ಕಡಬ ತಾಲೂಕಿನಾದ್ಯಂತ ಉತ್ತಮ ಮಳೆ

ಕಡಬ, ಎ.೩೦- ಕಡಬ ತಾಲೂಕಿನಾದ್ಯಂತ ಗುರುವಾರ ಸಾಯಂಕಾಲ ಗಾಳಿ,ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಕೊಯಿಲ,ರಾಮಕುಂಜ,ಆಲಂಕಾರು, ಪೆರಾಬೆ, ಕೊಡಿಂಬಾಳ, ನೂಜಿಬಾಳ್ತಿಲ, ಬಿಳಿನೆಲೆ,ಕಾಣಿಯೂರು, ಚಾರ್ವಾಕ, ಕಾಯಿಮಾನ, ಬೆಳಂದೂರು, ಸವಣೂರು ಮೊದಲಾದ ಗ್ರಾಮ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ.
ಚಾರ್ವಾಕ ಗ್ರಾಮದ ಖಂಡಿಗ ವೇದಾವತಿ ಎಂಬುವವರ ಮನೆ ಮೇಲೆ ಪಕ್ಕದಲ್ಲಿದ್ದ ಮರವೊಂದು ಮುರಿದು ಬಿದ್ದು ಅಪಾರ ನಷ್ಟವಾಗಿದೆ. ಘಟನೆಯಿಂದ ಮನೆಯ ಎದುರಿನ ಛಾವಣಿಗೆ , ಡಿಶ್ ಮೊದಲಾದುವುಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಕಾಣಿಯೂರು ಪಂಚಾಯಿತಿ ಉಪಾಧ್ಯಕ್ಷ ಗಣೇಶ್ ಉದನಡ್ಕ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಕರಣಿಕರಿಗೆ ಈ ಬಗ್ಗೆ ದೂರು ನೀಡಲಾಗಿದೆ.