ಕಡತ ಶೀಘ್ರ ವಿಲೇವಾರಿಗೆ ಸರಳೀಕರಣ ಅಗತ್ಯ: ನೇಮಿರಾಜ್ ನಾಯ್ಕ್


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ನ.12 ಸಾರ್ವಜನಿಕರಿಗೆ ಉಪಯೋಗವಾಗುವ ಸೇವೆಗಳನ್ನು ಅತಿ ಶೀಘ್ರ ವಿಲೇವಾರಿ ಮಾಡುವ ಸರಳೀಕರಣ ಅಗತ್ಯವಾಗಿದೆ ಎಂದು  ಶಾಸಕ ಕೆ ನೇಮಿರಾಜ್ ನಾಯ್ಕ್ ಹೇಳಿದರು.
 ಪಟ್ಟಣದ ಸರ್ಕ್ಯೂಟ್ ಹೌಸ್ ನಲ್ಲಿ ಕರೆದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕ್ಷೇತ್ರ ವ್ಯಾಪ್ತಿಯ ಸುಮಾರು 98 ಕಂದಾಯ ಗ್ರಾಮಗಳಿದ್ದು 111 ಮಜಾ ಗ್ರಾಮಗಳಿದ್ದು ಹತ್ತು ಬೆಚಾರಕ್ ಗ್ರಾಮಗಳಿವೆ ಇದಕ್ಕೆ ಸಂಬಂಧಿಸಿದಂತೆ ಪೌತಿ, ಪೋಡಿ, ಪಿಂಚಣಿ  p -3 ಎಂಬ ಶೀರ್ಷಿಕೆಯಲ್ಲಿ ಸಾರ್ವಜನಿಕರಿಗೆ ಸಂಬಂಧಿಸಿದ ಕಾಗದ ಪತ್ರಗಳು ಶೀಘ್ರ ತಲುಪಿಸುವ ಕೆಲಸವಾಗಬೇಕಾಗಿದೆ. ಇದರ ಬಗ್ಗೆ ಜನರಲ್ಲಿ   ಅರಿವು ಮೂಡಿಸಬೇಕಾಗಿದೆ. ಸರ್ಕಾರ ಸೌಲಭ್ಯಗಳನ್ನು ಪಡೆದುಕೊಳ್ಳಲು ಖಾತೆಗಳ ಬದಲಾವಣೆ ಅವಶ್ಯ. ರಾಜ್ಯದಲ್ಲಿಯೇ ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡುವ ದೃಷ್ಟಿಯಿಂದ ಪಿ 3 ಪ್ರೋಗ್ರಾಮ್ ಯಶಸ್ವಿಯಾಗಲು ಅಧಿಕಾರಿಗಳು ಉತ್ತಮ ಕೆಲಸ ಮಾಡುವ ಮೂಲಕ ಜನಸಾಮಾನ್ಯರ ಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಬೇಕಾಗಿದೆ ಎಂದರು.
ತಹಶೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ಮಾತನಾಡಿ ಕೆಲವು ಸಂದರ್ಭದಲ್ಲಿ ಕಾನೂನುಗಳನ್ನು ಮೀರಿ ಒಳ್ಳೆ ಕೆಲಸ ಮಾಡುವಂತಹ ಸಂದರ್ಭ ಬರಬಹುದು. ಒಳ್ಳೆಯ ಕೆಲಸಕ್ಕೆ ಯಾವ ಕಾನೂನು ಅಡ್ಡಿಗಳು ಇರುವುದಿಲ್ಲ. ವೈಯಕ್ತಿಕ  ಕಾರಣಗಳಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುವುದು ಸರಿಯಲ್ಲ. ಆಧಾರ್ ತಿದ್ದುಪಡಿಗೆ ಸಂಬಂಧಿಸಿದಂತೆ ತಾಲೂಕ ಆಡಳಿತದ ಕೇಂದ್ರದಲ್ಲಿ ತೆರೆಯಬೇಕಾಗಿದೆ. ಹೊರಗಡೆ ಸಾರ್ವಜನಿಕರಿಂದ ಮನಸ್ಸಿಗೆ ಬಂದಂತೆ ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಿದರು.
 ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಕೊಟ್ಟೂರಿನ ಲೀಲಾವತಿ ಹೊಸಪೇಟೆಯ ನಾಗರಾಜ್ ಭೂಮಾಪನ ಇಲಾಖೆಯ ಎಡಿಎಲ್ ಆರ್ ಬಸವರಾಜ್ ರೋಣದ, ಶಾಸಕರ ಆಪ್ತ ಸಹಾಯಕ ದೊಡ್ಡಬಸಪ್ಪ ರೆಡ್ಡಿ, ಹಾಗೂ  ಕ್ಷೇತ್ರದ ಅಧಿಕಾರಿ ವರ್ಗ ಪಾಲ್ಗೊಂಡಿದ್ದರು.