ಕಠಿಣ ಶಿಕ್ಷೆಗೆ ಆಗ್ರಹಿಸಿ ಮನವಿ

ಹುಬ್ಬಳ್ಳಿ, ಮೇ 30: ಮೂರುಘಾಶರಣರ ವಿರುದ್ಧದ ಪೆÇೀಕ್ಸೋ ಪ್ರಕರಣದಲ್ಲಿ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ದೊರೆಯುತ್ತಿಲ್ಲ. ಆರೋಪಿ ಜೈಲುಪಾಲಾಗಿದ್ದರೂ ಆರೋಪಿಯ ಹಿಂಬಾಲಕರು ಸಂತ್ರಸ್ತೆಯೋರ್ವಳ ಚಿಕ್ಕಪ್ಪನ ಮೂಲಕವೇ ಸಂತ್ರಸ್ತೆಗೆ ಜೀವ ಬೆದರಿಕೆ ಹಾಕುವ ಮೂಲಕ ಸಂತ್ರಸ್ತ ಬಾಲಕಿಗೆ ಮಾನಸಿಕ, ದೈಹಿಕ ಹಿಂಸೆ ನೀಡಲಾಗುತ್ತಿದೆ. ಈ ಮೂಲಕ ಪೆÇೀಕ್ಸೋ ಪ್ರಕರಣ ವಾಪಾಸ್ ಪಡೆಯುವ ಹುನ್ನಾರಕ್ಕೆ ಆರೋಪಿಯ ಹಿಂಬಾಲಕರು ಮುಂದಾಗಿದ್ದಾರೆ.

ಈ ನಿಟ್ಟಿನಲ್ಲಿ ಸಂತ್ರಸ್ತೆ ಹಾಗೂ ಸಂತ್ರಸ್ತ ಸಹೋದರ ಮತ್ತೆ ದೂರು ನೀಡಿದ್ದು ತಕ್ಷಣ ಸಂತ್ರಸ್ತೆ ರಕ್ಷಣೆಗೆ ಸರ್ಕಾರ ಮುಂದಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ನಗರದಲ್ಲಿಂದು ಸಮತಾಸೇನಾ ಸೇರಿದಂತೆ ವಿವಿಧ ದಲಿತ ಸಂಘ, ಸಂಸ್ಥೆಗಳ ಮಹಾಮಂಡಳದ ವತಿಯಿಂದ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳು, ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗುರುನಾಥ ಉಳ್ಳಿಕಾಶಿ, ರೇವಣಸಿದ್ದಪ್ಪ ಹೊಸಮನಿ, ಕವಿತಾ ನಾಯ್ಕರ್, ರವಿ ಕದಂ, ಇಂತಿಯಾಜ್ ಬಿಜಾಪೂರ, ಸೋಮು ಹಂಜಗಿ ಮೊದಲಾದವರು ಇದ್ದರು.