ಕಠಿಣ ಪರಿಶ್ರಮದಿಂದ ತಹಸೀಲ್ದಾರನಾದ ಶಿಕ್ಷಕಿಯ ಪುತ್ರ ಮಹೇಶ ಪಾಟೀಲ ಗಾದಗಿ

ಬೀದರ,ಸೆ.9: ಬೀದರಿನ ಗಾದಗಿಯ ಮಧ್ಯಮ ವರ್ಗ ಕುಟುಂಬದ ಯುವಕ ಮಹೇಶ ಮಾಣಿಕರಾವ ಪಾಟೀಲ ಅವರು ನಿರಂತರ ಕಠಿಣ ಪರಿಶ್ರಮದಿಂದ ಯು.ಪಿ.ಎಸ್.ಸಿ. ಮತ್ತು ಕೆ.ಪಿ.ಎಸ್.ಸಿ. ಪರೀಕ್ಷೆಗಳನ್ನು ಬರೆದು ಗುರಿ ತಲುಪಿ ಇದೀಗ ತಹಸೀಲ್ದಾರ ಹುದ್ದೆ ಪಡೆದುಕೊಂಡಿದ್ದಾರೆ. ತಾಯಿ ಶ್ರೀಮತಿ ಶಶೀಕಲಾ ಅವರು ಬೀದರ ನಾವದಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ತಂದೆ ಕೃಷಿಕರಾಗಿದ್ದಾರೆ. ಇವರು 4 ಜನ ಅಣ್ಣಾ ತವi್ಮಂದಿರರಲ್ಲಿ ಮೋದಲಿಗ ಮಹೇಶ, ದ್ವಿತೀಯ ಡಾ. ಆಕಾಶ, ತೃತೀಯ ಡಾ. ರಾಜೇಶ್, ಚರ್ತುಥ ಉಮೇಶರಾಗಿದ್ದು, ಮಹೇಶ ಅವರು ಪ್ರಾಥಮಿಕ ಶಿಕ್ಷಣ ಬೀದರಿನ ದತ್ತಗಿರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ ಜಿ.ಎನ್. ಪಬ್ಲಿಕ ಶಾಲೆಯ ಪಿ.ಯು.ಸಿ. ಮಾತೇ ಮಾಣಿಕೇಶ್ವರಿ ಕಾಲೇಜಿನಲ್ಲಿ ಮುಗಿಸಿ ಬೆಂಗಳೂರಿನ ವಿಶ್ವವಿದ್ಯಾಲಯದ ಯು.ವಿ.ಸಿ.ಇ.ದಲ್ಲಿ 2014ರಲ್ಲಿ ಬಿ.ಇ. ಪದವಿ ಮೇಕ್ಯಾನಿಕಲ್ ಮುಗಿಸಿದ ಅವರು ಕೆಲ ತಿಂಗಳು ಕಂಪನಿಯಲ್ಲಿ ಕೆಲಸ ಮಾಡಿ 2016ರಿಂದ ಸಿವಿಲ್ ಸರ್ವಿಸಸ್ಸ್ ಕೋಚಿಂಗ್ ದಲ್ಲಿ ನಿರತರಾಗಿ ಪರೀಕ್ಷೆಗಳನ್ನು ಬರೆಯುತ್ತಾ ಸಾಗಿದರು. 2022ರಲ್ಲಿ ನಡೆದ ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕದಲ್ಲೇ ಪ್ರಥಮ ರ್ಯಾಂಕ್ ಪಡೆದು ತಹಸೀಲ್ದಾರರಾಗಿದ್ದಾರೆ.

ಇವರ ಸಾಧನೆಗೆ ಹೈಸ್ಕೂಲ್ ಮತ್ತು ಪಿ.ಯು. ಕಾಲೇಜಿನಬ ಗುರುಗಳಾದ ರಮೇಶ ಸರ್. ಎಂದೇ ಪ್ರಖ್ಯಾತಿ ಪಡೆದ ಮಾತೇ ಮಾಣಿಕೇಶ್ವರಿ ಕಾಲೇಜಿನ ಅಧ್ಯಕ್ಷರಾದ ರಮೇಶ ಕುಲಕರ್ಣಿ ಸರ್ ಅವರು ಹರ್ಷ ವ್ಯಕ್ತಪಡಿಸಿ ಮಹೇಶ್ ಕಾಲೇಜಿಗೆ ಸೈಕಲ್ ನಲ್ಲಿ ಬರುತ್ತಿದ್ದಾ ಅಂತ್ಯತ ಕಠಿಣಪರಿಶ್ರಮಿ, ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಮಹೇಶನಿಗೆ ತಹಸಿಲ್ದಾರ ಹುದ್ದೆ ಒದಗಿ ಬಂದಿದ್ದು ತನ್ನ ಸೇವೆ ಅವಧಿಯಲ್ಲಿ ಕರ್ತವ್ಯ ನಿಷ್ಠೆಯಿಂದ ಪ್ರಾಮಾಣಿಕವಾಗಿ ದಕ್ಷತೆಯಿಂದ ಕೆಲಸ ನಿರ್ವಹಿಸಿ ರಾಜ್ಯದ ಮಹಾ ಜನತೆಯ ಉತ್ತಮ ಸೇವೆ ಗೈದು ಕೀರ್ತಿ ತರಲಿ ಎಂದಿದ್ದಾರೆ. ತಾಯಿ-ತಂದೆಯವರು ಶುಭ ಹಾರೈಸಿದ್ದಾರೆ.