ಕಡಕೊಳಗೆ ಪ್ರಶಸ್ತಿ


ಧಾರವಾಡ ಡಿ.29-ನಗರದ ಚಿಲಿಪಿಲಿ ಸಂಗೀತ ಸಾಂಸ್ಕøತಿಕ ಕಲಾ ಅಕಾಡೆಮಿಯು ಪ್ರಪ್ರಥಮವಾಗಿ ನೀಡುತ್ತಿರುವ “ತಬಲಾ ಮಾಂತ್ರಿಕ ಪಂ. ರವಿ ಕೂಡ್ಲಿಗಿ ಪ್ರಶಸ್ತಿ -2020″ಯನ್ನು ಬೆಳಗಾವಿ ಜಿಲ್ಲೆಯ ಸವದತ್ತಿಯ ಹೆಸರಾಂತ ತಬಲಾ ಕಲಾವಿದ ಅಲ್ಲಮಪ್ರಭು ಕಡಕೊಳ ಇವರಿಗೆ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು ರೂ.5000ಗಳ ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಖ್ಯಾತ ತಬಲಾವಾದಕರಾದ ದಿವಂಗತ ಪಂ. ರವಿ ಕೂಡ್ಲಿಗಿಯವರ 6ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಜನೇವರಿ 2 ರಂದು ನಗರದ ಸುವರ್ಣ ಸಾಂಸ್ಕøತಿಕ ಸಮುಚ್ಚಯ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಚಿಲಿಪಿಲಿ ಸಂಗೀತ ಸಾಂಸ್ಕøತಿಕ ಕಲಾ ಅಕಾಡೆಮಿ ಅಧ್ಯಕ್ಷ ಡಾ.ಎ.ಎಲ್.ದೇಸಾಯಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.