ಕಡಬಗೆರೆಯಲ್ಲಿ ನೂತನ ದೇವಾಲಯ ಉದ್ಘಾಟಿಸಿದ ಸಿರಿಗೆರೆ‌ ಶ್ರೀ

ಹರಪನಹಳ್ಳಿ.ಮಾ.೭; ಭಾರತ ಸರ್ಕಾರ ಇಂಡ್ಸ್ಟ್ರಿಯಲ್ ಕಾರಿಡರ್ ಮಾಡಲು ಹೊರಟಿರುವುದಕ್ಕೆ ಅಭ್ಯಾಂತರವಿಲ್ಲ ಆದರೆ ರೈತರೇ ಖಾಯಂ ಭೂ ಒಡೆಯರಾಗಿ ಮುಂದುವರಿಯಬೇಕು ಆ ಭೂಮಿಯಲ್ಲಿ ಬಿತ್ತಿ ಬೆಳೆಯುತ್ತಿದ್ದ ವರಮಾನಕ್ಕೆ ಅನುಗುಣವಾಗಿ ಪ್ರತಿ ವರ್ಷ ರೈತರಿಗೆ ಹಣ ಪಾವತಿಸುವಂತೆ ಕಾನೂನು ರಚಿಸಬೇಕಾಗಿದೆ ಎಂದು ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ತಾಲ್ಲೂಕಿನ ಕಡಬಗೆರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ದೇವಸ್ಥಾನಗಳ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಹಾಗೂ ದ್ವಾರ ಬಾಗಿಲು ಉದ್ಘಾಟನೆ, ನೂತನ ಕರಗಲ್ಲು ಪ್ರತಿಷ್ಠಾಪನಾ ಸಮಾರಂಭದ ಸಾನಿದ್ಯವಹಿಸಿ ಆರ್ಶೀವಚನ ನೀಡಿ ಮಾತನಾಡಿದ ಅವರು, ರೈತರ ಜಮೀನಗಳನ್ನು ವಶ ಪಡಿಸಿಕೊಂಡ ಕಂಪನಿ ಪರಿಹಾರವಾಗಿ ರೈತರಿಗೆ ಒಂದೇ ಬಾರಿ ಈಡಗಂಟು ನೀಡಬಾರದು,ಪ್ರತಿ ವರ್ಷ ರೈತರಿಗೆ ಹಣ ಸಂದಾಯ ಮಾಡುತ್ತಿರಬೇಕು. ರೈತನ ಕೈಗೆ ಹಣ ಬಂದರೆ ಉಳಿಯುವುದಿಲ್ಲ, ಹತ್ತಿರದ ಸಂಬAಧಿಕರ ಪಾಲಾಗಿ ರೈತ ನಿರ್ಗತಿಕನಾಗುತ್ತಾನೆ.ಅಲ್ಲದೇ ಕಂಪನಿ ಮುಳುಗಡೆಯಾದರೇ ಭೂ ಒಡೆತನ ಮತ್ತೆ ರೈತನಿಗೆ ಉಳಿಯಬೇಕು, ಇದರಿಂದ ರೈತ ಹಾಗೂ ಕಂಪನಿಗೆ ಒಳಿತು. ಆ ರೀತಿ ಕಾನೂನು ರಚಿಸಿದರೆ ಒಳ್ಳೆಯದು ಎಂದು ಬಿಜೆಪಿ ದುರೀಣ ನಡ್ಡಾ ಅವರಿಗೆ ಸಲಹೆ ನೀಡಿದ್ದೇನೆ.ಬಿಜೆಪಿ ,ಕಾಂಗ್ರೆಸ್, ಜೆಡಿಎಸ್ ಸರ್ಕಾರ ಎನ್ನುವುದು ಮುಖ್ಯವಾಗಬಾರದು, ಕರ್ನಾಟಕ ಸರಕಾರದ ಯೋಜನೆಗಳು ಜನರಿಗೆ ತಲಪುವ ಕೆಲಸವನ್ನು ಮತದಾರ ಹಾಗೂ ಜನಪ್ರತಿನಿಧಿಗಳು ನಡೆದುಕೊಳ್ಳಬೇಕು ಎಂದರು.ಗAಗಾ, ತುಂಗಾ,ಕಾಶಿ ಕ್ಷೇತ್ರಗಳಿಗೆ ಯಾತ್ರಿಗಳಾಗಿ ಹೋಗಿ ಪ್ರವಾಸಿಗರಾಗಿ ಹೋಗಬೇಡಿ,ನಮ್ಮ ಸಂಸ್ಕೃತಿ ಮೋಜು ಮಸ್ತಿಯಲ್ಲ, ಡೊಳ್ಳು ಕುಣಿತವಿರಲಿ ಕೋಲು ಬಡಿಗೆ ಹಿಡಿದು ಬಡಿದಾಡುವ ಜಂಜಾಟ ಬೇಡ,ಜಾತ್ರೆ ತೇರು ನಡೆಯುವ ಊರುಗಳಲ್ಲಿ ಸಂಘಟಿತವಾಗುತ್ತದೆ.ಆದ್ದರಿಂದ ಮುಂದಿನ ವರ್ಷ ಕಡಬಗೇರಿಯಲ್ಲಿ ತೇರು ರಥ ಸಾಗಲಿ ಎಂದು ಅಶಿರ್ವಾಚನ ನೀಡಿ ಹಾರೈಸಿದರು.ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ ಮುಜರಾಯಿ ಇಲಾಖೆಯಿಂದ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ 5 ಲಕ್ಷ ರೂ. ಮಂಜೂರು ಮಾಡಿಸಿ ಕೊಟ್ಟಿದ್ದೇನೆ, ಮುಂದಿನ ಒಂದು ತಿಂಗಳಲ್ಲಿ ತಾಲೂಕಿನ 60 ಕೆರೆಗಳಿಗೆ ನೀರು ತುಂಬಿಸಲಾಗುವುದು, ನಾನು ಮತ್ತು ಸಂಸದ ಸಿದ್ದೇಶ್ವರ್ ಸೇರಿಕೊಂಡು ಅಧಿಕಾರಿಗಳ ಜೊತೆ ಚರ್ಚಿಸಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಹೇಳಿದರು.ಬಳ್ಳಾರಿ ಸಂಸದ ವೈ.ದೇವೆಂದ್ರಪ್ಪ ಮಾತನಾಡಿ ಕೊಟ್ಟೂರು ತರಳಬಾಳು ಹುಣ್ಣಿಮೆಯಂತೆ ಕಡಬಗೇರಿ ಶ್ರೀ ಆಂಜನೇಯ ದೇವಸ್ಥಾನ ಕಾರ್ಯಕ್ರಮಕ್ಕೆ ಭಕ್ತಾಧಿಗಳು ಹರಿದು ಬಂದಿದ್ದರಿAದ ತುಂಬಾ ಸಂತೋಷದ ವಿಷಯ, ಈಗಾಗಲೇ ಕೂಡ್ಲಿಗಿ ಕೊಟ್ಟೂರು ತಾಲೂಕಿನಲ್ಲಿ ತರಳಬಾಳು ಗುರುಗಳ ಆಶೀರ್ವಾದದಿಂದ ಕೆರೆಗಳಿಗೆ ನೀರು ಹರಿದಿದೆ.

