ಕೋಲಾರ,ಸೆ,೨೬:ಕಡತಗಳ ವಿಲೆವಾರಿಯಲ್ಲಿ ಕೋಲಾರವು ೨೯ನೇ ಸ್ಥಾನದಲ್ಲಿತ್ತು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ೪ ತಿಂಗಳಲ್ಲಿಯೆ ೧೧ ಸ್ಥಾನಕ್ಕೆ ಬಂದಿರುವುದು ಪ್ರಗತಿದಾಯಕವಾಗಿದ್ದು ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬ ಸಂದೇಶವನ್ನು ನೀಡುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು,
ನಗರದ ಟಿ.,ಚೆನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಿದ್ದ ಜನತಾದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ನಾನು ಶುಕ್ರವಾರ ಹೊರತು ಪಡೆಸಿ ಉಳಿದ ಎಲ್ಲಾ ದಿನಗಳು ವಿಧಾನ ಸಭಾ ಕ್ಷೇತ್ರದಲ್ಲಿಯೇ ಇರುತ್ತೇನೆ, ಹಳೇ ಡಿ.ಸಿ. ಕಚೇರಿ ಅವರಣದಲ್ಲಿಯೇ ನನ್ನ ಕಚೇರಿಯನ್ನು ಪ್ರಾರಂಭಿಸಿದ್ದೇನೆ, ಜಿಲ್ಲಾಡಳಿತ ಕಚೇರಿಯ ಪಕ್ಕದಲ್ಲಿಯೇ ನನ್ನ ಫಾರಂಹೌಸ್ ಇದ್ದು ಮನೆಯಿಂದ ಕರೆದರೆ ಜಿಲ್ಲಾ ಕಚೇರಿಗೆ ಕೇಳುತ್ತದೆ ಹೀಗಿರುವಾಗ ಯಾರೂ ವಿಧಾನ ಸಭಾ ಶಾಸಕರು ಕ್ಷೇತ್ರದಲ್ಲಿ ಸಿಗುವುದೇ ಇಲ್ಲ ಎಂದು ಅಪಪ್ರಚಾರ ಮಾಡುತ್ತಿರುವುದು ಸಮಂಜಸವಲ್ಲ ಸರಿಯಾದ ಮಾಹಿತಿಯನ್ನು ಅರಿತು ಮಾತನಾಡ ಬೇಕು ಎಂದು ಹೇಳಿದರು,
ಈ ಕಾರ್ಯಕ್ರಮಕ್ಕೆ ನಾವೆಲ್ಲಾ ಇಷ್ಟ ಪಟ್ಟು ಭಾಗವಹಿಸಿದ್ದೇವೆ. ಪ್ರತಿ ದಿನವು ಒಂದಲ್ಲ ಒಂದು ಕಾರ್ಯಕ್ರಮ ಇದ್ದೇ ಇರುತ್ತದೆ. ಯಾವೂದನ್ನು ನಿರ್ಲಕ್ಷಿಸದೆ ಎಲ್ಲದಕ್ಕೂ ಹಾಜರಾತಿ ಹಾಕುವ ಮೂಲಕ ನಮ್ಮ ಕರ್ತವ್ಯವನ್ನು ನಾವು ಮಾಡುತ್ತಾ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗುತ್ತಿದ್ದೇವೆ.ನಿಮ್ಮ ಸೇವೆ ಬಿಟ್ಟು ನಮಗೆ ಬೇರೆ ಯಾವ ಕೆಲಸವು ಇಲ್ಲ ಎಂದರು,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಮಾತನಾಡಿ ಗೃಹ ಇಲಾಖೆ ವ್ಯಾಪ್ತಿಯಲ್ಲಿ ೨೦ ಸೇವೆಗಳು ಲಭ್ಯವಾಗುತ್ತದೆ ಸಾರ್ವಜನಿಕರು ಇದನ್ನು ಸದ್ಬಳಿಸಿ ಕೊಳ್ಳುವಂತಾಗ ಬೇಕೆಂದು ತಿಳಿಸಿದರು,
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪದ್ಮಬಸವಂತಪ್ಪ ಮಾತನಾಡಿ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಪರಿಶ್ರಮದಿಂದ ಸ್ವಚ್ಚತೇಯ ಸೇವೆಯಲ್ಲಿ ರಾಜ್ಯದಲ್ಲಿಯೇ ಕೋಲಾರ ಜಿಲ್ಲೆಯು ೫ನೇ ಸ್ಥಾನದಲ್ಲಿದೆ. ನರೇಗಾದಲ್ಲಿ ೧೫೦ ದಿನದ ಉದ್ಯೋಗ್ ಖಾತ್ರಿ ಯೋಜನೆಗೆ ಸಿದ್ದವಾಗುತ್ತಿದೆ ಯಾರೂ ಸಹ ಉದ್ಯೋಗವಿಲ್ಲ ನಾವು ನಿರುದ್ಯೋಗಿಗಳು ಎಂಬ ಮಾತುಗಳು ಬರಬಾರದು ಎಲ್ಲರಿಗೂ ಉದ್ಯೋಗವನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.