ಕಠಿಣ ಪರಿಶ್ರಮ ಫಲಪ್ರದ ಫಲಿತಾಂಶ ನೀಡುತ್ತದೆ: ಬಸವರಾಜ ಹೆಳವರ

ಕಲಬುರಗಿ: ಆ.17:ನಗರದ ಆಳಂದ ರಸ್ತೆಯಲ್ಲಿರುವ ಕೆ.ಹೆಚ್.ಬಿ ಗ್ರೀನ್ ಪಾರ್ಕ ಬಡಾವಣೆಯ ವಿದ್ಯಾರ್ಥಿ ತೇಜಸ್ವಿ ಸಂಗಮೇಶ ಸರಡಗಿ ಯಾವುದೇ ತರಬೇತಿ ಪಡೆಯದೆ ಸ್ವತಃ ಅಭ್ಯಾಸ ಮಾಡಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಬರೆದು, ಮೊದಲ ಸುತ್ತಿನ ಎಂಬಿಬಿಎಸ್ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಗಿಟ್ಟಿಸಿಕೊಂಡದ್ದಕ್ಕಾಗಿ ಗೆಳೆಯರ ಬಳಗದ ವತಿಯಿಂದ ಶುಭ ಹಾರೈಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಸವರಾಜ ಹೆಳವರ ಯಾಳಗಿ ಮಾತನಾಡಿ ಸಮಯ ಪ್ರಜ್ಞೆ, ಸತತ ಪ್ರಯತ್ನ ಹಾಗೂ ಸಾಧಿಸುವ ಚಲವಿದ್ದರೆ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬಹುದು. ಭವಿಷ್ಯದ ವೈದ್ಯಕೀಯ ಸೇವೆ ಬಡವರಿಗೆ ಹಾಗೂ ಗ್ರಾಮೀಣ ಮಟ್ಟಕ್ಕೆ ಮುಟ್ಟುವಂತಿರಲಿ ಎಂದರು.