ಕಡಗಳಿಗೆಯಲ್ಲಿ ರಮೇಶ್ ಕುಮಾರ್ ಗೆ ಕೈ ತಪ್ಪಿದ ಟಿಕೆಟ್

ಕೋಲಾರ,ಜೂ,೩- ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆ ಮಾಡುವ ಸದಸ್ಯರ ಚುನಾವಣೆಗೆ ಕೋಲಾರ ಜಿಲ್ಲೆಯಿಂದ ಅಂತಿಮ ಘಳಿಗೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲು ಪ್ರಯತ್ನಿಸಿದ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್‌ಗೆ ರಾಜ್ಯ ಸಚಿವ ಕೆ,ಹೆಚ್.ಮುನಿಯಪ್ಪ ಅವರು ತೀವ್ರವಾಗಿ ವಿರೋಧಿಸುವ ಮೂಲಕ ವಿಫಲಗೊಳಿಸುವಲ್ಲಿ ಬಹುತೇಕ ಯಶ್ವಸ್ಸಿಯಾಗಿದ್ದಾರೆ ಎನ್ನಲಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆ.ಹೆಚ್.ಮುನಿಯಪ್ಪ ಅವರು ೭ನೇ ಬಾರಿ ವಿಜೇತರಾಗಿ ಸೋಲಿಲ್ಲದ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು ೮ನೇ ಬಾರಿಗೆ ಕಾಂಗ್ರೇಸ್ ಪಕ್ಷದಿಂದ ಸ್ವರ್ಧಿಸಿದ್ದ ಸಂದರ್ಭದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಜಿಲ್ಲೆಯ ಶಾಸಕರನ್ನು ಸಂಘಟಿಸಿ ಕೊಂಡು ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ ಕೆ.ಹೆಚ್.ಮುನಿಯಪ್ಪ ವಿರುದ್ದವಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಎಸ್.ಮುನಿಸ್ವಾಮಿಗೆ ಮತವನ್ನು ಹಾಕಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸಿದ್ದರು,
ಅಗಿನಿಂದ ಕೆ.ಹೆಚ್.ಮುನಿಯಪ್ಪ ಅವರು ರಮೇಶ್ ಕುಮಾರ್ ವಿರುದ್ದ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಹಾಗೂ ಕೆ.ಪಿ.ಸಿ.ಸಿ.ಗೆ ದೂರು ನೀಡಿದಾಗ ಸತ್ಯಶೋಧನ ಸಮಿತಿ ರಚಿಸಿದ್ದು ಸಮಿತಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದರು ಸಹ ಯಾವೂದೇ ಕ್ರಮ ಕೈಗೊಳ್ಳದೆ ವರದಿಯನ್ನು ಮೂಲೆಗುಂಪು ಮಾಡಲಾಯಿತು. ಇದರಿಂದ ಕೆ.ಹೆಚ್.ಮುನಿಯಪ್ಪ ಅವರು ಸುಮಾರು ಒಂದು ವರ್ಷಗಳ ಅಜ್ಞಾನತವಾಸ ಅನುಭವಿಸ ಬೇಕಾಯಿತು, ನಂತರದಲ್ಲಿ ಬಂದ ವಿಧಾನಸಭಾ ಚುನಾವಣೆಯಲ್ಲಿ ಕೆ.ಹೆಚ್. ಮುನಿಯಪ್ಪ ಅವರು ಕೋಲಾರ ಜಿಲ್ಲೆಯಿಂದ ಸ್ವರ್ಧಿಸಲು ಬಯಸಿ ಟಿಕೆಗೆ ಪ್ರಯತ್ನಿಸಿದಾಗಲು ಮಾಜಿ ಸ್ವೀಕರ್ ರಮೇಶ್ ಕುಮಾರ್ ಅಡ್ಡಿ ಪಡೆಸಿ ಕೋಲಾರ ಜಿಲ್ಲೆಯ ಯಾವ ಕ್ಷೇತ್ರದಲ್ಲೂ ಟಿಕೆಟ್ ಸಿಗದಂತೆ ಮಾಡುವಲ್ಲಿ ಎರಡನೇ ಭಾರಿ ಯಶಸ್ಸಿಯಾದರು.
