ಕಡಗೋಲ ಅಂಜಿನಯ್ಯ ನೇತೃತ್ವದಲ್ಲಿ ಪ್ರಚಾರ

ರಾಯಚೂರು,ಏ.೨೮- ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕರಾದ ಡಾ. ಎಸ್ ಎಸ್ ಪಾಟೀಲ್ ನಗರದ ವಾರ್ಡ್ ನಂಬರ್ ೧೮ರಲ್ಲಿ ಬರುವ ಖಾದರ್ ಗುಂಡ ಮಾಣಿಕ್ ನಗರ ವಿವಿಧ ಬಡಾವಣೆಗಳಲ್ಲಿ ಮಾನ್ಯ ನಗರಸಭೆ ಅಧ್ಯಕ್ಷರಾದ ಲಲಿತಾ ಕಡಗೋಲ್ ಹಾಗೂ ಬಿಜೆಪಿ ಮುಖಂಡರಾದ ಅಂಜಿನಯ್ಯ ಕಡಗೋಲ್ ಅವರು ಪಾದಯಾತ್ರೆ ಮೂಲಕ ಬಿಜೆಪಿ ಪರವಾಗಿ ಮತಯಾಚನೆ ಮಾಡಿದರು.ಪ್ರಚಾರದ ಸಂಧರ್ಭದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಡಾ. ಎಸ್ ಶಿವರಾಜ್ ಪಟೇಲ್ ಇವರನ್ನು ಪ್ರಚಂಡ ಬಹುಮತದಿಂದ ಮತ್ತೊಮ್ಮೆ ಆರಿಸಿ ತರಬೇಕಾಗಿ ಮತದಾರರಲ್ಲಿ ವಿನಂತಿ ಮಾಡಿದರು.ಪ್ರಚಾರದ ಸಂದರ್ಭದಲ್ಲಿ ವಾರ್ಡಿನ ಹಿರಿಯ ಮುಖಂಡರು ಅನೇಕ ಯುವಕರು ಪಕ್ಷದ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದರು.