ಕಠಿಣ ಪರಿಶ್ರಮದಿಂದ ಸಾಧನೆ ಮಾಡಬಹುದು: ಅಮರಪ್ರಿಯ ಹಿರೇಮಠ

ಕಲಬುರಗಿ:ಅ.31:ಯಶಸ್ಸು ಅನ್ನೋದೊಂದು ಏಕಾಏಕಿ ಘಟಿಸುವ ಪವಾಡವಲ್ಲ, ಸತತ ಪ್ರಯತ್ನ, ಶ್ರಮಗಳಿದ್ದಲ್ಲಿ ಸಾಧನೆಯ ಶಿಖರವನ್ನೇರಬಹುದು ಎಂದು ಚಲನಚಿತ್ರ ಸಂಗೀತ ನಿರ್ದೇಶಕ ಅಮರಪ್ರಿಯ ಹಿರೇಮಠ ಹೇಳಿದರು.ಶ್ರೀ ಶರಣ ಬಸವೇಶ್ವರ ಕಲಾ,ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ, ಕನ್ನಡ ಜಾನಪದ ಪರಿಷತ್ ಕಲಬುರಗಿ ಉತ್ತರ ವಲಯದ ವತಿಯಿಂದ ಹಮ್ಮಿಕೊಂಡಿರುವ ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಹುಟ್ಟು ಹಬ್ಬದ ನಿಮಿತ್ಯ ಬಾಲ ಪ್ರತಿಭೆಗಳಿಗೆ ಬೆಳ್ಳಿ ಪದಕದೊಂದಿಗೆ “ಶರಣ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಮನೆಯಲ್ಲಿ ಉದಯಿಸುವ ಸೂರ್ಯ, ಓಡುವ ಕುದುರೆ ಚಿತ್ರ ಹಾಕಿದರೆ ಸಾಲದು, ಸೂರ್ಯ ಉದಯಕ್ಕಿಂತ ಮುಂಚೆ ಎದ್ದು ಶ್ರದ್ಧೆ ಭಕ್ತಿಯಿಂದ ಪರಿಶ್ರಮದಿಂದ ಕಾರ್ಯ ಮಾಡಿದರೆ ಉತ್ತಮವಾದ ಜೀವನ ರೂಪಿಸಿಕೊಳ್ಳಬಹುದು.ಇಂಥಹ ಸಾಲಿನಲ್ಲಿರುವ ಪ್ರತಿಭೆಗಳಿಗೆ ಕನ್ನಡ ಜಾನಪದ ಪರಿಷತ್ತು ಬೆಳ್ಳಿ ಪದಕ ನೀಡಿ ಪ್ರಶಸ್ತಿ ನೀಡಿ ಸಮಾಜಕ್ಕೆ ಪರಿಚಯಿಸುತ್ತಿರುವ ಕಾರ್ಯ ಶ್ಲಾಘನೀಯ ಕಾರ್ಯ ಎಂದು ಹೇಳಿದರು.ಶ್ರೀ ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿಯಾದ ಬಸವರಾಜ ದೇಶಮುಖ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಾ ಸಾಧನೆ ಎನ್ನುವುದು ಮೈಗಳ್ಳರ ಸೊತ್ತಲ್ಲ ಅದು ಅಕ್ಷರದೊಂದಿಗೆ ಉತ್ತಮ ಸಂಸ್ಕಾರಯುತ ಪ್ರತಿಭಾವಂತ ಮಕ್ಕಳ ಸೊತ್ತಾಗಿದೆ. ಬೆಳ್ಳಿ ಪದಕ ಪಡೆದು ಪ್ರಶಸ್ತಿ ತೆಗೆದುಕೊಳ್ಳುತ್ತಿರುವ ಮಕ್ಕಳು ನಾಳೆ ರಾಷ್ಟ್ರ ಹಾಗೂ ಅಂತರಾಷ್ಟ್ರ ಮಟ್ಟದಲ್ಲಿ ಬಂಗಾರ ಪದಕ ತೆಗೆದುಕೆuಟಿಜeಜಿiಟಿeಜಳ್ಳಲಿ.ಇಂತಹ ಪ್ರಶಸ್ತಿಗಳು ನೀಡುವುದರಿಂದ ಮಕ್ಕಳ ಸ್ಫೂರ್ತಿ, ಪೆÇ್ರೀತ್ಸಾಹ ಇಮ್ಮಡಿಗೊಳಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಜಾನಪದ ಪರಿಷತ್ ಉತ್ತರ ವಲಯದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತ ಸರಕಾರ ನೀಡುತ್ತಿರುವ ಪ್ರಶಸ್ತಿಗಳು ಯಾರದೇ ಶಿಫಾರಸು ಇಲ್ಲದೆ ನಿಜವಾದ ಕಲಾವಿದರಿಗೆ, ಸಮಾಜ ಸೇವಕರಿಗೆ, ಇತರ ಕ್ಷೇತ್ರಗಳಲ್ಲಿ ಪ್ರಾಮಾಣಿಕ ಸೇವೆ ಗೈಯುತ್ತಿರುವವರಿಗೆ ಗುರತಿಸಿ ಪ್ರಶಸ್ತಿ ನೀಡಬೇಕೆಂಬುದೆ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿದ ಶ್ರಿ?