ಕಡಣಿ ಗ್ರಾಪಂ ಎರಡನೇ ಅವಧಿಗೆ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಅಧ್ಯಕ್ಷರಾಗಿ ಬಸಲಿಂಗಪ್ಪ ಶಿವಪ್ಪ ಕತ್ತಿ. ಉಪಾಧ್ಯಕ್ಷರಾಗಿ ಸಾವಿತ್ರಿ ನಾಟೀಕಾರ ಅವಿರೋಧ ಆಯ್ಕೆ

ಆಲಮೇಲ :ಆ.5:ತಾಲೂಕಿನ ಕಡಣಿ ಗ್ರಾಮ ಪಂಚಾಯ್ತಿಯ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧುವಾರ ಚುನಾವಣೆ ನಡೆಯಿತು. ಬೆಳಗ್ಗೆ 10 ಗಂಟೆಗೆ ಕಡಣಿ ಗ್ರಾಪಂ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿ ತಾರಾನಾಥ ರಾಠೋಡ ಮತದಾನ ಕುರಿತು ಎಲ್ಲ ಸದಸ್ಯರಿಗೆ ತಿಳುವಳಿಕೆ ನಿಡಿದರು. ನಂತರ ನಾಮಪತ್ರ ಸಲ್ಲಿಕೆ ನಡೆಯಿತು. ನಾಮಪತ್ರ ಹಿಂಪಡೆಯುವದು ಹಾಗೂ ನಾಮಪತ್ರ ಪರಿಶೀಲನೆ ನಡೆಯಿತು.ಅಧ್ಯಕ್ಷ ಸ್ಥಾನಕ್ಕೆ ಬಸಲಿಂಗಪ್ಪ ಶಿವಪ್ಪ ಕತ್ತಿ. ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಸಾವಿತ್ರಿ ಶರಣಪ್ಪ ನಾಟೀಕಾರ ಒಬ್ಬರೇ ನಾಮ ಪತ್ರ ಸಲ್ಲಿಸಿರುವ ಕಾರಣ ಅಧ್ಯಕ್ಷರಾಗಿ ಬಸಲಿಂಗಪ್ಪ ಶಿವಪ್ಪ ಕತ್ತಿ. ಉಪಾಧ್ಯಕ್ಷರಾಗಿ ಶ್ರೀಮತಿ ಸಾವಿತ್ರಿ ಶರಣಪ್ಪ ನಾಟೀಕಾರ ಅವಿರೋಧ ಆಯ್ಕೆಯಾದರು.ಎಂದು ಚುನಾವಣಾಧಿಕಾರಿ ತಾರಾನಾಥ ರಾಠೋಡ ಘೋಷಿಸಿದರು.

ನಂತರ ನೂತನವಾಗಿ ಆಯ್ಕೆಯಾದ ಅಧ್ಯಕ್ಷ,ಉಪಾಧ್ಯಕ್ಷರಿಗೆ ಶಾಸಕ ಅಶೋಕ ಮನಗೂಳಿ ಶಾಲು ಹಾಕಿ ಸನ್ಮಾನಿಸಿದರು. ಗ್ರಾಮಸ್ಥರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಗ್ರಾಮದಲ್ಲಿ ವಿಜಯೋತ್ಸವ ಆಚರಿಸಿದರು

ನಂತರ ಶಾಸಕ ಅಶೋಕ ಮನಗೂಳಿ ಮಾತನಾಡಿ ಸ್ಥಳೀಯ ಎಲ್ಲ ಚುನಾವಣೆಗಳು ಅವಿರೋಧವಾಗಿ ನಡೆಸುವ ಮೂಲಕ ದುಂದವೆಚ್ಚಕ್ಕೆ ಕಡಿವಾಣ ಹಾಗೂ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ.ಅದಕ್ಕಾಗಿ ನೂತನ ಅಧ್ಯಕ್ಷ,ಉಪಾಧ್ಯಕ್ಷರು ಎಲ್ಲ ಸದಸ್ಯರಿಗೆ ವಿಶ್ವಾಸಕ್ಕೆ ತಗೆದುಕೊಂಡು ಗ್ರಾಮದ ಅಭಿವೃದ್ಧಿಗೆ ಸ್ರಮಿಸಬೇಕು.ನಿಮ್ಮೊಂದಿಗೆ ನಾನ್ನಿದ್ದೆನೆ ಎಂದರು.

ಒಟ್ಟು 19 ಜನ ಸದಸ್ಯರ ಬಲ ಇರುವ ಕಡಣಿ ಗ್ರಾಮ ಪಂತಾಯ್ತಿಯಲ್ಲಿ 10 ಮಹಿಳೆಯರು ಹಾಗೂ 9 ಪುರುಷ ಸದಸ್ಯರಿದ್ದು ಎರಡನೇ ಅವಧಿಯ ಚುನಾಚಣೆ ಆಲಮೇಲ ಪೊಲೀಸರ ಕಣ್ಗಾವಲಿನಲ್ಲಿ ಪಿಎಸ್ ಐ ಕುಮಾರ ಹಾಡಕಾರ ಹಾಗೂ ಸಿಬ್ಬಂದಿಗಳು ಶಾಂತಿ ಸುವ್ಯವಸ್ಥೆಯಿಂದ ನಡೆಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಡಾ/ಸಂಜೀವಕುಮಾರ ಯಂಟಮಾನ. ವಿರಭದ್ರ ಕತ್ತಿ., ಅಶೋಕ ಕೊಳಾರಿ,.ಶರಣಪ್ಪ ನಾಟೀಕಾರ ನಿಲಕಂಠ ಜಮಾದಾರ. ಹಾಗೂ ಗ್ರಾಪಂ ಸದಸ್ಯರಾದ ಬಸವರಾಜ ತಾವರಗೇರಿ.ಬಸಲಿಂಗಪ್ಪ ಕತ್ತಿ.ಹುಚ್ಚಪ್ಪ ದೊಡಮನಿ.ನಿಲಕಂಠ ವಡ್ಡರ್.ಅರುಣ ಕುರಿಮನಿ.ಸಂತೋಚ ಬಿರಾದಾರ.ರಮೇಶ ಕಿಣಗಿ.ಮಹಾದೇವಿ ಬಿರಾದಾರ.ಸುಮಿತ್ರಾ ತಳಕೇರಿ. ಮಹಾದೇವಿ ಖಾಜಪ್ಪ ಜಮಾದಾರ ಶಿವಗಂಗಾ ತಳವಾರ.ಸವಿತಾಪೂಜಾರಿ.ಬೋರಮ್ಮ ಬಿರಾದಾರ.ಶೋಭಾ ಮಾದರ.ಮಲ್ಲಮ್ಮ ಕಳಸಗೊಂಡ ಇದ್ದರು. ಪಿಎಸ್‍ಐ ಕುಮಾರ ಹಾಡಕಾರ.ಪಿಡಿಓಶರಣಗೌಡ ಕಡ್ಲೇವಾಡ ಹಾಗೂ ಗ್ರಾಮಸ್ಥರು ಇದ್ದರು.