ಕಾಂಗ್ರೆಸ್ ಪಕ್ಷದಿಂದ ವಿಧಾನ ಸಭೆ ಚುನಾವಣೆಗೆ ನಾನು ಸ್ವರ್ಧಿಸಲೇ ಬೇಕು ಯಾವ ಕ್ಷೇತ್ರವನ್ನಾದರೂ ನೀಡಿ ಎಂದು ಕೆ.ಹೆಚ್. ಮುನಿಯಪ್ಪ ಅವರು ಕೇಂದ್ರ ರಾಜಕಾರಣದಿಂದ ರಾಜ್ಯದ ರಾಜಕಾರಣಕ್ಕೆ ಎಂಟ್ರಿ ಕೊಡಲು ಅವಕಾಶ ಕಲ್ಪಿಸ ಬೇಕೆಂದು ಹೈಕಮಾಂಡ್ ಮೇಲೆ ಭಾರಿ ಒತ್ತಡ ಹಾಕಿದಾಗ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ವಿಧಾನಸಭೆಗೆ ಟಿಕೆಟ್ ನೀಡಲಾಯಿತು, ವಿಧಾನಸಭಾ ಚುನಾವಣೆಯಲ್ಲಿ ಕೆ.ಹೆಚ್.ಮುನಿಯಪ್ಪ ಅವರು ಪ್ರಚಂಡ ಬಹುಮತದಿಂದ ವಿಜೇತರಾದರು.
ಅದರೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಿಂದ ಸ್ವರ್ಧಿಸಿದ್ದ ಕೆ.ಆರ್.ರಮೇಶ್ ಕುಮಾರ್ ಚುನಾವಣೆಯಲ್ಲಿ ಗೆಲ್ಲದಂತೆ ತೆರೆಯ ಮರೆಯಲ್ಲಿ ಹಲವು ತಂತ್ರಗಳನ್ನು ರೂಪಿಸಿ ತಾವು ಬೆಳಕಿಗೆ ಬಾರದಂತೆ ಮರೆಯಲ್ಲಿದ್ದು ರಮೇಶ್ ಕುಮಾರ್ ಚುನಾವಣೆಯಲ್ಲಿ ಸೋಲುವಂತೆ ಮಾಡಿ ಮುಖಭಂಗಕ್ಕೆ ಒಳ ಪಡೆಸುವಲ್ಲಿ ಯಶಸ್ವಿಯಾಗಿ ತಮ್ಮ ಸೇಡನ್ನು ತೀರಿಸಿ ಕೊಂಡರು.
ನಂತರದಲ್ಲಿ ಕಾಂಗ್ರೆಸ್ ಪಕ್ಷವು ಬಹುಮತ ಪಡೆದು, ಸಚಿವ ಸಂಪುಟದಲ್ಲೂ ಸೇರ್ಪಡೆಯಾಗಿ ಪ್ರಮುಖವಾದ ಆಹಾರ ಖಾತೆಯನ್ನು ಪಡೆದು ಕೊಳ್ಳುವಲ್ಲಿ ಯಶಸ್ವಿಯಾದರು, ಕಾಂಗ್ರೆಸ್ ಪಕ್ಷವು ನೀಡಿದ್ದ ೫ ಗ್ಯಾರೆಂಟಿಗಳಲ್ಲಿ ಪ್ರಮುಖರಾಗಿದ್ದು ೧೦ ಕೆ.ಜಿ. ವಿತರಣೆಯ ಜವಾಬ್ದಾರಿಯನ್ನು ಹೊತ್ತು ಕೇಂದ್ರದ ಕುತಂತ್ರದಿಂದ ಅಕ್ಕಿಯು ಸಿಗದೆ ಹೋದಾಗ ಅಕ್ಕಿಯ ಬದಲು ಫಲಾನುಭವಿಗಳ ಖಾತೆಗೆ ನೇರ ಹಣವನ್ನು ಜಮೆ ಮಾಡುವಲ್ಲಿ ಯಶಸ್ವಿ ರಾಜ್ಯಾದಾದ್ಯಂತ ದೃಶ್ಯ ಮಾದ್ಯಮದಲ್ಲಿ ಭಾರಿ ಪ್ರಚಾರವನ್ನು ಗಿಟ್ಟಿಸಿ ಕೊಂಡರು.
