ಕಡಣಿಯಲ್ಲಿ ಶ್ರೀ ಭೋಗಲಿಂಗೇಶ್ವರ ಜಾತ್ರೆ

ಆಲಮೇಲ:ಮಾ.30: ತಾಲೂಕಿನ ಕಡಣಿ ಗ್ರಾಮದಲ್ಲಿ ಶಿವ ಶರಣ ಶ್ರೀ ಭೋಗಲಿಂಗೇಶ್ವರ ಜಾತ್ರೆಯು ಮಾರ್ಚ್ 28 ರಂದು ಬೆಳಗ್ಗೆ 9 ಗಂಟೆಗೆ ಶ್ರೀರಾಮ ಮಂದಿರದಲ್ಲಿ ಇರುವ ಬಾವಿಯ ಹತ್ತಿರ ಗಂಗಾ ಸ್ಥಳದಿಂದ ಊರಿನ ಪ್ರಮುಖ ಬೀದಿಯ ಮುಖಾಂತರ ಶ್ರೀ ಶಂಕರಲಿಂಗ ದೇವಸ್ಥಾನಕ್ಕೆ ಸುಮಾರು 251 ಸೋಮಂಗಲರಿಂದ ಕುಂಭಮೇಳ ಜರಗಿತು.

ಆಲಮೇಲದ ಅಳ್ಳೋಳಿ ಮಠದ ಶ್ರೀಶೈಲಯ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಕುಂಭಮೇಳ ಸಾಗಿತು.

ಸಿಂದಗಿ ಜನಪ್ರಿಯ ಶಾಸಕರಾದ ರಮೇಶ್ ಬಾಳಪ್ಪ ಭೂಸನೂರ್ ಇವರ ಧರ್ಮಪತ್ನಿ ಲಲಿತಾ ರಮೇಶ್ ಭೂಸನೂರ್ ಸುಮಂಗಲರಿಗೆ ಉಡಿ ತುಂಬ ಕಾರ್ಯಕ್ರಮ ನೆರವೇರಿಸಿದರು.

ಇದೆ ವೇಳೆ ಶಂಕರ್ ಲಿಂಗಯ್ಯ ಹಿರೇಮಠ ಪ್ರಥಮ ದರ್ಜೆ ಗುತ್ತಿಗೆದಾರರು : ವೀರಭದ್ರ ಕತ್ತಿ , ಬಸವರಾಜ ತಾವರಗೇರಿ ಸಂತೋಷ್ ಕ್ಷತ್ರಿ ಮಾಜಿ ಎಸ್ ಡಿ ಎಮ್ ಸಿ ಅಧ್ಯಕ್ಷರು ಕಡಣಿ ಕೇಧಾರನಾಥ ಕತ್ತಿ , ಬೊಗಣ್ಣ ಲಾಳಸಂಗಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಣಮಂತರಾಯ ಕಳಸಕೊಂಡು. ಅಣವೀರಸೌಕರ್ ಕತ್ತಿ ನಮ್ಮೂರಿನ ವೈದ್ಯರಾದ ಡಾಕ್ಟರ್ ಮಲ್ಲು ಪ್ಯಾಟಿ .ನಾಗರಾಜ ಬಸಗೊಂಡ . ಈರಯ್ಯ ಗಂಗನಳ್ಳಿ ಶಿವರಾಯ ಸುರಗಳ್ಳಿ.ರಾಜು ವಡ್ಡರ. ಶರಣಪ್ಪ ಕ್ಷತ್ರಿ ಹಾಗೂ ಇತರರಿದ್ದರು.