ಬ್ರೀಡ್ಜ್ ಕಂ.ಬ್ಯಾರೇಜ್ ಕಾಮಗಾರಿ ಪ್ರಾರಂಬಿಸಲಾಗಿದೆ, ಮುಂದಿನ ದಿನಗಳಲ್ಲಿ ಹರಪನಹಳ್ಳಿ ಕೆರೆಗೆ ಯಡಿಯೂರಪ್ಪ, ಸಿ.ಎಂ.ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಕೆಪಿಸಿಸಿ ಮಾದ್ಯಮಾ ವಿಶ್ಲೇಷಕಿ ಎಂ.ಪಿ.ವೀಣಾ ಮಹಾಂತೇಶ್, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಬಂದೋಳ್ ಮಂಜುನಾಥ, ಕರ್ನಾಟಕ ರಾಜ್ಯ ಸೌಹರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರು. ಅಧ್ಯಕ್ಷ ಜಿ.ನಂಜನಗೌಡ್ರು, ಕ.ರಾ.ಸಾ.ನಿ. ನಿರ್ದೇಶಕ ಆರುಂಡಿ ನಾಗರಾಜ ಹಾಗೂ ಮಹಾಬಲೇಶ್ವರಗೌಡ್ರು ಈ ಸಂದರ್ಭದಲ್ಲಿ ಮಾತನಾಡಿದರು.ಈ ಸಂದರ್ಭದಲ್ಲಿ

ಅಕ್ಷರ ಸೀಡ್ಸ್ ನ ಮಾಲೀಕ ಹಾಗೂ ಕಾಂಗ್ರೇಸ್ ಮುಖಂಡ ಎನ್.ಕೊಟ್ರೇಶ್, ಯಶವಂತಗೌಡ, ವೈ.ಡಿ.ಅಣ್ಣಪ್ಪ,ಪ್ರಶಾಂತ್ ಪಟೇಲ್, ಉಪನ್ಯಾಸಕಿ ಸುಮತಿ ಜಯ್ಯಪ್ಪ,ಸಾಸ್ವೆಹಳ್ಳಿ ಚನ್ನಬಸವನಗೌಡ್ರು, ಸ್ವಾಗತ- ನಾಗನಗೌಡ ಪಟೇಲ್, ಪ್ರಾಸ್ತವಿಕ ನುಡಿ -ಬಸವರಾಜ್, ನಿರೂಪಣೆ-ಸಿದ್ದೇಶ್ ಶಿಕ್ಷಕ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬಗೆರೆ ಗ್ರಾಮದ ಶ್ರೀ ಆಂಜನೇಯ ಸೇವಾ ಸಮಿತಿ ಅಧ್ಯಕ್ಷ ಜಿ.ಭರಮನಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅನಸೂಯ ಮಂಜುನಾಥ್, ಗ್ರಾ. ಪಂ.ಉಪಾದ್ಯಕ್ಷ ಗೀತಾ ತಿರುಪತಿ, ಕಡಬಗೆರೆ ಸಮಸ್ತ ಗ್ರಾಮಸ್ಥರು, ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.