ಕಠಿಣ ಪರಿಶ್ರಮವೇ ಯಶಸ್ಸಿನ ಸೂತ್ರ:ಯು.ಪಿ.ಎಸ್.ಸಿ ರ್ಯಾಂಕ್ ವಿಜೇತಸಂತೋಷ ಶಿರಾಡೋಣ

ಸಂಜೆವಾಣಿ ವಾರ್ತೆ,
ವಿಜಯಪುರ,ಏ.23:ಶಾಲೆಯಲ್ಲಿ ಕಲಿತ ವಿದ್ಯೆ ಮನೆಗೆ ಬಂದ ಮೇಲೂ ಸತತ ಪುನರಾವರ್ತನೆಯಾಗುತ್ತಿರಬೇಕು. ಸಾಮಾಜಿಕ ಜಾಲತಾಣದ ಬಳಕೆ ಓದಿಗೆ ಕುಂಠಿತಗೊಳಿಸದಂತಿರಬೇಕು. ಗುರು ಹಿರಿಯರು ಬೈದು ಹೇಳಿದ್ದÀನ್ನು ಬೇಸರಿಸಿಕೊಳ್ಳದೆ ನಮ್ಮ ಏಳಿಗೆಯ ಕುರಿತು ನೀಡುವ ಸಲಹೆ ಎಂದು ತಿಳಿದು ಸ್ವೀಕರಿಸಬೇಕು. ಸಾಧಕರಿಂದ ಸ್ಫೂರ್ತಿಗೊಂಡು ನಾವೂ ಕೂಡ ಸಮಾಜಕ್ಕೆ ಅನುಕರಣೀಯವಾಗುವಂತಹ ಭವ್ಯಸಾಧನೆಗಯ್ಯಬೇಕು ಯು.ಪಿ.ಎಸ್.ಸಿ ಸ್ಪರ್ಧಾತ್ಮಕ ಪರೀಕ್ಷೆಯಾಗಲಿ ಅಥವಾ ಶೈಕ್ಷಣಿಕ ಪರೀಕ್ಷೆಯೇ ಆಗಲಿ ನಿರಂತg Àಕಠಿಣ ಪ್ರಯತ್ನದಿಂದ ನಿರ್ಧಿಷ್ಟ ಗುರಿ ತಲುಪಲು ಸಾಧ್ಯ ಎಂದು ಯು.ಪಿ.ಎಸ್.ಸಿ ಯಲ್ಲಿ 641 ನೇ ಆಲ್ ಇಂಡಿಯಾ ರ್ಯಾಂಕಿಂಗ್ ವಿಜೇತ ಸಂತೋಷ ಶಿರಾಡೋಣ ನುಡಿದರು.
ವಿಜಯಪುರ ನಗರದ P.Éಎಸ್.ಆರ್À.ಟಿ.ಸಿ ಕಾಲನಿಯ, ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ 2024-25 ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿ.ಯು. ವಿದ್ಯಾರ್ಥಿಗಳ ‘ಸೇತುಬಂಧ’ (ಬ್ರಿಜ್‍ಕೋರ್ಸ್) ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಯ ಶೈಕ್ಷಣಿಕ ಜೀವನದಲ್ಲಿ ಪಿ.ಯು. ಶಿಕ್ಷಣ ತುಂಬಾ ಪ್ರಮುಖವಾದ ಹಂತ. ಹತ್ತನೆಯ ತರಗತಿಯವರೆಗೆ ಒಂದು ಲೆಕ್ಕವಾದರೆ, ಹತ್ತರ ನಂತರ ಇನ್ನೊಂದು ಲೆಕ್ಕ. ಉತ್ತಮ ಧ್ಯೇಯ, ಸಮರ್ಥ ಗುರುಗಳ ಮಾರ್ಗದರ್ಶನ ಹಾಗೂ ಕಲಿಕಾ ಸ್ನೇಹಿ ವಾತಾವರಣವಿದ್ದರೆ ಬೇಗ ಗುರಿ ತಲುಪಲು ಸಹಾಯಕಾರಿಯಾಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ವಿವಿಧ ವೃತ್ತಿಪರ ಕೋರ್ಸುಗಳಿಗೆ ರ್ಯಾಂಕ್ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತಿರುವ ಎಕ್ಸಲಂಟ್ ಕಾಲೇಜಿನ ಸೇವೆ ಅನುಕರಣೀಯವಾದುದು. ನಾನೂ ಕೂಡ ಇದೇ ಸಂಸ್ಥೆಯಲ್ಲಿ ನನ್ನ ಶಿಕ್ಷಣದ ಪ್ರಾಥಮಿಕ ಹಂತದಲ್ಲಿ ಸೈನಿಕ, ನವೋದಯ ಪರೀಕ್ಷೆಗಳಿಗಾಗಿ ಕೊಚೀಂಗ್ ಪಡೆದಿದ್ದು ನನ್ನ ಸೌಭಾಗ್ಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಕ್ಸಲಂಟ್ ಕಾಲೇಜಿನ 2018 ನೇ ಸಾಲಿನ ನೀಟ್, ಕೆ-ಸೆಟ್ ಪರೀಕ್ಷೆಯ ಪ್ರಥಮ ರ್ಯಾಂಕ್ ವಿಜೇತ ಹಾಗೂ ಪ್ರಸ್ತುತ ಎಂ.ಬಿ.ಬಿ.ಎಸ್‍ನಲ್ಲಿ ಬಂಗಾರ ಪದಕ ಪುರಸ್ಕøತ ಡಾ. ಶ್ರೀಧರ ದೊಡಮನಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆ ಮಾಡಬೇಕಾದರೆ ಶೈಕ್ಷಣಿಕ ವರ್ಷದ ಆರಂಭ ದಿನದಿಂದಲೇ ನಮ್ಮ ಪ್ರಯತ್ನ ಪ್ರಾರಂಭವಾಗಬೇಕು. ಬೋರ್ಡ ಪರೀಕ್ಷೆಗಳ ತಯಾರಿಯೊಂದಿಗೆ ಜೆಇಇ,ಕೆ-ಸೆಟ್, ನೀಟ್ ಮುಂತಾದ ವೃತ್ತಿಪರ ಕೋರ್ಸುಗಳ ತಯಾರಿ ಕೂಡ ಮಾಡಬೇಕು. ಎನ.ಸಿ.ಇ.ಆರ್.ಟಿ ಪಠ್ಯ ರಾಷ್ಟ್ರ ಮಟ್ಟದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಅನ್ವಯವಾಗುವಂತೆ ತಯಾರಿಸುತ್ತಾರೆ. ಮೇಲ್ನೋಟಕ್ಕೆ ಇದು ಕಠಿಣವೆನಿಸಿದರೂ ಗುರುಗಳ ಮಾರ್ಗದರ್ಶನದಿಂದ ಸಮರ್ಥವಾಗಿ ಅರ್ಥೈಸಿಕೊಂಡರೆ ಕಷ್ಟವಾಗದು. ನಿಮ್ಮದೇ ಅಭ್ಯಾಸದ ದಿನಚರಿಯನ್ನ ಹೊಂದಿರಬೇಕು. ನನ್ನ ಕನಸನ್ನು ನನಸಾಗಿಸಲು ಸುವರ್ಣಾವಕಾಶವನ್ನು ನೀಡಿದ ಎಕ್ಸಲಂಟ್ ಕಾಲೇಜಿನ ಮಾರ್ಗದರ್ಶನ ಮರೆಯಲಾರೆ. ನಿಮ್ಮ ಭವಿಷ್ಯದ ಕನಸು ಕೂಡ ಈಡೇರಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕÀ ಅಧ್ಯಕ್ಷ ಬಸವರಾಜ ಕೌಲಗಿ ಅವರು ಮಾತನಾಡಿ, ಯು.ಪಿ.ಎಸ್.ಸಿ ಯಲ್ಲಿ ರ್ಯಾಂಕ್ ಬರುವುದು ಸುಲಭದ ಮಾತಲ್ಲ. ರಾಷ ್ಟ್ರಮಟ್ಟದಲ್ಲಿ ಜಿಲ್ಲೆಗೆ ಉತ್ತಮ ರ್ಯಾಂಕ್ ನೀಡಿದ ಸಂತೋಷ ಶಿರಾಡೋಣ ಹಾಗೂ ಎಂ.