ಕಡಬ: ಅಕ್ರಮ ಜಾನುವಾರು ಸಾಗಾಟ, ಜಾನುವಾರು, ಪಿಕಪ್ ವಶಕ್ಕೆ

ಕಡಬ, ಎ.೭- ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದಾರೆಂಬ ಆರೋಪದಲ್ಲಿ ಪಿಕ್ ಪ್ ಸಹಿತ ಜಾನುವಾರನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ.

ಕಲ್ಲುಗುಡ್ಡೆಯಿಂದ ಕಡಬದತ್ತ ಪಿಕ್‌ಪ್ ವಾಹನದಲ್ಲಿ ಕಡಬದ ಸಂತೋಷ್ ಎಂಬವರು ಒಂದು ಕರು ಮತ್ತು ಒಂದು ದನ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

ಈ ವೇಳೆ ಬಜರಂಗದಳದ ಕಾರ್ಯಕರ್ತರು ವಾಹನಕ್ಕೆ ತಡೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಎಸ್ ಪಿ ಅದೇಶ ಮೇರೆಗೆ ದನ ಸಾಗಟಗಾರನನ್ನು, ಗೋವುಗಳನ್ನು, ವಾಹನವನ್ನು ಕಡಬ ಎಸ್ ಐ ರುಕ್ಮ ನಾಯ್ಕ ಬಿಡುಗಡೆಗೊಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಅಕ್ರೋಶಿತರಾದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಬುಧವಾರ ತುರ್ತು ಸಭೆ ಸೇರಿ ಕಡಬದಲ್ಲಿ ನಡೆಯುತ್ತಿರುವ ಗೋವು ಅಕ್ರಮ ತಡೆಯುವಲ್ಲಿ ಕಡಬದಲ್ಲಿ     ವಿಫಲರಾಗಿದ್ದಾರೆ ಎಂದು ಉಗ್ರಪ್ರತಿಭಟನೆಯ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಮಂಗಳವಾರ ನಡೆದ ಗೋಸಾಗಟ ಕಾನೂನತ್ಮಕವಾಗಿದೆ, ೧೫ ಕಿ.ಮೀಟರ್ ಒಳಗಡೆ ಗೋ ಸಾಗಟ ಮಾಡಲು ಕಾನೂನಿನಲ್ಲಿ ಅವಕಾಶವಿದೆ ಹಾಗಾಗಿ ಬಿಡುಗಡೆಗೊಳಿಸಲಾಗಿದೆ ಎಂದು ಎಸ್ ಐ ಘಟನೆ ಬಗ್ಗೆ ಹಿಂದೂ ಪರ ಸಂಘಟನೆಯವರಿಗೆ ವಿವರಿಸಿದ್ದಾರೆ  ಎಂದು ತಿಳಿದು ಬಂದಿದೆ.