ಕಠಿಣ ಪರಿಶ್ರಮವಿಲ್ಲದೇ ಸಾಧನೆ ಮಾಡಲು ಸಾಧ್ಯವಿಲ್ಲ

ಸಂಜೆವಾಣಿ ವಾರ್ತೆ

ಜಗಳೂರು.ಡಿ.೩; ಕಠಿಣ ಪರಿಶ್ರಮವಿಲ್ಲದೇ ಸಾಧನೆ ಮಾಡಲು ಸಾಧ್ಯವಿಲ್ಲ , ಯಾವುದು ಸುಲಭವಾಗಿ ದೊರೆಯುವುದಿಲ್ಲ ಎಂದು ಜಿಲ್ಲಾ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ಹೇಳಿದರು. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಕಾಲೇಜು ಮತ್ತು ದಾವಣಗೆರೆ ಜಿಲ್ಲಾ ಪೋಲಿಸ್, ಗ್ರಾಮಾಂತರ ಪೋಲಿಸ್ ಠಾಣೆ ವತಿಯಿಂದ ಹಮ್ಮಿ ಹಮ್ಮಿಕೊಳ್ಳಲಾಗಿದ್ದ ತೆರೆದ ಮನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪೋಲಿಸ್ ಠಾಣೆಗಳು ಜನ ಸ್ನೇಹಿಯಾಗಿದೆ ಮೊದಲು ನಿಮ್ಮಲ್ಲಿ ಪೋಲಿಸರ ಬಗ್ಗೆ ಇರುವ ಭಯ ಬಿಡಬೇಕು. ನಿಮ್ಮ ಮೇಲೆ ದೌರ್ಜನ್ಯ ನಡೆದಾಗ ಖಂಡಿಸಬೇಕಾಗಿದೆ ಎಂದರು.ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು ಶಿಕ್ಷಣದಿಂದ ಮಾತ್ರ ಆತ್ಮಸ್ಥೈರ್ಯ ಬೆಳೆಸಿಕೊಳ್ಳಲು ಸಾಧ್ಯ ಎಂದರು. ನಿಮಗೆ ಆಸಕ್ತಿ ಇರುವ ಕ್ಷೇತ್ರದ ಕಡೆ ನಿಮ್ಮ ಗುರಿಯನ್ನು ಇಟ್ಟುಕೊಳ್ಳಿ ಆ ಗುರಿಯನ್ನು ತಲುಪಲು ಹೆಚ್ಚಿನ ಶ್ರಮ ಹಾಕಬೇಕು ಎಂದರು. ಕಠಿಣ ಪರಿಶ್ರಮ ವಿಲ್ಲದೇ ಸಾಧನೆ ಮಾಡಲು ಸಾಧ್ಯವಿಲ್ಲ ಮತ್ತು ಯಾವುದು ಸುಲಭವಾಗಿ ದೊರೆ ಯುವುದಿಲ್ಲ ಕಷ್ಟ ಪಟ್ಟರೇ ಮಾತ್ರ ದೊರೆ ಯಲಿದೆ. ಸಾಧಕರ ಜೀವನದ ಚರಿತ್ರೆ ಗಳನ್ನು ಓದಬೇಕು ಇದರಿಂದ ಉತ್ತಮ ಕೌಶಲ್ಯ ಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.ಡಿವೈಎಸ್‍ಪಿ ಬಸವರಾಜ ಮಾತನಾಡಿ ಮಹಿಳೆಯರು ಎಲ್ಲಾ ಕ್ಷೇತ್ರ ಗಳಲ್ಲಿಯು ಕೆಲಸ ನಿರ್ವಹಿಸುತ್ತಿದ್ದಾರೆ ನೀವು ಕೂಡ ಉತ್ತಮವಾಗಿ ಕಲಿತು ಗುರಿಯನ್ನು ಇಟ್ಟುಕೊಳ್ಳಬೇಕು. ಆ ಗುರಿಯನ್ನು ತಲುಪಲು ಶ್ರಮ ಹಾಕಬೆಕಾಗಿದೆ ಎಂದರು. ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಯನ್ನು ಹೊಂದಿ ಸಾಮಾಜಿಕ ಸೇವೆ ಮಾಡಲು ಸಹಕಾರಿಯಾಗಲಿದೆ ಎಂದರು.ಪಿಐ ಶ್ರೀನಿವಾಸ್ ರಾವ್ ಮಾತನಾಡಿ ಮಕ್ಕಳು ನಿರ್ಭಯವಾಗಿ ತಮ್ಮ ಮೇಲೆ ದೌರ್ಜನ್ಯವಾದಾಗ ಪೋಲಿಸ್ ಇಲಾಖೆಯ ಗಮಕ್ಕೆ ತರಬೇಕು, ಪೋಲಿಸ್ ಇಲಾಖೆಯ ಬಗ್ಗೆ ಮಕ್ಕಳಿಗಿರುವ ಭಯ ವನ್ನು ಹೋಗಲಾಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದರು. ವಿದ್ಯಾರ್ಥಿಯರು ಕಾಲೇಜಿಗೆ ಬರುವಾಗ ಯಾರದರು ಚೂಡಾಯಿಸು ವುದು, ಹಿಂಬಾಲಿಸುವುದು, ಮುಟ್ಟುವುದು ಮಾಡಿದರೆ ನೀವು ಸುಮ್ಮನಿರದೇ ಪೋಷ ಕರ ಗಮನಕ್ಕೆ ತರಬೇಕು 1 ವರ್ಷದಿಂದ 18 ವರ್ಷದ ವರೆಗಿನರನ್ನ ಮಕ್ಕಳೆಂದು ಭಾವಿಸಲಾಗುತ್ತಾದೆ ಇವರ ಮೇಲೆ ಲೈಂಗಿಕ ದೌರ್ಜನ್ಯಗಳದಾಗ ಪೋಕ್ಸೊ ಕಾಯ್ದೆ ಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ರಾಜೇಶ್ವರಿ , ಐಟಿಐ ಕಾಲೇಜು ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬೋದಕ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಜರಿದ್ದರು.