ಕಡಲಬಾಳು ಗ್ರಾ ಪಂಗೆ ಎರಡನೇ ಅವಧಿಯ  ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಆ.06 ತಾಲೂಕಿನ ಕಡಲಬಾಳು ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಎಂ ಎಂ ಅನ್ನಪೂರ್ಣಮ್ಮ ರುದ್ರಯ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಲವಾದಿ ಶಾಂತ ನಾಗರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
 ಚುನಾವಣಾ ಅಧಿಕಾರಿಗಳಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿ ಪರಮೇಶ್ವರ್ ಕರ್ತವ್ಯ ನಿರ್ವಹಿಸಿದರು,
 ಶಾಸಕ ಕೆ ನೇಮಿರಾಜ್ ನಾಯ್ಕ್ ನೂತನ ಅಧ್ಯಕ್ಷಮತ್ತು   ಉಪಾಧ್ಯಕ್ಷರಿಗೆ ಅಭಿನಂದನೆ ತಿಳಿಸಿದರು ಈ ಸಂದರ್ಭದಲ್ಲಿ  ಗ್ರಾಮ ಪಂಚಾಯಿತಿ ಸದಸ್ಯರು , ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿಬ್ಬಂದಿ ವರ್ಗದವರ, ಹಾಗೂ ಕಡಲಬಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಮುಖಂಡರು ಇದ್ದರು

One attachment • Scanned by Gmail

hbh01.jpg