ನಿವಾಸ ಸರಡಗಿ ಪೂಜ್ಯರಾದ ಡಾ.ರೇವಣಸಿದ್ಧ ಶಿವಾಚಾರ್ಯ ಆಶೀರ್ವಚನ ನೀಡಿದರು.ಮುಖ್ಯ ಅತಿಥಿಗಳಾಗಿ ಕನ್ನಡ ಜಾನಪದ ಪರಿಷತ್ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಎಂ ಬಿ ನಿಂಗಪ್ಪ, ಶರಣಬಸವೇಶ್ವರ ಕಲಾ ವಾಣಿಜ್ಯ ವಿಜ್ಞಾನ ಮಹಾವಿದ್ಯಾಲಯ ಪ್ರಾಚಾರ್ಯರಾದ ಬಿ ಸಿ ಚವ್ಹಾಣ,ಶರಣಬಸವೇಶ್ವರ ಸಂಯುಕ್ತ ಪ್ರೌಢಶಾಲೆಯ ಮುಖ್ಯಗುರುಗಳಾದ ಡಾ. ಎನ್. ಮಡಿವಾಳಪ್ಪ, ಕನ್ನಡ ಜಾನಪದ ಪರಿಷತ್ ದಕ್ಷಿಣ ವಲಯದ ಕಾರ್ಯದರ್ಶಿಯಾದ ಸಿದ್ಧರಾಮ ತಳವಾರ, ಕಲ್ಯಾಣ ಕರ್ನಾಟಕ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ದಸರಥ ಧುಮ್ಮನಸೂರ್ ಆಗಮಿಸಿದರು. ಇದೇ ಸಂದರ್ಭದಲ್ಲಿ ಬಾಲ ಪ್ರತಿಭೆಗಳಾದ ರಕ್ಷಿತ ಮಠಪತಿ, ಅರ್ಪಿತಾ ಆರ್ ಬಿರಾದಾರ, ಗುರುರಾಜ ಮಳಖೇಡ, ಸಾಧನಾ ಯರಭಾಗ, ಮಹೇಶ ಮಾಲಿ ಪಾಟೀಲ, ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ಪೂಜ್ಯ ಚಿರಂಜೀವಿ ದೆuಟಿಜeಜಿiಟಿeಜಡ್ಡಪ್ಪ ಅಪ್ಪ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು. ಸಂಗಮೇಶ ಶಾಸ್ತ್ರಿ ಗಳು ಮಾಷಾಳ ಹಾಗೂ ಲಕ್ಷ್ಮಣ ಹೇರೂರ ಪ್ರಾರ್ಥಿಸಿದರು. ಕುಮಾರಿ ರಕ್ಷಿತಾ ಆರ್ ಹೆಬ್ಬಾಳ ನಿರೂಪಿಸಿ,ವಂದಿಸಿದರು. ಕಾರ್ಯಕ್ರಮದಲ್ಲಿ ಕಮಲಾಪುರದ ಹಿರಿಯ ಕಲಾವಿದರಾದ ಮಹಾಂತಯ್ಯ ಸ್ವಾಮಿ, ರಘುನಂದನ ಕುಲಕರ್ಣಿ, ಅಸ್ಲಾಂ ಶೇಖ್, ರಾಜು ಹೆಬ್ಬಾಳ, ಗೌಡೇಶ ಬಿರೆದಾರ, ಶ್ರವಣಕುಮಾರ ಮಠ, ಮಹೇಶ ತೆಲೆಕುಣಿ, ಬಸವರಾಜ ಮದರಿ,ಸಿದ್ದರಾಮ ಬಾಗಲಕೋಟ, ಎಚ್ ಬಿ ಪಾಟೀಲ, ನರಸಪ್ಪ ಬಿರಾದಾರ, ಸಂಗಮೇಶ ಸರಡಗಿ, ದಿಲೀಪಕುಮಾರ ಭಕರೆ, ರಮೇಶ ಕೋರಿಶೆಟ್ಟಿ ಹಾಗೂ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ವರ್ಗದವರು,ವಿದ್ಯಾರ್ಥಿಗಳು ಸೇರಿದಂತೆ ಅನೇಕ ಜನರು ಭಾಗವಹಿಸಿದ್ದರು.