶಿ ರವಿ ರಾಠೋಡ, ಕೃಷಿ ಸಹಾಯಕ ನಿರ್ದೇಶಕ ಅಶೋಕ ತಿರಕನ್ಮವರ, ಸಹಾಯಕ ನಿರ್ದೇಶಕ ಸಿ.ಎಸ್.ಅಂಗಡಿ, ಈರಣ್ಣ ಬೇಲಿ, ಶಿವಾನಂದ ಗಾನಗೇರ,ತುಳಜಪ್ಪ ಶೆಲಿಕೇರಿ,ಎಸ್.ಎನ್. ಅಂಗಡಿ ಸೇರಿದಂತೆ ಇತರರು ಹಾಜರಿದ್ದರು.