ಕಡಕೋಳ ನೆಲದಲ್ಲಿ ಮಡಿವಾಳಪ್ಪನ ಸಂಶೋಧನ ಕೇಂದ್ರ ಸ್ಥಾಪಿಸಿ:ಸಜ್ಜನ

ಯಡ್ರಾಮಿ:ಮಾ.11:ತತ್ವ ಪದಕಾರ ನೇರ ನುಡಿಯ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ಮಡಿವಾಳಪ್ಪನವರ ಅಧ್ಯಾಯನ ಕೇಂದ್ರ ಕಡಕೋಳ ಗ್ರಾಮದ ನೆಲದಲ್ಲಿ ನಿರ್ಮಾಣವಾಗಬೇಕು ಎಂದು ಸುರೇಶ ಸಜ್ಜನ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರು ಹಾಗೂ ವಿಜಯನಗರ ಸಿಂಡಿಕೇಟ ಸದಸ್ಯ ಆಗ್ರಹಿಸಿದ್ದಾರೆ.

ತಾಲೂಕಿನ ಕಡಕೋಳ ಗ್ರಾಮದ ಮಡಿವಾಳೇಶ್ವರ ಮಹಾಮಠದಲ್ಲಿ ಶಿವರಾತ್ರಿಯ ಶಿವಾನುಭವ ಚಿಂತನೆ ಕಾರ್ಯಕ್ರಮ ಉದ್ದೇಶಿಸಿ ಸಜ್ಜನ ಅವರು ಮಾತನಾಡುತ್ತ.ಮಡಿವಾಳಪ್ಪನವರು ಸಾಮಾಜಿಕ ಅಸಮಾನತೆ ವಿರುದ್ಧ ತತ್ವ ಪದಗಳ ಮೂಲಕ ಸಮಾಜ ತಿದ್ದುವ ಕೆಲಸಾ ಮಾಡಿದ್ದಾರೆ.

ಅಂತಹ ಮಾಹಾನ ಸಂತ ಮಡಿವಾಳಪ್ಪನ ಇತಿಹಾಸ ಅರಿತುಕೊಳ್ಳಲು ಸಂಶೋಧನ ಕೇಂದ್ರ ಅಗತ್ಯವಾಗಿದ್ದು.ಕಡಕೋಳದ ನೆಲದಲ್ಲಿ ವಿಶ್ವವಿದ್ಯಾಲಯ ನಿರ್ಮಾಣ ಮಾಡಿ ನೈಜ ಇತಿಹಾಸ ಉಳಿಸುವ ಕಾರ್ಯ ಸರ್ಕಾರ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

ಕಡಕೋಳ ಶ್ರೀ ಡಾ.ರುದ್ರಮುನಿ ಶಿವಾರ್ಚಾರರು ಮಾತಾನಾಡಿ.ಅಣ್ಣ ಬಸವಣ್ಣನವರ ಅನುಭವ ಮಂಟಪ ರೀತಿಯಲ್ಲಿ ಕಡಕೋಳ ನೆಲದಲ್ಲಿ ಮಡಿವಾಳಪ್ಪನವರು 12ನೇ ಶತಮಾನದಲ್ಲಿ.

ಚನ್ನೂರು ಜಲಾಲಸಾಬ್ ಕಲ್ಡೇವಾಡದ ಸಿದ್ದಪ್ಪ ರೇವಪ್ಪ ಭಾಗಮ್ಮ ಹೀಗೆ ಹಲವಾರು ಸಂತರ ನೇತೃತ್ವದಲ್ಲಿ ಈ ನೆಲದಲ್ಲಿ ಅಭವ ಮಂಟಪ ಕಾರ್ಯ ನಡೆಸುತ್ತಿದ್ದರು.

ಮಡಿವಾಳಪ್ಪ ಸರ್ವಜನಾಂಗದ ನಾಯಕರಾಗಿ ಹಲವಾರು ಸಾಮಾಜಿಕ ಹೋರಾಟ ಮಾಡಿದರ ನೆಲದಲ್ಲಿ ಸಂಶೋದನಾ ಕೇಂದ್ರ ಮಾಡಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಶ್ರೀಗಳ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತ್ತು.

ಪೂಜ್ಯ ಡಾ.ರುದ್ರಮುನಿ ಶಿವಾರ್ಚಾರರು ಕಡಕೋಳ ಮಹಾಮಠ,ಪೂಜ್ಯ ಮಡಿವಾಳ ಮಹಾಸ್ವಾಮಿಗಳು ಕೊಕಟನೂರ,ಮಲ್ಲಿಕಾರ್ಜುನ ಕಡಕೋಳ ಸಾಹಿತಿಗಳು,ಮಹಾಂತೇಶ ಪುರಾಣಿಕ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ,ಸುರೇಶ ಪಾಟೀಲ ನೆರಡಗಿ,ಸಿದ್ದಣ್ಣ ಕವಾಲ್ದಾರ ಮಾಜಿ ತಾ.ಪಂ ಅಧ್ಯಕ್ಷ,ಸಂಗನಗೌಡ ಪಾಟೀಲ,ಬಸನಗೌಡ ಮಾಲಿಪಾಟೀಲ,ಬಸವರಾಜ ಪಾಟೀಲ,ಚಿದಾನಂದ ಯತ್ನಾಳ ಮಠದ ಭಕ್ತರು ಇತರರು ಉಪಸ್ಥಿತರಿದ್ದರು.