ಬಿ.ಬಿ.ಎಸ್‍ನಲ್ಲಿ ಬಂಗಾರದ ಪದಕ ಪಡೆದ ಶ್ರೀಧರ ದೊಡಮನಿ ಇವರೀರ್ವರ ಸಾಧನೆ ನಮ್ಮ ವಿದ್ಯಾರ್ಥಿಗಳಿಗೆ ಅನುಕರಣೀಯ. ವಿದ್ಯಾರ್ಥಿಗಳು ಋಣಾತ್ಮಕವಾಗಿ ಚಿಂತಿಸದೆ ಧನಾತ್ಮಕ ಚಿಂತನೆಗಳ ಮೈಗೂಡಿಸಿಕೊಳ್ಳಬೇಕು. ಹಿಂದೆ ಏನಾದರೂ ಆಗಲಿ. ಮುಂದಿನ ನಿಮ್ಮ ಭವಿಷ್ಯದ ನಿರ್ಮಾತೃಗಳು ನೀವೇ. ನಿಮ್ಮೊಳಗೆ ಅರಿವು ಎನ್ನುವ ಗುರು ಇದ್ದರೆ ವಿಷಯವನ್ನು ಭೋದಿಸಲು ಹೊರಗಿನ ಗುರುವೃಂದವಿದೆ. ಪರೀಕ್ಷೆಯಾಗಲಿ, ಸಾಧನೆಯಾಗಲಿ ಸವಾಲಾಗಿ ಸ್ವೀಕರಿಸಬೇಕು. ಇಲ್ಲಿ ಯಾರೂ ಜಾಣರೂ ಇಲ್ಲ, ದಡ್ಡರೂ ಇಲ್ಲ. ಎಲ್ಲರಲ್ಲೂ ಪ್ರತಿಭಾ ಸಾಮಥ್ರ್ಯವಿರುತ್ತದೆ. ಆ ಪ್ರತಿಭೆ ಅನಾವರಣಗೊಳಿಸುವ ಜವಾಬ್ದಾರಿ ಶಾಲಾ ಕಾಲೇಜುಗಳ ಮೇಲಿದೆ. ಸಂತೋಷ ಶಿರಾಡೋಣ ನಮ್ಮ ಸಂಸ್ಥೆಯಲ್ಲಿ ಪ್ರಾಥಮಿಕ ಹಂತದ ಕೋಚಿಂಗ್ ಪಡೆದ ವಿದ್ಯಾರ್ಥಿಯಾದರೆ ಶ್ರೀಧರ ದೊಡಮನಿ ಕೂಡ ನಮ್ಮಲ್ಲಿ ಕೋಚಿಂಗ್‍ತರಬೇತಿ ಪಡೆದುದ್ದಲ್ಲದೆ ಪಿಯು ವರೆಗೆ ಓದಿ ಐತಿಹಾಸಿಕ ಸಾಧನೆಗೈದ ವಿದ್ಯಾರ್ಥಿ. ಈರ್ವರು ಸಾಧಕರತ್ನಗಳು ನಮ್ಮ ಸಂಸ್ಥೆಯ ಕೊಡುಗೆ ಎಂಬ ಹೆಮ್ಮೆ ನಮ್ಮದು ಎಂದರು.
ಸಂಸ್ಥೆ ಕೊಡ ಮಾಡಿದ ಸನ್ಮಾನ ಸ್ವೀಕರಿಸಿದ ಸಾಧಕರೀರ್ವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಅವರು ಕೇಳಿದÀ ಹಲವಾರು ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ನೀಡಿ ವಿದ್ಯಾರ್ಥಿಗಳಲ್ಲಿ ಚೈತನ್ಯ ಶಕ್ತಿ ತುಂಬಿದರು.
ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಆಕಾಂಕ್ಷಾ ಬಿ. ಪ್ರಾರ್ಥಿಸಿದಳು. ಉಪನ್ಯಾಸಕಿ ಶ್ರದ್ಧಾ ಜಾಧವ ಸ್ವಾಗತಿಸಿದರು. ಉಪನ್ಯಾಸಕ ಎಮ್. ಎಮ್. ಮಲಘಾಣ ನಿರೂಪಿಸಿದರು. ಆಡಳಿತಾಧಿಕಾರಿ ಪರಶುರಾಮ ಭಾವಿಕಟ್ಟಿ ವಂದಿಸಿದರು.