ಇದರಿಂದ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಚಾಣುಕ್ಯರಂತೆ ತಂತ್ರಗಳನ್ನು ರೂಪಿಸುವಲ್ಲಿ ನಿಪುಣರಾಗಿ ನಂತರ ಬಂದ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಪುನರ್ ಸ್ವರ್ಧಿಸಲು ಪ್ರಯತ್ನಿಸಿ ನಂತರ ದೇವನಹಳ್ಳಿಯಲ್ಲಿ ಉಪಚುನಾವಣೆ, ಸಚಿವ ಸ್ಥಾನ ತೆರುವು ಅಗುತ್ತದೆ ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಗೆದ್ದರೂ ಸಹ ಕೇಂದ್ರದಲ್ಲಿ ಬಿಜೆಪಿ ಪಕ್ಷದ ಆಡಳಿತದಲ್ಲಿ ಮಾಡುವುದಾದರೂ ಏನು ಯಾವೂದೇ ಪ್ರಯೋಜನ ಇರದು ಎಂದು ಭಾವಿಸಿ ತಮಗೆ ಟಿಕೆಟ್ ಬೇಡಾ ತಮ್ಮ ಆಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಕೊಡಿಸಲು ಬಹಳಷ್ಟು ಪ್ರಯತ್ನ ಪಟ್ಟಾಗಲು ಕೆ.ಆರ್.ರಮೇಶ್ ಕುಮಾರ್ ಕೋಲಾರದಿಂದ ಘಟಬಂಧನ್ ತಂಡದೊಂದಿಗೆ ಅಡ್ಡಗಾಲು ಹಾಕಿದರು.
ಕೋಲಾರ ವಿಧಾನ ಸಭಾ ಕ್ಷೇತ್ರದಿಂದ ಕೆ.ಶ್ರೀನಿವಾಸಗೌಡರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರವನ್ನು ತ್ಯಾಗ ಮಾಡಿದರೆ ಮುಂದೆ ವಿಧಾನ ಪರಿಷತ್‌ಗೆ ನಾಮಕರಣ ಮಾಡುವುದಾಗಿ ಕಾಂಗ್ರೇಸ್ ಮುಖಂಡರಿಂದ ಆಶ್ವಾಸನೆ ಕೊಡಿಸಿದ ಹಿನ್ನಲೆಯಲ್ಲಿ ಶ್ರೀನಿವಾಸಗೌಡರು ಸಮ್ಮತಿಸಿದ್ದರು. ನಂತರದಲ್ಲಿ ಚುನಾವಣೆಗೆ ಇನ್ನು ೧೫ ದಿನ ಇರುವಾಗ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಸ್ವರ್ಧಿಸಲು ನಿರ್ಧರಿಸಿದಾಗ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ತ್ರಿಶಂಕು ಸ್ಥಿತಿಯಲ್ಲಿದ್ದ ಕೊತ್ತೂರು ಮಂಜುನಾಥ್ ಅವರನ್ನು ಕರೆಸಿ ಟಿಕೆಟ್ ಕೊಡಿಸುವಲ್ಲಿ ಕೆ.ಆರ್. ರಮೇಶ್ ಕುಮಾರ್ ಮತ್ತು ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಯಶಸ್ವಿಯಾಗಿದ್ದರು,
ಕೋಲಾರದ ಕೆ.ಶ್ರೀನಿವಾಸಗೌಡರು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ತಮ್ಮನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡುತ್ತಾರೆ ಎಂದು ಕನಸು ಕಾಣುತ್ತಾ ಕೊತಿದ್ದು ಅಗಾಗ್ಗೆ ಮಾದ್ಯಮದವರ ಮುಂದೆಯೋ ಹೇಳಿ ಕೊಂಡಿದ್ದರು. ನಂತರ ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ತಾವು ಜೆ.ಡಿ.ಎಸ್. ಪಕ್ಷದ ಶಾಸಕರಾಗಿ ಮುಂದುವರೆದರೂ ಸಹ ಕಾಂಗ್ರೇಸ್ ಪಕ್ಷದ ಪರವಾಗಿ ಮತ ಚಲಾಯಿಸಿದ್ದರು. ಅದೇ ರೀತಿ ಕೆ.ಶ್ರೀನಿವಾಸಗೌಡರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ೨-೩ ಭಾರಿ ಭೇಟಿಯಾದಗಲೂ ಸಹ ಸಿದ್ದರಾಮಯ್ಯನವರು ತಾವು ಕೊಟ್ಟಿದ್ದ ಆಶ್ವಾಸನೆಯನ್ನು ಪುನರುಚ್ಚಿಸಿ ನುಡಿದಂತೆ ನಡೆವ ಸರ್ಕಾರದ ಮುಖ್ಯ ಮಂತ್ರಿಯಾಗಿದ್ದು ನಿಮಗೆ ನೀಡಿದ ಮಾತನ್ನು ತಪ್ಪಲಾರೆ ಎಂದು ಭರವಸೆಯನ್ನು ನೀಡಿದ್ದರು,
