ಕಡಣಿ ಸಮ್ಮೇಳನ ದತ್ತಿ ಪ್ರಶಸ್ತಿ -ಶಿವಶರಣ ಗುಂದಗಿ ಆಯ್ಕೆ

ವಿಜಯಪುರ:ನ.13:ಪ್ರಶಸ್ತಿಗಳು ನಮ್ಮ ಜವಾಬ್ದಾರಿ ಹೆಚ್ಚಿಸುತ್ತವೆ. ಈ ನಿಟ್ಟಿನಲ್ಲಿ ಸಾಹಿತಿ ಶಿವಶರಣ ಗುಗ್ಗರಿ ರಚಿತ ಆಲಮೇಲ ತಾಲೂಕ ದರ್ಶನ ಸಂಶೋಧನ ಕೃತಿ ಪ್ರಶಸ್ತಿಗೆ ಆಯ್ಕೆ ಆಗಿರುವದು ಸಂತೋಷ. ಯುವ ಲೇಖಕರಿಗೆ ಪ್ರೇರಣೆಯಾಗಿದೆ ಇಂದು ಅವರ ಪರಿಶ್ರಮ ಹಾಗು ಜ್ಞಾನಕ್ಕೆ ಸಂದ ಗೌರವ ಎಂದು ಹಿರಿಯ ಸಾಹಿತಿ ಫ ಗು ಸಿದ್ಧಾಪುರ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕಡಣಿ ಪ್ರಥಮ ಸಾಹಿತ್ಯ ಜಿಲ್ಲಾ ಸಮ್ಮೇಳನ ನೆನಪಿಗಾಗಿ ದತ್ತಿಯನ್ನು ನೀಡಲಾಗಿತ್ತು. 2021ನೇಯ ಸಾಲಿನ ಪ್ರಶಸ್ತಿ ಪುರಸ್ಕøತ ಸರಕಾರಿ ಪ್ರೌಢ ಶಾಲೆ ಶಿಕ್ಷಕ ಶಿವಶರಣ ಗುಗ್ಗರಿ ಇವರಿಗೆ ದತ್ತಿ ಪ್ರಶಸ್ತಿ ನೀಡಿ ಮಾತನಾಡುತ್ತಾ ಉತ್ತಮ ಸಂಪನ್ಮೂಲ ಹಾಗು ಸಂಶೋಧನ ಗ್ರಂಥವಾಗಿದ್ದು ಎಲ್ಲರಿಗೂ ಮಾಹಿತಿ ನೀಡುವದಾಗಿದೆ ಎಂದರು
ಪ್ರಶಸ್ತಿ ಪಡೆದು ಮಾತನಾಡಿದ ಶಿವಶರಣ ಗುಗ್ಗರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅರ್ಥಪೂರ್ಣ ಸಾಹಿತ್ಯಿಕ ಕಾರ್ಯಕ್ರಮ ಹಮ್ಮಿಕೊಂಡು ನನ್ನ ಕೃತಿಯನ್ನು ಆಯ್ಕೆ ಮಾಡಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಮರೆಯಲು ಸಾಧ್ಯವಿಲ್ಲ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆವನ್ನು ವಹಿಸಿ ಮಾತನಾಡಿ ಒಟ್ಟು 19. ಲೇಖಕರ ಗ್ರಂಥಗಳು ಆಯ್ಕೆಗೆ ಬಂದಿದ್ದವು. ಸಮಿತಿಯ ಫ.ಗು ಸಿದ್ಧಾಪುರ ಪೆÇ್ರ ಮಹಾದೇವ ರೇಬಿನಾಳ ಡಾ ;ಸಂಗಮೇಶ್ ಮೇತ್ರಿ ಕೆ.ಸುನಂದಾ ಅವರೊಳಗೊಂಡು ನಿರ್ಣಯಿಸಲಾಯಿತು .ಜಿಲ್ಲಾ ಸಾಹಿತ್ಯ ಪರಿಷತ್ತು ರಚನಾತ್ಮಕವಾಗಿ ಸಾಹಿತ್ಯದ ಚಟುವಟಿಕೆಗಳನ್ನು ಸಂಘಟಿಸುತ್ತಿz ಎಂದರು
ಸಾನಿಧ್ಯವನ್ನು ಮಕಣಾಪೂರ ಸೋಮನಾಥ ಮಹಾಸ್ವಾಮಿಜಿ ವಹಿಸಿದ್ದರು. ವಿದ್ಯಾವತಿ ಅಂಕಲಗಿ ಪೆÇ್ರೀ ಮಹಾದೇವ ರೇಬಿನಾಳ ಕೆಸುನಂದಾ ಡಾ ಸಂಗಮೇಶ ಮೇತ್ರಿ ಮಹಮ್ಮದ ಗೌಸ್ ಹವಾಲ್ದಾರ್ ಅಭಿಷೇಕ ಚಕ್ರವರ್ತಿ ಡಿ ಬಿ ನಾಯಕ ಮಲ್ಲಿಕಾರ್ಜುನ ಅವಟಿ ಬಸವರಾಜ ರೇಬಿನಾಳ ಶಿವಾನಂದ ಶಶಿಕಾಂಟಟಚಚಸಿಂಹಾಸನಮಠ ಬಸವರಾಜ ಕುಂಬಾರ ರಾಜೇಸಾಬ ಶಿವನಗುತ್ತಿ ಶಿಲ್ಪಾ ಕುದರಗೊಂಡ ಪಿಎನ್ ದೇವರಗುಡ್ಡಿ ಈರಣ್ಣಾ ಮಾಮನೆ ಬಸವರಾಜ ತಾವಲರಗಿ ಮುಂತಾದವರು ಉಪಸ್ಥಿತರಿದ್ದರು