ಕಟ್ಲೆಗೆ ಹರ್ಷಿಕಾ ಸಾಥ್

ಪೋಷಕ ಪಾತ್ರಗಳಲ್ಲಿ ನಟಿಸಿ ಗಮನ ಸೆಳೆದ ಕೆಂಪೇಗೌಡ ಇದೇ ಮೊದಲ ಬಾರಿಗೆ ನಾಯಕನಾಗಿ “ ಕಟ್ಲೆ” ಮೂಲಕ ಕಾಣಿಸಿಕೊಂಡಿದ್ದು ಅದೃಷ್ಟ ಕಂಡುಕೊಳ್ಳಲು ಮುಂದಾಗಿದ್ಧಾರೆ. ಸೈಂಟಿಫಿಕ್ ಕಾಲ್ಪನಿಕ ಕತೆಯಲ್ಲಿ ಸೆಸ್ಪೆನ್ಸ್, ಥ್ರಿಲ್ಲರ್ ಅಂಶಗಳಿರುವ ಚಿತ್ರಕ್ಕೆ ಎಸ್ ಎಸ್ ವಿಧಾ ಆಕ್ಷನ್ ಕಟ್ ಹೇಳಿದ್ದಾರೆ.

ಕಟ್ಲೆ ಚಿತ್ರದಲ್ಲಿ ನಟಿ ಹರ್ಷಿಕಾ ಪೂಣಚ್ಚ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕೆಂಪೇಗೌಡ ಮತ್ತು ಅವರ ತಂಡಕ್ಕೆ ಬೆಂಲವಾಗಿ ನಿಂತಿದ್ಧಾರೆ. ಸರಿ ಸುಮಾರು 80ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಗಲ್ಲಿ ಕೆಂಪೇಗೌಡ ಕಾಣಿಸಿಕೊಂಡಿದ್ದು ನಾಯಕನಾಗಿ ನೆಲೆ ಕಂಡುಕೊಳ್ಳುವ ವಿಶ್ವಾಸದಲ್ಲಿ ತಯಾರಾಗುತ್ತಿರುವ ಚಿತ್ರ ಇದಾಗಿದೆ.

ಕಟ್ಲೆ ಸದ್ಯ ಮಾತಿನ ಭಾಗದ ಕೆಲಸ ನಡೆಯುತ್ತಿದ್ದು, ಸೆಪ್ಟಂಬರ್ ವೇಳೆಗೆ ಸೆನ್ಸಾರ್ ಅಂಗಳಕ್ಕೆ ಹೋಗುವ ಸಾದ್ಯತೆ ಇದೆ. ನಾಯಕಿಯಾಗಿ ಅಮೃತ ನಟಿಸಿದ್ದಾರೆ. ಶರಣ್ಯ, ಬಿರಾದಾರ್, ಎಂ.ಎಸ್.ಉಮೇಶ್, ಟೆನ್ನಿಸ್‍ಕೃಷ್ಣ, ಯತಿರಾಜ್, ಹರೀಶ್‍ರಾಜ್, ಪವನ್‍ಕುಮಾರ್, ಕರಿಸುಬ್ಬು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಭರತ್ ಗೌಡ ಬಂಡವಾಳ ಹಾಕಿದ್ದಾರೆ

ಡಾ.ವಿ.ನಾಗೇಂದ್ರಪ್ರಸಾದ್ ಮತ್ತು ಭರ್ಜರಿಚೇತನ್‍ಕುಮಾರ್ ಮತ್ತು ಕಿನ್ನಾಲ್‍ರಾಜ್ ಬರೆದಿರುವ ಗೀತೆಗಳಿಗೆ ಶ್ರೀಧರ್.ವಿ.ಸಂಭ್ರಮ್ ಸಂಗೀತ ನೀಡಿದ್ಧಾರೆ. ನಾಯಕಿಯಾಗಿ ಕನ್ನಡ ಸೇರಿದಂತೆ ವಿವಿಧ ಭಾಷೆಯಲ್ಲಿ ನಟಿಸುತ್ತಿರುವ ನಟಿ ಹೃಷಿಕಾ ಪೂಣಚ್ಚ ಇದೀಗ ಕಟ್ಲೆಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು,ಮೊದಲ ಬಾರಿಗೆ ನಾಯಕನಾಗುತ್ತಿರುವ ಕೆಂಪೇಗೌಡ ಮತ್ತು ಅವರ ತಂಡಕ್ಕೆ ಸಾಥ್ ನೀಡಿದ್ದಾರೆ. ಇದು ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ.