ಕಠಿಣ ಪರಿಶ್ರಮ ಯಶಸ್ಸಿಗೆ ಕಾರಣ: ಪರಮೇಶ್ವರ ಲೇಂಡೆ

ಕಲಬುರಗಿ:ಸೆ.5:ನಿರಂತರ ಶ್ರಮಕ್ಕೆ ಪ್ರತಿಫಲವಾಗಿ ಯಶಸ್ಸು ಕುಣಿಯುತ್ತ ಬರುತ್ತದೆ, ಯಶಸ್ಸಿನ ಬದುಕು ಸಂತೃಪ್ತಿ ನೀಡುತ್ತದೆ ಎಂದು ರಂಗಭೂಮಿ ಸಂಗೀತ ನಿರ್ದೇಶಕರಾದ ಪರಮೇಶ್ವರ ಲೇಂಡೆ ಹೇಳಿದರು.
ರವಿವಾರ ಆಳಂದ ತಾಲೂಕಿನ ನಿಂಬಾಳ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಕನ್ನಡ ಜಾನಪದ ಪರಿಷತ ಕಲಬುರಗಿ ಉತ್ತರ ವಲಯದಿಂದ ಗಡಿನಾಡು ಭಾಗದಲ್ಲಿ ಕನ್ನಡ ಭಾಷೆ ಹಾಗೂ ಜನಪದ ರಕ್ಷಕರಿಗೆ ಗೌರವ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಗಡಿಭಾಗದಲ್ಲಿ ನಾವೆಲ್ಲರೂ ಬೇರೆ ಭಾಷೆ ಪ್ರೀತಿಸಿದರೆ ಕನ್ನಡ ಭಾಷೆ ಹೃದಯದೊಳಗಿಟ್ಟು ಪೂಜಿಸಿ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದೇವೆ. ಇಂದಿನ ಸಂದರ್ಭದಲ್ಲಿ ಕೇವಲ ನಗರಕ್ಕೆ ಸೀಮಿತವಾಗಿ ಕಾರ್ಯಕ್ರಮಗಳು ಮಾಡುತ್ತಿರುವ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ತು ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮೀಣ ಜನರನ್ನು ಸ್ಪೂರ್ತಿಗೊಳಿಸುವುದರೊಂದಿಗೆ ಜನಪದವು ಸರ್ವರ ಮನ-ಮನೆಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ
ಕಜಾಪ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತಾ ಗಡಿನಾಡು ಭಾಗದಲ್ಲಿ ಕನ್ನಡ ಭಾಷೆ ಹಾಗೂ ಜನಪದ ಅಳಿಯುವ ಸಂದರ್ಭದಲ್ಲಿ ಉಳಿಸುವ ಕಲಾವಿದರಿಗೆ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಭಾಗದಲ್ಲಿ ಹಲವಾರು ಸಮಸ್ಯೆಗಳಲ್ಲಿಯು ಕನ್ನಡ ಬೆಳೆಸುತ್ತಿದ್ದಾರೆ.ಸರ್ಕಾರ ತಕ್ಷಣ ಗಡಿನಾಡಿನಲ್ಲಿರುವ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ ಕನ್ನಡ ಬಿತ್ತುವ ಕಾರ್ಯ ಮಾಡಬೇಕೆಂದರು. ಇದೇ ಸಂದರ್ಭದಲ್ಲಿ ಹಿರಿಯ ಸಂಗೀತ ನಿರ್ದೇಶಕರಾದ ಪರಮೇಶ್ವರ ಲೇಂಡೆ, ಕಲಾವಿದರಾದ ಮಲ್ಲಯ್ಯ ಸ್ವಾಮಿ, ಭೋಗೇಶ ನಾವದಗಿ ಝಳಕಿ(ಬಿ), ಜಗದೇವಿ ಎಸ್ ಚಲಗೇರಿ, ಚೆನ್ನಮ್ಮ ಸಿ ಮಾಳಿ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜನಪದ ಕಲಾವಿದ ರಾಜು ಹೆಬ್ಬಾಳ, ಬಸವರಾಜ ಶಾಟಿಕರ,ಶಿವಲಿಂಗಪ್ಪ ಕಲಶೆಟ್ಟಿ, ಸಿದ್ದಣ್ಣ ಹಡಪದ, ಹಣಮಂತ ಕಂಬಾರ, ಜಗದೇವಪ್ಪ ಸಾತಪುರ, ಅಂಬಣ್ಣ ಬಮ್ಮಣಗಿ,ಕಾಶಿರಾಯ ಬಮ್ಮಣಗಿ, ಶ್ರೀಮಂತ ಸಂದಿಮನಿ, ಶ್ರೀಶೈಲ ಸಾತಪುರ, ಲಕ್ಷ್ಮಿಕಾಂತ ಅಮಾಣೆ, ಬಸವರಾಜ ಕೋಣೆ, ದುಂಡಪ್ಪ ಶಾಟಿಕಾರ, ಮಡಿವಾಳ ಹಡಪದ, ಮಹಾದೇವಪ್ಪ ಮೈಂದ್ರಗಿ, ಶಿವಯ್ಯ ಸ್ವಾಮಿ, ಸಂಗಣ್ಣ ಸಂದಿಮನಿ, ಶಿವಲಿಂಗಪ್ಪ ಕಂಬಾರ, ಚಂದ್ರಕಾಂತ ಮಾಳಿ, ಲಕ್ಷ್ಮಿಕಾಂತ ಮಾಳಿ, ಶಿವಾನಂದ ಭತ್ತಾ, ಕಲ್ಯಾಣಿ ಕಲಶೆಟ್ಟಿ, ಜಗದೇವಿ ಹಿರೇಮಠ, ಶ್ರೀದೇವಿ ಅಟ್ಟೂರ, ಸುವರ್ಣ ಬಿರಾದಾರ, ನಾಗೇಂದ್ರಪ್ಪ ಅಟ್ಟೂರ ಬನ್ನುಬಾಯಿ ಅಮಾಣೆ, ಶ್ರೀಮಂತ ಕೋಳಕೂರ, ರಮೇಶ ಕೋಳಕೂರ, ಭೋಗೇಶ ಬಿರಾದಾರ, ಚಂದಣ್ಣ ಚಿತಲಿ, ಗುಂಡಪ್ಪ ಝಳಕಿ ಸೇರಿದಂತೆ ಅನೇಕ ಜನ ಭಾಗವಹಿಸಿದರು. ಅನೇಕ ಜನ ಸಂಗೀತ ಹಾಗೂ ಜನಪದ ಕಲಾವಿದರಿಂದ ಸಂಗೀತ ಸಂಭ್ರಮ ನೆರವೇರಿತು.