ಇದರಿಂದ ರಮೇಶ್ ಕುಮಾರ್ ತಾನು ೪ ವರ್ಷಗಳು ಅಜ್ಞಾತವಾಸದಲ್ಲಿ ಏಕಿರಬೇಕು ರಾಜ್ಯದಲ್ಲಿ ಹೇಗಿದ್ದರೂ ಕಾಂಗ್ರೆಸ್ ಸರ್ಕಾರದ ಆಡಳಿತ ಇದೆ. ಈ ಸಂದರ್ಭದಲ್ಲಿ ತಾನು ಸನ್ಯಸಿಯಾಗಿ ತೋಟದ ಮನೆಯ ಮೂಲೆಯಲ್ಲಿ ಏಕಿರ ಬೇಕೆಂದು ನಿರ್ಧರಿಸಿ, ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ನಾಮಕರಿಸಲು ಸಿಕ್ಕಿರುವ ಅವಕಾಶವು ಕೆ.ಶ್ರೀನಿವಾಸಗೌಡರಿಗೆ ಸಿಗುವುದನ್ನು ತಪ್ಪಿಸಿ ತಾವೇ ವಿಧಾನಪರಿಷತ್‌ಗೆ ಹಿಂಬಾಗಿಲ ಮೂಲಕ ಪ್ರವೇಶಿಸಿ ಸಚಿವ ಸ್ಥಾನ ಪಡೆಯ ಬೇಕೆಂದು ಯೋಜನೆ ರೂಪಿಸಿ ಕೊಂಡು ಕಾಂಗ್ರೇಸ್ ಪಕ್ಷದಿಂದ ವಿಧಾನ ಪರಿಷತ್‌ಗೆ ಟಿಕೆಟ್ ನೀಡ ಬೇಕೆಂದು ಪ್ರಯತ್ನಿಸಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ತಮ್ಮ ಬೆಂಬಲಿಗರಾದ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್, ನಸ್ಸೀರ್ ಆಹಮದ್ ಹಾಗೂ ಮಾಲೂರು ಶಾಸಕ ನಂಜೇಗೌಡ ಅವರೊಂದಿಗೆ ಭೇಟಿಯಾಗಿದ್ದರು.
ವಿಧಾನ ಪರಿಷತ್‌ಗೆ ಕೆ.ಶ್ರೀನಿವಾಸಗೌಡರಿಗೆ ಸಿಗಬಹುದಾಗಿದ್ದ ಅವಕಾಶಕ್ಕೆ ಕೆ.ಆರ್. ರಮೇಶ್ ಕುಮಾರ್ ಅಡ್ಡಗಾಲು ಹಾಕಿ ತಮಗೆ ವಿಧಾನಪರಿಷತ್‌ಗೆ ಅವಕಾಶ ನೀಡಬೇಕೆಂದು ಒತ್ತಡ ಹೇರುತ್ತಿದ್ದಾರೆ. ಅದರೆ ಇದಕ್ಕೆ ಕೆ.ಹೆಚ್.ಮುನಿಯಪ್ಪ ರಮೇಶ್ ಕುಮಾರ್ ಅವರಿಗೆ ಶತಾಯಗತಾಯ ನೀಡ ಬಾರದು ಎಂದು ಪಟ್ಟು ಹಿಡಿದಿದ್ದಾರೆ. ಕೆ.ಹೆಚ್.ಮುನಿಯಪ್ಪ ಅವರ ಬೆನ್ನಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲ ಸಿಗುವ ಸಾಧ್ಯತೆ ಇದೆ.
ರಮೇಶ್ ಕುಮಾರ್ ಅವರು ಚುನಾವಣೆಯಲ್ಲಿ ಸೋತಿರುವುದರಿಂದ ಅವರಿಗೆ ವಿಧಾನ ಪರಿಷತ್‌ಗೆ ಅವಕಾಶ ನೀಡಬಾರದು, ಕೆ.ಶ್ರೀನಿವಾಸಗೌಡರಿಗೆ ಅಥವಾ ಬೇರೆ ಯಾರಿಗಾದರೂ ನೀಡಿ ನನ್ನ ಅಭ್ಯಂತರವಿಲ್ಲ ಎಂದು ಕಾಂಗ್ರೇಸ್ ಹೈಕಮಾಂಡ್ ಮೇಲೆ ಭಾರಿ ಒತ್ತಡ ಹೇರಿದ್ದಾರೆ. ಲೋಕಸಭಾ ಚುನಾವಣೆಯ ಪರಿಸ್ಥಿತಿಯಂತೆ ಪುನರಾವರ್ತನೆ ಅಗಿರುವುದು ಕಾಂಗ್ರೇಸ್ ಪಕ್ಷಕ್ಕೆ ತಲೆ ನೋವಾಗಿದ್ದು ಕೋಲಾರ ಜಿಲ್ಲೆಯಿಂದ ಯಾರಿಗೂ ನೀಡದೆ ಹೋಗುವ ಸಾಧ್ಯತೆಗಳಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.